Tuesday, November 26, 2024
ಸುದ್ದಿ

ಹಳ್ಳದಲ್ಲಿ ಬಿದ್ದು ಮೃತಪಟ್ಟ ಯುವಕರ ಕುಟುಂಬಕ್ಕೆ ಪರಿಹಾರ ನೀಡಲು ಶಾಸಕ ಕಾಮತ್ ಮನವಿ – ಕಹಳೆ ನ್ಯೂಸ್

ಮಂಗಳೂರು : ಅಳಪೆ ಮಠದ ಪರಿಸರದಲ್ಲಿ ಭಾನುವಾರ ಸಂಜೆ ಆಕಸ್ಮಿಕವಾಗಿ ಕಾಲು ಜಾರಿ ಹಳ್ಳಕ್ಕೆ ಬಿದ್ದು ಮೃತಪಟ್ಟ ವೀಕ್ಷಿತ್ ಹಾಗೂ ವರುಣ್ ಅವರ ಕುಟುಂಬಕ್ಕೆ ಸರಕಾರ ಗರಿಷ್ಠ ಪರಿಹಾರ ನೀಡಬೇಕು ಎಂದು ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ್ ಕಾಮತ್ ಸರಕಾರವನ್ನು ಒತ್ತಾಯಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವೀಕ್ಷಿತ್ ಹಾಗೂ ವರುಣ್ ಹಳ್ಳದ ಬದಿಯಲ್ಲಿ ನಿಂತಿದ್ದಾಗ ಒಬ್ಬ ಯುವಕ ಆಕಸ್ಮಿಕವಾಗಿ ಬಿದ್ದಿದ್ದು ಆತನನ್ನು ಮೇಲಕ್ಕೆತ್ತುವ ಪ್ರಯತ್ನದಲ್ಲಿ ಮತ್ತೊಬ್ಬ ಕೂಡ ನೀರು ಪಾಲಾಗಿ ಮೃತಪಟ್ಟಿದ್ದು, ಇದು ಎರಡು ಕುಟುಂಬಗಳಿಗೆ ತೀವ್ರ ಆಘಾತವನ್ನುಂಟು ಮಾಡಿದೆ.

ಮೃತಪಟ್ಟ ಈ ಇಬ್ಬರು ಯುವಕರು ಕೂಡ ಖಾಸಗಿ ಕಂಪನಿಯಲ್ಲಿ ಸಣ್ಣಪುಟ್ಟ ಕೆಲಸ ನಿರ್ವಹಿಸಿಕೊಂಡು ಕುಟುಂಬಕ್ಕೆ ಆಧಾರಸ್ಥಂಭವಾಗಿದ್ದರು. ಇದೀಗ ಈ ಇಬ್ಬರ ಅಗಲುವಿಕೆಯಿಂದಾಗಿ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರ ಮಾನವೀಯ ನೆಲೆಯಲ್ಲಿ ಈ ಎರಡು ಕುಟುಂಬಗಳಿಗೆ ಗರಿಷ್ಠ ಪ್ರಮಾಣದ ಪರಿಹಾರ ಒದಗಿಸಿ ಕೊಡಬೇಕೆಂದು ಶಾಸಕ ಕಾಮತ್ ಮನವಿ ಮಾಡಿದ್ದಾರೆ.

ಎರಡೂ ಕುಟುಂಬಗಳು ನನಗೆ ಆತ್ಮೀಯರಾಗಿರುವ ಕಾರಣ ಮೃತಪಟ್ಟ ಕುಟುಂಬದ ಪರವಾಗಿ ಪರಿಹಾರಕ್ಕಾಗಿ ಸರಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ಈಗಾಗಲೇ ಪರಿಹಾರ ನೀಡುವ ಕುರಿತು ಜಿಲ್ಲಾಧಿಕಾರಿಗಳಲ್ಲೂ ಚರ್ಚೆ ನಡೆಸಿದ್ದು, ನಾಳೆ ಮುಖ್ಯಮಂತ್ರಿಗಳು ಮಂಗಳೂರಿಗೆ ಭೇಟಿ ನೀಡುವ ಸಂದರ್ಭದಲ್ಲಿ ಪರಿಹಾರ ನೀಡಬೇಕೆಂದು ಶಾಸಕ ಕಾಮತ್ ಹೇಳಿದರು.

ಯುವಕರು ಮುಳುಗಡೆಯಾದ ಹಳ್ಳವನ್ನು ಮುಚ್ಚಲು ಕಾಂಗ್ರೆಸ್ ಸರಕಾರ ಕ್ರಮ ಕೈಗೊಳ್ಳಬೇಕು. ಮತ್ತೆ ಘಟನೆ ಮರುಕಳಿಸದಂತೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಕಾಮತ್‌ ಸರಕಾರವನ್ನು ಆಗ್ರಹಿಸಿದ್ದಾರೆ.