ಸಾಮಾನ್ಯ ಜನತೆಗೆ ದಿನಂಪ್ರತಿ ದೈನಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ. ಈ ನಡುವೆ ಜನರಿಗೆ ಕೊಂಚ ಮಟ್ಟಿಗೆ ರಿಲೀಫ್ ನೀಡುವ ಸುದ್ದಿ ಇಲ್ಲಿದೆ. ಆಗಸ್ಟ್ 1 ರ ಮಂಗಳವಾರದಿಂದ ಜಾರಿಗೆ ಬರಲಿರುವ ಮಹತ್ವದ ನಿಯಮ ಬದಲಾವಣೆಗಳನ್ನು ಗಮನಿಸುವುದು ನಿರ್ಣಾಯಕವಾಗುತ್ತದೆ. ಈ ನಿಯಮಗಳು ಸಾಮಾನ್ಯ ಮನುಷ್ಯನ ಜೇಬಿನ ಮೇಲೆ ನೇರ ಪರಿಣಾಮ ಬೀರುತ್ತವೆ.
ಆಗಸ್ಟ್ 1 ರಂದು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ದೇಶೀಯ ಅನಿಲ ಮತ್ತು ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು ನವೀಕರಣ ಮಾಡುತ್ತವೆ. ಸದ್ಯ, ಎಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ ವ್ಯತ್ಯಾಸವಾಗಿದ್ದು, ಈ ಬಾರಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 100 ರೂ.ಗೆ ಇಳಿಕೆ ಮಾಡಲಾಗಿದೆ.ವಾಣಿಜ್ಯ ಅನಿಲ ಸಿಲಿಂಡರ್‍ನ ಹೊಸ ದರವನ್ನು ಆಗಸ್ಟ್ 1 ರಿಂದ ಜಾರಿಗೆ ತರಲಾಗಿದೆ.
ರಾಜಧಾನಿ ದೆಹಲಿಯಲ್ಲಿ 1103 ರೂ. ಆಗಿದ್ದು, ದೆಹಲಿಯಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ 1780 ರೂ.ನಿಂದ 1680 ರೂ.ಗೆ ಇಳಿಕೆ ಕಂಡಿದೆ. ಚೆನ್ನೈನಲ್ಲಿ ಬೆಲೆ 1945.00 ರಿಂದ 1852.50 ಕ್ಕೆ ಇಳಿಕೆ ಕಂಡಿದೆ.ಮುಂಬೈನಲ್ಲಿ 1733.50 ರೂ. ಇದ್ದ ಗ್ಯಾಸ್ ಸಿಲಿಂಡರ್ ಬೆಲೆ ಈಗ 1640.50 ರೂ.ಆಗಿದೆ. ಕೋಲ್ಕತ್ತಾದಲ್ಲಿ 1895.50 ರೂ.ಆಗಿದ್ದ ಬೆಲೆ ಈಗ 1802.50 ರೂ. ಗೆ ಇಳಿದಿದೆ.
ಇಂದು ಆಗಸ್ಟ್ ತಿಂಗಳ ಮೊದಲ ದಿನವಾಗಿದ್ದು, ತೈಲ ಕಂಪನಿಗಳು ಗಳ ಬೆಲೆಯಲ್ಲಿ ಭಾರಿ ಇಳಿಕೆ ಮಾಡಿದ್ದು, ಈ ಮೂಲಕ ಸಾಮಾನ್ಯ ಜನತೆ ಕೊಂಚ ಮಟ್ಟಿಗೆ ನೆಮ್ಮದಿ ಸಿಕ್ಕಿದೆ. ಜುಲೈನಲ್ಲಿ ಸಿಲಿಂಡರ್ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನತೆಗೆ ಇದೀಗ ಬೆಲೆಯಲ್ಲಿ ಇಳಿಕೆಯಾಗಿದ್ದು ಖುಶಿ ತಂದಿದೆ. ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಸಿಲಿಂಡರ್ ಗಳ ಬೆಲೆಯನ್ನು ಈ ಬದಲಾವಣೆಯಿಂದಾಗಿ, ದೇಶದ ರಾಜಧಾನಿ ನವದೆಹಲಿಯಲ್ಲಿ ಆಗಸ್ಟ್ 1 ರ ಬೆಳಿಗ್ಗೆ 100 ರೂ. 19 ಕೆಜಿ ವಾಣಿಜ್ಯ ಎಲ್‍ಪಿಜಿ ಗ್ಯಾಸ್ ಸಿಲಿಂಡರ್‍ಗೆ ಮೊದಲು 1780 ರೂಪಾಯಿ ಇದ್ದಲ್ಲಿ ಬೆಲೆ ಇಳಿಕೆ ಕಂಡು ಈಗ 1680 ರೂ ಆಗಿದೆ. ಈ ನಡುವೆ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂಬುದನ್ನು ಗಮನಿಸಬೇಕು.