ನಟಿ ದೀಪಿಕಾ ಪಡುಕೋಣೆ ಅವರು ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಹಂಚಿಕೊಂಡಿದ್ದು ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. ದೀಪಿಕಾ ಹಾಟ್ ಅವತಾರದಲ್ಲಿ ಫೊಟೋಗೆ ಪೋಸ್ ನೀಡಿದ್ದು, ಫ್ಯಾನ್ಸ್ ಮಾತ್ರವಲ್ಲದೇ ಪತಿ ರಣವೀರ್ ಸಿಂಗ್ ಕೂಡ ದಂಗಾಗಿದ್ದಾರೆ.
ದೀಪಿಕಾ ಪಡುಕೋಣೆ ಕಪ್ಪು-ಬಿಳಿ ಬಣ್ಣದ ಬಿಕಿನಿ ಧರಿಸಿ ಪೋಸ್ ನೀಡಿದ ಫೋಟೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಇದಕ್ಕೆ ‘ಒಂದಾನೊಂದು ಕಾಲದಲ್ಲಿ. ತುಂಬಾ ಹಿಂದೆ ಅಲ್ಲ’ ಎಂದು ಕ್ಯಾಪ್ಷನ್ ನೀಡಿದ್ದಾರೆ. ಈ ಫೋಟೋ ಒಂದು ಗಂಟೆಯೊಳಗೆ 7ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ.
ಯಾವ ಸೂಚನೆಯೂ ಇಲ್ಲದೇ ದಿಢೀರ್ ಅಂತ ಈ ರೀತಿ ಫೋಟೋ ಪೋಸ್ಟ್ ಮಾಡಿದ್ದು ನೋಡಿ ರಣವೀರ್ ಸಿಂಗ್ಗೆ ಅಚ್ಚರಿ ಆಗಿದ್ದು, ‘ಒಂದು ಎಚ್ಚರಿಕೆ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು’ ಎಂದು ಕಮೆಂಟ್ ಮಾಡಿದ್ದಾರೆ.