Thursday, November 28, 2024
ಸುದ್ದಿ

ಮಗಳನ್ನೆ ಅತ್ಯಾಚಾರವೆಸಗಿದ ಪಾಪಿ ತಂದೆ..! –ಕಹಳೆ ನ್ಯೂಸ್

ತಂದೆ ಮತ್ತು ಮಗಳ ಬಾಂದವ್ಯ ಅಂದ್ರೆ ಅದು ಎಂದೆಂದಿಗೂ ವಿಶೇಷ ಹಾಗೂ ಅತ್ಯಂತ ಪವಿತ್ರವಾದದ್ದು. ಆದ್ರೆ ಸ್ವತಃ ತಂದೆಯೇ ತಾನೂ ಸಾಕಿ ಸಲುಹಿದ ಮಗಳನ್ನ ಕೆಟ್ಟ ದೃಷ್ಟಿಯಿಂದ ನೋಡಿ ಅತ್ಯಾಚಾರ ಎಸಗಿರುವ ಪೈಶಾಚಿಕ ಕೃತ್ಯ ಜಿಲ್ಲೆಯ ಬೀದರ್‌ನ ಬಸವಕಲ್ಯಾಣ ತಾಲ್ಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಒಂದು ವರ್ಷದಿಂದ ಪುತ್ರಿಯ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡುತ್ತಿದ್ದ ಎನ್ನಲಾಗಿದೆ.

ವಿಚಾರ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿಯೂ ಆತ ಬೆದರಿಕೆ ಹಾಕಿದ್ದ. ಇದರಿಂದ ಭಯದಿಂದ ಪುತ್ರಿಯು ಜೀವಕ್ಕೆ ಹೆದರಿ ಮಾನಸಿಕವಾಗಿ ಯಾತನೇ ಅನುಭವಿಸುತ್ತಲೇ ಬಂದಿದ್ದಳು. ಕಳೆದ ಭಾನುವಾರ ರಾತ್ರಿ ತಂದೆ ಎಲ್ಲರೂ ಮಲಗಿರುವ ವೇಳೆ ಅತ್ಯಾಚಾರಕ್ಕೆ ಯತ್ನಿಸುತ್ತಿದ್ದಾಗ ಅಜ್ಜಿಯ (ಅತ್ಯಾಚಾರಿಯ ತಾಯಿ) ಕಣ್ಣಿಗೆ ಬಿದ್ದು, ಪ್ರಕರಣ ಬೆಳಕಿಗೆ ಬಂದಿದೆ.
ಈ ಕುರಿತು ಬಸವಕಲ್ಯಾಣ ಪೋಲಿಸ್ ಠಾಣೆಯಲ್ಲಿ ಪೋಕ್ಸೋ ಅಡಿ ಪ್ರಕರಣ ದಾಖಲಾಗಿದೆ.