Recent Posts

Sunday, January 19, 2025
ಸುದ್ದಿ

ನಾವು ನಿಜವಾಗಿಯೋ ಹಿಂದುಗಳಾ..!? : ಮುಲ್ಲಾ, ಪಾದರ್ ಬಿಷಪ್‌ಗಳಂತಲ್ಲ..…: ಪ್ರತಿ ಹಿಂದೂವೂ ಒಮ್ಮೆ ಇತ್ತ ಕಣ್ಣಾಡಿಸಿ ಸ್ವಾಮಿ.. – ಕಹಳೆ ನ್ಯೂಸ್

ಹಿಂದುತ್ವ, ಭಾರತಾಂಬೆಯ ರಕ್ಷಣೆ, ಹಿಂದೂ ಹೆಣ್ಣು ಮಕ್ಕಳ ರಕ್ಷಣೆ, ಸದಾ ಈ ಬಗ್ಗೆ ಮಾತನಾಡುವ ನಾವುಗಳು ನಿಜವಾಗಿಯೂ ಹಿಂದುಗಳಾಗಿಯೇ, ಕೇಸರಿ ಮಣ್ಣಿನ ಕಣ ಕಣವು ನಮ್ಮ ಬಿಸಿ ರಕ್ತದಲ್ಲಿ ಸದಾ ಹರಿಯುತ್ತಿದೆಯೇ..? ಹೌದು ಅನ್ನೋದಾದ್ರೆ, ಇನ್ನೂ ನಾವೇಕೆ ಹಿಂದುತ್ವಕ್ಕೆ ಸದಾ ದಕ್ಕೆಯಾಗುತ್ತಿದ್ದರು ನಮ್ಮ ಪಾಡಿಗೇ ನಾವಿದ್ದೇವೆ.. ಯಾರನ್ನು ಯಾವುದನ್ನು ಪ್ರಶ್ನಿಸದೆ ಸುಮ್ಮನಿದ್ದೇವೆ ಯಾಕೆ..? ವಿಶೇಷ ಆಮಂತ್ರಣಕ್ಕಾಗಿ ಕಾಯುತ್ತಿದ್ದೇವೆಯೇ..?

ಮುಸ್ಲಿಂ ಸಮುದಾಯಕ್ಕೆ,ಕ್ರೈಸ್ತ ಸಮುದಾಯಕ್ಕೆ ಕಿಂಚಿತ್ತು ಒಡಕಾದರೂ ಅವರ ಸಮಾಜ ಎಷ್ಟು ಒಟ್ಟಾಗಿದ್ದಾರೆ ನಿಮಗೆ ತಿಳಿದಿದೆಯೆ..?

ಜಾಹೀರಾತು
ಜಾಹೀರಾತು
ಜಾಹೀರಾತು

ಬುಧವಾರ ಮಣಿಪುರದ ಘಟನೆಯನ್ನು ಖಂಡಿಸಿ ಕ್ರೈಸ್ತರು ಬೀದಿಗಿಳಿಯಲಿದ್ದಾರೆ. ಬರ್ಮಾದಿಂದ ಅಕ್ರಮವಾಗಿ ಗಡಿ ನುಸುಳಿ ಬಂದು ಮಣಿಪುರದ ತುಂಬಾ ಅಶಾಂತಿ ಎಬ್ಬಿಸಿರುವ ಕುಕಿ ಜನಾಂಗ ಕ್ರೈಸ್ತ ಮತಾಂತರಿತರು ಎಂಬ ಏಕೈಕ ಕಾರಣದಿಂದ ಅವರ ಪರವಾಗಿ ಉಡುಪಿಯ ಕ್ರೈಸ್ತರು ಕಚ್ಚೆ ಕಟ್ಟಿದ್ದಾರೆ. ಅವರ ಕಿವಿ ಬಹಳ ಸೂಕ್ಷ್ಮ. ಸಾವಿರ ಮೈಲಿ ದೂರದಲ್ಲಿ ಒಬ್ಬ ಕ್ರೈಸ್ತನಿಗೆ ಅನ್ಯಾಯವಾದರೂ ಅದಕ್ಕೆ ಅವರ ಪ್ರತಿಕ್ರಿಯೆ ಇದೆ. ಅವರನ್ನು ಮೆಚ್ಚಲೇಬೇಕು. ಮೊನ್ನೆ ಆದಿತ್ಯವಾರ ಉಡುಪಿಯ ಎಲ್ಲಾ ಚರ್ಚುಗಳಲ್ಲಿ ಪ್ರತಿಭಟನೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಕಟ್ಟಾಜ್ಞೆಯಾಗಿದೆ. ಬಂದೇ ಬರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಹಿಂದುಗಳ ಬಳಿ ಈ ರೀತಿಯ ಒಂದು ವ್ಯವಸ್ಥೆ ಇದೆಯೇ..? ಖಂಡಿತ ಇಲ್ಲ . ಕ್ರೈಸ್ತರು ಮತ್ತು ಮುಸಲ್ಮಾನರ ಇಡೀ ಸಮುದಾಯವೇ ಒಂದು ಸಂಘಟನೆಯ ರೀತಿ ಕೆಲಸ ಮಾಡುತ್ತದೆ. ಅವರಿಗೆ ಚರ್ಚು ಮಸೀದಿಗಳೇ ಕಾರ್ಯಾಲಯ ಮುಲ್ಲಾ ಮೌಲ್ಯಗಳು ಪಾದರ್ ಬಿಷಪ್‌ಗಳೇ ಸಂಘಟನೆಯ ಸಂಚಾಲಕರು. ಅವರ ಸಮುದಾಯದ ಪ್ರತಿಯೊಬ್ಬನೂ ಕೂಡ ಆ ಸಂಘಟನೆಯ ಸದಸ್ಯ ಮತ್ತು ಕಡುನಿಷ್ಠ. ಆ ರೀತಿ ಒಗ್ಗಟ್ಟು ಇದ್ದ ಕಾರಣಕ್ಕೆ ಭಾರತದ 98 ಪ್ರತಿಶತ ರಾಜಕೀಯ ಪಕ್ಷಗಳು ಈ ಎರಡು ಜಾತಿಗಳ ಮುಂದೆ ಬಾಲಮುದುರಿ ನಾಲಿಗೆ ಹೊರ ಚೆಲ್ಲಿ ಜೊಲ್ಲು ಕಾರುತ್ತ ಕೂರುವುದು.

ಆದರೆ ನಮ್ಮ ಹಿಂದೂ ಸಮಾಜದಲ್ಲಿ ಸಂಘಟನೆ ಪ್ರತ್ಯೇಕವಾಗಿದೆ. ಸಮಾಜವೇ ಪ್ರತ್ಯೇಕವಾಗಿದೆ. ಒಂದಕ್ಕೊoದು ಸಂಬoಧವೇ ಇಲ್ಲದಂತೆ ಬದುಕುತ್ತಿದ್ದೇವೆ. ಸಂಘಟನೆ ಹೇಳಿದ್ದನ್ನು ಸಮಾಜ ಕೇಳಲೇ ಬೇಕೆಂದೇನೂ ಇಲ್ಲ. ಇಂದು ಇಷ್ಟೆಲ್ಲ ಹಿಂದೂ ಜಾಗೃತಿಯ ಕೆಲಸಗಳು ನಡೆಯುತ್ತಿದ್ದರೂ ನಮಗೆ ತಲುಪಲು ಸಾಧ್ಯವಾಗಿದ್ದು ಕೇವಲ 17 ಪ್ರತಿಶತ ಹಿಂದೂಗಳನ್ನು ಮಾತ್ರ! ಜಾತಿಗಳು ಅದರೊಳಗೆ ಒಳ ಜಾತಿಗಳು ಭಾಷೆ, ಪ್ರಾಂತ, ಪಂಥ, ರಾಜಕೀಯ ಭಿನ್ನಮತ ಹತ್ತಾರು ಸಂಘಟನೆಗಳು ನಮ್ಮಲ್ಲಿ ಅದೆಷ್ಟು ಒಡಕುಗಳು.?

ಗಾಜಾ ಪಟ್ಟಿಯಲ್ಲಿ ಮುಸಲ್ಮಾನರ ಮೇಲೆ ಇಸ್ರೇಲ್ ದಾಳಿ ಮಾಡಿದೆ ಎಂದು ನಮ್ಮೂರಿನ ಮೂರಕ್ಷರ ತಿಳಿಯದ ಮಯ್ಯದಿ ಇಂಗ್ಲೀಷ್ ಪ್ಲೇ ಕಾರ್ಡ್ ಹಿಡಿದು ಪ್ರತಿಭಟಿಸುತ್ತಾನೆ! ಮಣಿಪುರದಲ್ಲಿ ಕ್ರೈಸ್ತರ ಮೇಲೆ ದಾಳಿಯಾಗಿದೆ ಎಂದು ಕುಂಟರು ಕುರುಡರು ಹೆಳವರೆಲ್ಲ ಕಾಲೆಳೆದುಕೊಂಡು ಬಂದು ಬೀದಿಯಲ್ಲಿ ನಿಂತು ಪ್ರತಿಭಟಿಸುತ್ತಾರೆ.
ಆದರೆ ಕಾಶ್ಮೀರ ಬಂಗಾಳ ಕೇರಳ ಮುಂಬೈ ಡಿ ಜಿ ಹಳ್ಳಿ ಕೆಜೆ ಹಳ್ಳಿ , ಹುಬ್ಬಳ್ಳಿ, ಶಿವಮೊಗ್ಗ ಗುಜರಾತಿನಲ್ಲಿ ಹಿಂದುಗಳ ನರ ಮೇಧ ನಡೆದಾಗ ಪೂರ್ತಿ ಸಮಾಜ ಮೈಕೊಡವಿ ಮೇಲೆದ್ದು ಪ್ರತಿಭಟಿಸಿದ್ದೇನಾದರೂ ನಿಮಗೆ ನೆನಪಿದೆಯೇ ? ಈ ಸಮಾಜದ ಮುಂದೆ ವಿನಾಶಕಾರಿ ಕಂಟಕಗಳು ಹೆಡೆ ಅಗಲಿಸಿ ನಿಂತಿದ್ದರೂ ನೂರರಲ್ಲಿ 80ರಷ್ಟು ಹಿಂದುಗಳಿಗೆ ಇದರ ಬಗ್ಗೆ ಚಿಂತೆಯೇ ಇಲ್ಲ. ಹಿಂದುಗಳನ್ನು ಬಿಡಿಬಿಡಿಯಾಗಿ ಬಡಿದು ಬಾಯಿಗೆ ಹಾಕಿಕೊಳ್ಳುವ ಎಲ್ಲಾ ಯೋಜನೆ ಯೋಚನೆಗಳು ಸಿದ್ಧವಾಗಿದೆ.

ಈ ಸಮಾಜ ಹೆಚ್ಚೇನೂ ಮಾಡಬೇಕಾದದ್ದಿಲ್ಲ. ಬಿಡಿ ಬಿಡಿ ಆಗಿರುವವರೆಲ್ಲಾ ಒಮ್ಮೆ ಇಡಿಯಾಗಿ ಎದ್ದು ನಿಂತು ತಮ್ಮ ಶಕ್ತಿಯನ್ನು ಪ್ರದರ್ಶಿಸಿದರೂ ಸಾಕು. ಭಾರತದ ಇಸ್ಲಾಮಿಕರಣಕ್ಕೆ, ಕ್ರಿಸ್ತೀಕರಣಕ್ಕೆ ನಕಾಶೆ ಹರಡಿ ಕುಳಿತಿರುವ ಎಲ್ಲಾ ರಾಷ್ಟ್ರ ಘಾತಕರು ಅದನ್ನೆಲ್ಲಾ ತಡಬಡನೆ ಮಡಚಿ ಅಂಡಿನಡಿಗಿಟ್ಟುಕೊAಡು, ಜಾಗ ಖಾಲಿ ಮಾಡುತ್ತಾರೆ. ಉಡುಪಿಯ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ನಮ್ಮ ಹೆಣ್ಣು ಮಕ್ಕಳ ಬಾತ್ರೂಮ್ ವಿಡಿಯೋ ಚಿತ್ರಿಕರಣ ಮಾಡಿದ್ದು ಕೆಲವರಿಗೆ ಮಕ್ಕಳಾಟಿಕೆಯಂತೆ ಕಂಡಿದ್ದರೆ ಇನ್ನೂ ಕೆಲವರಿಗೆ ಕ್ಷುಲ್ಲಕ ಘಟನೆಯಾಗಿ ಕಂಡಿದೆ. ಒಂದು ವಾರದ ಹಿಂದೆ ಪಾಕಿಸ್ತಾನದ ಬೆಹರಂಪುರ್ ಯುನಿವರ್ಸಿಟಿಯಲ್ಲಿ ಇದೇ ರೀತಿಯ ವಿಡಿಯೋವನ್ನು ಬಳಸಿಕೊಂಡು ಸಾವಿರಾರು ಹೆಣ್ಣು ಮಕ್ಕಳನ್ನು ಬೆದರಿಸಿ ವೇಶ್ಯೆಯರ ರೀತಿ ಯಾರ್ಯಾರಿಗೋ ತಲೆ ಹಿಡಿದ ಘಟನೆ ಬೆಳಕಿಗೆ ಬಂದಿದೆ.

1992 ರಲ್ಲಿ ಅಜ್ಮೀರ್‌ನಲ್ಲಿ ನಡೆದಿದ್ದು ಕೂಡ ಇದೇ ರೀತಿಯ ಘಟನೆ. ಮೊನ್ನೆ ಮೂರು ಹುಡುಗಿಯರು ವಿಡಿಯೋ ಮಾಡಿ ಸಿಕ್ಕಿಬಿದ್ದಿರುವ ಘಟನೆ ನಮಗೆ ಕಾಣಿಸಿಕೊಂಡಿರುವ ನೀರ್ಗಲ್ಲ ತುದಿ ಅಷ್ಟೇ. ಇದರ ಆಳವನ್ನು ಬಗೆಯುವ ಕೆಲಸವಾಗಬೇಕು. ಆದರೆ ರಾಜ್ಯದಲ್ಲಿರುವ ದಂಗೆ ಕೋರರ ಸರಕಾರ ಈ ಪ್ರಕರಣವನ್ನು ಮುಚ್ಚಿ ಹಾಕಲು ಹರಸಾಹಸ ಪಡುತ್ತಿದೆ. ಈ ಭಂಡರಿಗೆ ಬಿಸಿ ಮುಟ್ಟಿಸಬೇಕಿದ್ದರೆ ಇದಕ್ಕೊಂದು ಸಂಘಟನಾತ್ಮಕವಾದ ಹೋರಾಟ ಅನಿವಾರ್ಯ.
ಹೀಗಾಗಿ ನಾಡಿನೆಲ್ಲೆಡೆ ಸದ್ಯ ಉಡುಪಿ ಶೌಚಾಲಯ ವಿಡಿಯೋ ಚಿತ್ರಿಕರಣ ಪ್ರಕರಣಕ್ಕೆ ವಿಶ್ವ ಹಿಂದೂ ಪರಿಷತ್ ಹಲವು ಕರೆ ಹೋರಾಟಕ್ಕೆ ಕರೆಕೊಟ್ಟಿದೆ. ನಾವೆಲ್ಲ ಜಾತಿ ಮತ ಪಕ್ಷ ಭೇದ ಮರೆತು ಸಮಾಜದ ಹಿತ ಚಿಂತನೆಯನ್ನು ಮುಂದಿಟ್ಟುಕೊAಡು ಎಲ್ಲೆ ಪ್ರತಿಭಟನೆ ನಡೆದರೂ ಬೃಹತ್ ಸಂಖ್ಯೆಯಲ್ಲಿ ಭಾಗವಹಿಸೋಣ.
ವಿಶ್ವ ಹಿಂದೂ ಪರಿಷದ್ ಬಜರಂಗದಳ ಉಡುಪಿ ಜಿಲ್ಲೆ ವತಿಯಿಂದ ಇದೇ ಆಗಸ್ಟ್ 03ರಂದು ಗುರುವಾರ ಬೃಹತ್ ಪ್ರತಿಭಟನೆ ನಡೆಯಲಿದೆ. ಜೋಡುಕಟ್ಟೆಯಿಂದ ಕ್ಲಾಕ್ ಟವರ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ನಾವೆಲ್ಲರೂ ಕೃಷ್ಣನೂರಿನ ಮಣ್ಣಿನಲ್ಲಿ ಒಂದಾಗೋಣ.. ಲವ್ ಜಿಹಾದಿನ ಕರಾಳ ಮುಖವನ್ನು ಬಯಲು ಮಾಡೋಣ. ನಮ್ಮ ಮನೆಯ ಹೆಣ್ಣು ಮಕ್ಕಳ ತಾಯಂದಿರ ಮಾನ ಹರಾಜು ಮಾಡಲು ಮುಂದಾದವರನ್ನು ಹೆಡೆಮುರಿ ಕಟ್ಟುವವರೆಗೆ ವಿರಮಿಸದಿರೋಣ..

ಜೈ ಮಹಾಕಾಲ್.