Sunday, January 19, 2025
ಸುದ್ದಿ

ಮನೆಯ ಮಹಡಿಯಿಂದ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು – ಕಹಳೆ ನ್ಯೂಸ್

ಬಂಟ್ವಾಳ : ಮನೆಯ ಮಹಡಿ ಮೇಲಿನಿಂದ ಆಕಸ್ಮಿವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಮಾಣಿ ಸಮೀಪದ ಗಡಿಯಾರ ಎಂಬಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಗಡಿಯಾರ ಸಮೀಪದ ಬಾನಗುಂಡಿ ನಿವಾಸಿ ಅಟೋ ರಿಕ್ಷಾ ಚಾಲಕ ಕಾಂತಪ್ಪ ಮೂಲ್ಯ ಮೃತಪಟ್ಟ ವ್ಯಕ್ತಿ ಕಾಂತಪ್ಪ ಮೂಲ್ಯ ಅವರು ಹೊಸ ಮನೆ ನಿರ್ಮಾಣ ಮಾಡುತ್ತಿದ್ದು, ಮನೆಯ ಮಹಡಿ ಮೇಲೆ ಹೋಗಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.

ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಸ್ಥಳದಲ್ಲಿಯೇ ಮೃತಪಟ್ಟಿರಬೇಕು ಎಂದು ವೈದ್ಯರು ತಿಳಿಸಿದ್ದಾರೆ.ಮೃತರ ಗೌರವಾರ್ಥ ಗಡಿಯಾರ ಪಾರ್ಕಿನ ಎಲ್ಲಾ ಅಟೋ ಚಾಲಕರು ಬಾಡಿಗೆ ನಡೆಸದೆ ಸಂತಾಪ ಸೂಚಿಸಿದರು.
ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಲಾಯಿತು.