Sunday, January 19, 2025
ಸುದ್ದಿ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು ತಾಲೂಕು ಪಂಚಾಯತ್ ಕಂದಾವರ ಗ್ರಾಮ ಪಂಚಾಯತ್ , ಸಾಹಸ್ N.G.O ಮಂಗಳೂರು ಇದರ ವತಿಯಿಂದ ಒಣಕಸ ಹಾಗೂ ಹಸಿಕಸ ತ್ಯಾಜ್ಯ ಸಂಗ್ರಹಣಾ ವಾಹನದ ಉದ್ಘಾಟನೆ – ಕಹಳೆ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು ತಾಲೂಕು ಪಂಚಾಯತ್ ಕಂದಾವರ ಗ್ರಾಮ ಪಂಚಾಯತ್ , ಸಾಹಸ್ N.G.O ಮಂಗಳೂರು ಇದರ ವತಿಯಿಂದ ಒಣಕಸ ಹಾಗೂ ಹಸಿಕಸ ತ್ಯಾಜ್ಯ ಸಂಗ್ರಹಣಾ ವಾಹನದ ಉದ್ಘಾಟನೆಯು, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ ವೈ ಭರತ್ ಶೆಟ್ಟಿ ಯವರ ನೇತೃತ್ವದಲ್ಲಿ, ಕಂದಾವರ ಗ್ರಾಮ ಪಂಚಾಯತ್ ನಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಮಾತಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ ಆಶಯದಂತೆ, ಸ್ವಚ್ಛ ಭಾರತ ಎನ್ನುವ ಕಲ್ಪನೆಯನ್ನು ಇಟ್ಟು ಮಾಡಿದಂತ ಈ ಯೋಜನೆಯು ಯಶಸ್ವಿಯಾಗಲೂ, ಪಕ್ಷ ಬೇಧ ಮರೆತು ಪ್ರತಿಯೊಬ್ಬ ಪಂಚಾಯತ್ ಸದಸ್ಯರು ಕೆಲಸ ಮಾಡಬೇಕು, ಕಂದಾವರ ಗ್ರಾಮ ಪಂಚಾಯತ್ ಮಾದರಿ ಪಂಚಾಯತ್ ಆಗುವಲ್ಲಿ ಎಲ್ಲಾ ಸದಸ್ಯರು ಶ್ರಮಿಸ ಬೇಕೆಂದು ತಿಳಿಸಿದರು ,ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಉಮೇಶ್ ಮೂಲ್ಯ,ಉಪಾಧ್ಯಕ್ಷರದ ಚಂದ್ರಿಕಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾವರದ ಸೌಮ್ಯ ಡಿ, ಉಪ ತಹಶೀಲ್ದಾರ್ ರಾದ ಶಿವ ಪ್ರಸಾದ್,ಪಂಚಾಯತ್ ಕಾರ್ಯದರ್ಶಿ ಜಲಜಾಕ್ಷಿ, ಕಂದಾವರ ಗ್ರಾಮ ಪಂಚಾಯತ್ ನ ಸದಸ್ಯರು,ಪಂಚಾಯತ್ ಸಿಬ್ಬಂದಿ ವರ್ಗದವರು,ಸಂಜೀವಿನಿ ಘಟಕದ ಸದಸ್ಯರು ಹಾಗೂ ಊರ ನಾಗರಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು,