Friday, January 24, 2025
ಬಂಟ್ವಾಳಸುದ್ದಿ

ಬಂಟ್ವಾಳ ನಗರ ಪೋಲೀಸ್ ಠಾಣೆಯ ಇನ್ಸ್ ಪೆಕ್ಟರ್ ವಿವೇಕಾನಂದ ಗೌಡ ಅವರನ್ನು ರಾಜ್ಯ ಗುಪ್ತ ವಾರ್ತೆಗೆ ವರ್ಗಾವಣೆ – ಕಹಳೆ ನ್ಯೂಸ್

ಬಂಟ್ವಾಳ: ರಾಜ್ಯ ಪೋಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ನಡೆದಿದ್ದು, ಪೋಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ ನಡೆದಿದೆ. ಬಂಟ್ವಾಳ ನಗರ ಪೋಲೀಸ್ ಠಾಣೆಯ ಪೋಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ ಗೌಡ ಅವರನ್ನು ರಾಜ್ಯ ಗುಪ್ತ ವಾರ್ತೆಗೆ ವರ್ಗಾವಣೆ ಮಾಡಿ ಸರಕಾರ ಅದೇಶ ಹೊರಡಿಸಿದೆ.

ಆದರೆ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ಮತ್ತೆ ಯಾರು ಇನ್ಸ್ ಪೆಕ್ಟರ್ ಎಂಬುದನ್ನು ತೋರಿಸದೆ ಖಾಲಿ ಬಿಟ್ಟಿದೆ. ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಹುದ್ದೆ ಕೂಡ ಖಾಲಿ ಇದೆ. ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಅವರ ಕಾರ್ಕಳ ವರ್ಗಾವಣೆ ಬಳಿಕ ಅಂದರೆ ಹೆಚ್ಚು ಕಮ್ಮಿ ಕಳೆದ ಒಂದು ವರ್ಷಗಳಿಂದ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪೋಲೀಸ್ ಇನ್ಸ್ ಪೆಕ್ಟರ್ ಇಲ್ಲದೆ ಖಾಲಿ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಸ್ತುತ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಕರ್ತವ್ಯ ಮಾಡುತ್ತಿದ್ದ ವಿವೇಕಾನಂದ ಅವರನ್ನು ವರ್ಗಾವಣೆಗೊಳಿಸಿದ ಇಲಾಖೆ ಗ್ರಾಮಾಂತರ ಮತ್ತು ನಗರ ಎರಡು ಪೋಲೀಸ್ ಠಾಣೆಗಳಿಗೂ ಪೋಲೀಸ್ ಇನ್ಸ್ ಪೆಕ್ಟರ್ ಗಳಿಲ್ಲದ ಸೊರಗುವ ಸ್ಥಿತಿ ಉಂಟಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು