Friday, January 24, 2025
ಸುದ್ದಿ

ಪತ್ನಿಯ ಟಾರ್ಚರ್ ಹೆಚ್ಚಾಯ್ತು ಮರ‍್ರೆ..: ಪ್ರಾಣವನ್ನೆ ಬಿಟ್ಟ ಪತಿ..! –ಕಹಳೆ ನ್ಯೂಸ್

ಪತ್ನಿ, ಆಕೆಯ ಪೋಷಕರ ಕಿರುಕುಳದಿಂದ ನವ ವಿವಾಹಿತ ಮನನೊಂದು ಸಾವಿಗೆ ಶರಣಾದ ಘಟನೆ ಚನ್ನರಾಯಪಟ್ಟಣ ತಾಲೂಕಿನ ಕರಿಯಪ್ಪನಗುಡಿ ಗ್ರಾಮದಲ್ಲಿ ನಡೆದಿದೆ.

ಉದಯಪುರ ಗ್ರಾಮದ ನವ ವಿವಾಹಿತ ಕಿರಣ್ ಬಿ.ಬಿ (೨೬) ಮೃತ ದುರ್ದೈವಿ. ದಂಡಿಗನಹಳ್ಳಿ ಹೋಬಳಿಯ ವಗರಹಳ್ಳಿ ಗ್ರಾಮದ ಸ್ಪಂದನಾ (೨೪)ಎನ್ನುವ ಯುವತಿಯನ್ನು ಕಿರಣ್ ಪ್ರೀತಿಸಿದ್ದು, ಕಳೆದ ಫೆಬ್ರವರಿಯಲ್ಲಿ ಆಕೆಯನ್ನು ಮದುವೆ ಕೂಡ ಆಗಿದ್ದ. ಜೀವನಕ್ಕಾಗಿ ಉದಯಪುರದಲ್ಲೇ ಬೇಕರಿ ನಡೆಸುತ್ತಿದ್ದನು. ಆದರೆ ಮದುವೆ ನಂತರ ಕಿರಣ್ ಪತ್ನಿ ಪ್ರತಿ ವಿಚಾರಕ್ಕೂ ಜಗಳ ತೆಗೆಯುತ್ತಿದ್ದಳು. ಮಾನಸಿಕ ಕಿರುಕುಳ ನೀಡುತ್ತಿದ್ದಳು ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪತ್ನಿಯ ತಂದೆ ವಾಸು, ತಾಯಿ ಗೀತಾ, ಅಜ್ಜಿ ರತ್ನಮ್ಮ ಅವರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರೆಂದು ಆರೋಪಿಸಲಾಗಿದೆ. ಕಿರಣ್ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿದ್ದ ಪತ್ನಿ ಜೈಲಿಗೆ ಕೂಡ ಹಾಕಿಸಿದ್ದಳು. ಇಷ್ಟಾದ ಮೇಲೂ ಕೆಲ ದಿನಗಳ ಹಿಂದೆ ಆಕೆಯ ಪೋಷಕರು ಬೇಕರಿ ಬಳಿಗೆ ಬಂದು ಜಗಳವಾಡಿದ್ದರು. ಹೀಗಾಗಿ ಮನನೊಂದ ಕಿರಣ್ ಸಾವಿಗೆ ಶರಣಾಗಿದ್ದಾನೆ. ಈ ಬಗ್ಗೆ ಹೊಳೇನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು