Thursday, January 23, 2025
ಕ್ರೈಮ್ಸುದ್ದಿ

ಪ್ರೇಮ ಕಾಮ ಅಂತ ಮಂಚಕ್ಕೆ ಕರೆಯುತ್ತಿದ್ದಳು : ಬಿಕಿನಿ ಸುಂದರಿಯ ಹನಿಟ್ರ್ಯಾಪ್ ಗೆ ಬಿದ್ದವರೆಷ್ಟು ಮಂದಿ..? – ಕಹಳೆ ನ್ಯೂಸ್

ಪ್ರೀತಿಯಲ್ಲಿ ಇರೋ ಸುಖ ಗೊತ್ತೆ ಇರಲಿಲ್ಲ ಅಂತ ಪ್ರೀತಿಯ ಬಲೆಗೆ ಬಿದ್ದು, ಬಳಿಕ ಪ್ರೇಮ ಕಾಮದ ಮೂಲಕ ಹೈಟೆಕ್ ಹನಿಟ್ರ‍್ಯಾಪ್ ನಡೆಸ್ತಾ ಇದ್ದ ಜಾಲವನ್ನ ಪುಟ್ಟೇನಹಳ್ಳಿ ಪೊಲೀಸರು ಭೇದಿಸಿದ್ದಾರೆ. ಖತರ್ನಾಕ್ ಗ್ಯಾಂಗ್ ಮೂವರು ಪೊಲೀಸರ ವಶವಾಗಿದ್ದು, ಇಬ್ಬರು ತಲೆಮರೆಸಿಕೊಂಡಿದ್ದಾರೆ.

ಟೆಲಿಗ್ರಾಮ್ ಮೂಲಕ ಮಿಕಾಗಳನ್ನು ಸಂಪರ್ಕ ಮಾಡುತ್ತಿದ್ದ ನೇಹಾ ಅಲಿಯಾಸ್ ಮೆಹರ್, ಸ್ನೇಹ ಮಾಡಿಕೊಂಡು ಬಳಿಕ ಪ್ರೀತಿ ಅಂತ ಹೇಳಿ ಲೈಂಗಿಕ ಕ್ರಿಯೆಗೆ ಕರೆಸಿಕೊಳ್ಳುತ್ತಿದ್ದಳು. ಆಕೆಯ ಮೋಹದ ಪಾಶಕ್ಕೆ ಬಿದ್ದು ಮೋಡಿಯಾದವರನ್ನು ಜೆಪಿ ನಗರ ಐದನೇ ಹಂತದಲ್ಲಿರುವ ಆಕೆಗೆ ಮನೆಗೆ ಕರೆಸಿಕೊಳ್ಳುತ್ತಿದ್ದಳು. ಇದನ್ನೆ ನಂಬಿ ಇಂದು ವಿಶೇಷ ಬಾಡೂಟ ಅಂತ ನಂಬಿ, ಆಕೆಯ ಮನೆಯ ಬೆಲ್ ಮಾಡ್ತಿದ್ದಂತೆ ಬಿಕಿನಿಯಲ್ಲಿ ಆಕೆ ಸ್ವಾಗತ ಕೋರುತ್ತಿದ್ದಳಂತೆ. ಆತ್ಮೀಯವಾಗಿ ತಬ್ಬಿ ಸ್ವಾಗತಿಸಿ ರತಿಕ್ರೀಡೆಗೆ ಮಂಚ ಏರುತ್ತಿದ್ದಳಂತೆ. ಅಷ್ಟರಲ್ಲೇ ಮನೆಯೊಳಗೆ ಅತಿಥಿಗಳು ಎಂಟ್ರಿ ಆಗುತ್ತಿದ್ದರು. ಬರುತ್ತಿದ್ದಂತೆಯೇ, ಆತನ ಫೋಮ್ ಕಸಿದುಕೊಂಡು ಸ್ನೆಹಿತರ ನಂಬರ್ ನೋಟ್ ಮಾಡಿಕೊಳ್ಳುತ್ತಿದ್ದರು. ಬಳಿಕ ಯುವತಿ ಜೊತೆಗಿನ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇಷ್ಟೆಲ್ಲ ಆದ ಬಳಿಕ ಹಣಕ್ಕಾಗಿ ಡಿಮ್ಯಾಂಡ್ ಮಾಡುತ್ತಿದ್ದರು. ಹಣ ಕೊಡದಿದ್ರೆ ವಿಡಿಯೋವನ್ನು ಸ್ನೇಹಿತರಿಗೆ, ಸಂಬAಧಿಕರಿಗೆ ಹಾಗೂ ಕುಟುಂಬಸ್ಥರಿಗೆ ಕಳುಹಿಸೋದಾಗಿ ಬೆದರಿಕೆ ಹಾಕುತ್ತಿದ್ದರು. ಅಷ್ಟಕ್ಕೂ ಬಗ್ಗದಿದ್ದರೆ ಯುವತಿ ಮುಸ್ಲಿಂ ಆಗಿದ್ದಾಳೆ, ಆಕೆಯನ್ನು ಮದುವೆ ಆಗುವಂತೆ ಡ್ರಾಮಾ ಮಾಡುತ್ತಿದ್ದರು. ಮದುವೆ ಆಗಬೇಕಾದರೆ ಕತ್ನಾ ಮಾಡಿಸಬೇಕು ಎಂದು ಧಮ್ಕಿ ಹಾಕಿ, ಇಸ್ಲಾಂ ಧರ್ಮಕ್ಕೆ ಕನ್ವರ್ಟ್ ಆಗುವಂತೆ ಬೆದರಿಕೆ ಹಾಕುತ್ತಿದ್ದರಂತೆ. ಈ ರೀತಿ ಬೆದರಿಸಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದರು ಎನ್ನಲಾಗಿದೆ.

ಇದೇ ರೀತಿ ಮೋಸ ಹೋಗಿದ್ದ ವ್ಯಕ್ತಿಯೊಬ್ಬ ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದ. ದೂರು ಆಧರಿಸಿ ತನಿಖೆಗೆ ಮುಂದಾಗಿದ್ದ ಪೊಲೀಸರು ಸ್ಫೋಟಕ ಮಾಹಿತಿಗಳನ್ನು ಕಲೆ ಹಾಕಿದ್ದಾರೆ.

ಸದ್ಯ ಶರಣ ಪ್ರಕಾಶ್ ಬಳಿಗೇರ, ಅಬ್ದುಲ್ ಖಾದರ್, ಯಾಸಿನ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ನದೀಮ್ ಮತ್ತು ಯುವತಿ ನೇಹಾ ಅಲಿಯಾಸ್ ಮೆಹರ್ ಎಸ್ಕೇಪ್ ಆಗಿದ್ದಾರೆ. ೨೦ ವರ್ಷ ಯುವಕರಿಂದ ಹಿಡಿದು ೫೦ ವರ್ಷದ ವ್ಯಕ್ತಿಗಳನ್ನೇ ಈ ಗ್ಯಾಂಗ್ ಟಾರ್ಗೆಟ್ ಮಾಡುತ್ತಿತ್ತು. ಇಲ್ಲಿಯವರೆಗೆ ೧೨ಕ್ಕೂ ಹೆಚ್ಚು ಜನರನ್ನು ಹನಿಟ್ರ‍್ಯಾಪ್ ಬಲೆಗೆ ಬೀಳಿಸಿದ್ದಾರೆ. ಒಟ್ಟು ೩೦ಕ್ಕೂ ಹೆಚ್ಚು ಲಕ್ಷ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ ಎನ್ನಲಾಗಿದೆ.