Sunday, November 24, 2024
ಬಂಟ್ವಾಳಸುದ್ದಿ

ವೀರಕಂಬ ಗ್ರಾಮ ಪಂಚಾಯತಿನ ಸಭಾಭವನದಲ್ಲಿ ನಡೆದ “ಆಟಿಡೊಂಜಿ ಕೂಟ” ಕಾರ್ಯಕ್ರಮ – ಕಹಳೆ ನ್ಯೂಸ್

ಬಂಟ್ವಾಳ : ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧಕ ಸಂಸ್ಥೆ, ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಬಂಟ್ವಾಳ “ಸ್ನೇಹ ಸಂಜೀವಿನಿ” ಗ್ರಾಮಮಟ್ಟದ ಒಕ್ಕೂಟ ವೀರಕಂಬ ಗ್ರಾಮ, ಗ್ರಾಮ ಪಂಚಾಯತ್ ವೀರಕಂಬ ಇವುಗಳ ಆಶಯದಲ್ಲಿ “ಆಟಿಡೊಂಜಿ ಕೂಟ” ಕಾರ್ಯಕ್ರಮವು ವೀರಕಂಬ ಗ್ರಾಮ ಪಂಚಾಯತಿನ ಸಭಾಭವನದಲ್ಲಿ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ದಿನೇಶ್ ಪೂಜಾರಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾಮ ಪಂಚಾಯತ್ ಸದಸ್ಯ ಶ್ರೀ ಅಬ್ದುಲ್ ರಹಿಮಾನ್ ಆಟಿ ತಿಂಗಳ ಮಹತ್ವ ಹಾಗೂ ಈ ಸಮಯದಲ್ಲಿ ಪೂರ್ವಿಕರು ಬಳಸುತ್ತಿದ್ದ ಆಹಾರ ಪದ್ಧತಿ ಬಗ್ಗೆ ಮಾಹಿತಿ ಹಂಚಿಕೊಂಡರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವೀರಕಂಬ ಗ್ರಾಮ ಒಕ್ಕೂಟ ಅಧ್ಯಕ್ಷ ಶ್ರೀಮತಿ ವಿಜಯ ಶೇಖರ್ ಗ್ರಾಮಮಟ್ಟದಲ್ಲಿ ಇಂತಹ ಕಾರ್ಯಕ್ರಮ ನಡೆಸುವ ಉದ್ದೇಶ ಹಾಗೂ ಮುಂದಿನ ವಾರ ತಾಲೂಕು ಮಟ್ಟದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೆಚ್ಚಿನ ಎಲ್ಲಾ ಸಂಜೀವಿನಿ ಸದಸ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿದರು.

ಈ ಸಂದರ್ಭದಲ್ಲಿ ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಬಳಸುತ್ತಿದ್ದ ಹಳೆ ಸಾಮಗ್ರಿಗಳ ನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಸಂಜೀವಿನಿ ಸದಸ್ಯರು ಪಾರ್ದನ ಹಾಗೂ, ನೇಜಿ ನಾಟಿ ಸಂದರ್ಭದಲ್ಲಿ ಹಾಡುತ್ತಿದ್ದ ಹಾಡನ್ನು ಹಾಡಿದರು. ಸ್ನೇಹ ಸಂಜೀವಿನಿ ಸದಸ್ಯರು ಆಟಿ ಸಂದರ್ಭದಲ್ಲಿ ಮಾಡುವ ತಿಂಡಿ ತಿನಸುಗಳನ್ನು ತಮ್ಮ ತಮ್ಮ ಮನೆಯಲ್ಲಿ ಮಾಡಿ ತಂದಿದ್ದು ಪರಸ್ಪರ ಹಂಚಿಕೊಂಡು ಸಂಭ್ರಮಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಸಂದೀಪ್, ಜಯಂತಿ, ಸ್ನೇಹ ಸಂಜೀವಿನಿ ವೀರಕಂಬ ಒಕ್ಕೂಟ ಕಾರ್ಯದರ್ಶಿ ಶ್ರೀಮತಿ ದೀಪ, ಎಂ ಬಿ ಕೆ ಮಲ್ಲಿಕಾ ಶೆಟ್ಟಿ, ಎಲ್ ಸಿ ಆರ್ ಜಯಂತಿ, ವೀರಕಂಬ ಗ್ರಾಮ ಪಶುಸಖಿ ಪ್ರಚೀನ, ಕೃಷಿಸಖಿ ವಿಜಯಲಕ್ಷ್ಮಿ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸ್ನೇಹ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರುಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವೀರಕಂಬ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ನಿಶಾಂತ್ ಬಿ ಆರ್, ಸ್ವಾಗತಿಸಿ ವಂದಿಸಿದರು,