Sunday, January 26, 2025
ಪುತ್ತೂರುಸುದ್ದಿ

ಊರಿಗೆ ತೆರಳಲು ಹಣ ಇಲ್ಲ ಎಂದು ಕಚೇರಿಗೆ ಬಂದ ಅಂಧ ಯುವಕನಿಗೆ ಕೇಳಿದಷ್ಟು ಹಣ ಕೊಟ್ಟ ಶಾಸಕ ಅಶೋಕ್ ರೈ – ಕಹಳೆ ನ್ಯೂಸ್

ಪುತ್ತೂರು : ನಾನು ಬೀದರ್ ಜಿಲ್ಲೆಯ ಬಾಲ್ಕಿ ನಿವಾಸಿ ಕಲ್ಲಪ್ಪ. ಊರು ಸುತ್ತುವ ಅಲೆಮಾರಿ ಯುವಕ, ನನ್ನಲ್ಲಿ ಉಚಿತ ಬಸ್ ಪಾಸ್ ಇತ್ತು ಅದನ್ನು ಕಳೆದುಕೊಂಡಿದ್ದೇನೆ. ನನಗೆ ಊರಿಗೆ ಹೋಗಲು ನನ್ನಲ್ಲಿ ನಯಾ ಪೈಸೆ ಇಲ್ಲ ನನಗೆ ಸಹಾಯ ಮಾಡಿ, ನೀವು ಬಡವರಿಗೆ ಸಹಾಯ ಮಾಡುತ್ತೀರಿ ಎಂದು ಯಾರೋ ನನ್ನನ್ನು ಇಲ್ಲಿಗೆ ತಂದು ಬಿಟ್ಟಿದ್ದಾರೆ. ದಯವಿಟ್ಟು ನನಗೆ ನೆರವು ನೀಡಿ ಎಂದು ಅಂಧ ಯುವಕ ಪುತ್ತೂರು ಶಾಸಕರ ಕಚೇರಿಯಲ್ಲಿ ಬಂದು ಕೇಳಿಕೊಂಡಿದ್ದಾನೆ.

ಯುವಕನ ನೋವನ್ನು ಆಲಿಸಿದ ಶಾಸಕರು ನಿನಗೆ ಎಷ್ಟು ಹಣ ಬೇಕು ನಾನು ಕೊಡುತ್ತೇನೆ. ಸುರಕ್ಷಿತವಾಗಿ ಊರಿಗೆ ಹೋಗಿ ಎಂದು ಅಂಧ ಯುವಕ ಊರಿಗೆ ಹೋಗಲು ಅವನು ಕೇಳದಷ್ಟು ಹಣ ನೀಡುವ ಮೂಲಕ ಮಾನವೀಯತೆ ಮೆರೆದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಎಲ್ಲಿಂದಲೋ ಬಂದ ಯುವಕ ಶಾಸಕರ ಬಳಿ ಹಣ ಕೇಳಿದಾಗ ಆತನ ಪೂರ್ವಾ ಪರ ವಿಚಾರಿಸದೆ ಆತ ಬಡವನಾದ ಕಾರಣ ನನ್ನ ಬಳಿ ಬಂದಿದ್ದಲ್ವ ಆತನಿಗೆ ಸಹಾಯ ಮಾಡುವುದು ನನ್ನ ಧರ್ಮ ಎಂದು ಶಾಸಕರು ಈ ವೇಳೆ ಹೇಳಿದರು. ಕಚೇರಿಯಲ್ಲಿ ಸೇರಿದ್ದ ಸಾರ್ವಜನಿಕರು ಶಾಸಕರ ಮಾನವೀಯತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು