ಪುತ್ತೂರು : ಮಾಣಿ-ಮೈಸೂರು ರಾ. ಹೆದ್ದಾರಿ 275ರ ಆರ್ಯಾಪು ಗ್ರಾಮದ ಸಂಪ್ಯ ಠಾಣೆಯ ಮುಂಭಾಗದಿಂದ ಸಂಟ್ಯಾರ್ ತನಕ ಹೆದ್ದಾರಿ ಬದಿಯಲ್ಲಿ ಚರಂಡಿ ಇಲ್ಲದ ಕಾರಣ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದ್ದು ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು.
ಸಂಪ್ಯದ ರಿಕ್ಷಾ ಚಾಲಕರು ಈ ಬಗ್ಗೆ ಶಾಸಕರಲ್ಲಿ ದೂರು ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕರು ಹೆದ್ದಾರಿ ಬದಿಯ ಚರಂಡಿಯನ್ನು ದುರಸ್ಥಿ ಮಾಡಿ ಮೋರಿ ಇಲ್ಲದ ಕಡೆ ಮೋರಿ ಅಳವಡಿಸಿ ಮಳೆ ನೀರು ರಸ್ತೆ ಬರುವುದನ್ನು ತಡೆಯುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದರು. ಶಾಸಕರ ಸೂಚನೆಯ ಬೆನ್ನಲ್ಲೇ ಚರಂಡಿ ಹೂಳೆತ್ತಿ , ಮೋರಿ ಅಳವಡಿಕೆ ಕಾಮಗಾರಿ ಆರಂಭಗೊಂಡಿದೆ. ಕಳೆದ ಐದು ವರ್ಷಗಳಿಂದ ಇಲ್ಲಿ ಚರಂಡಿ ಇಲ್ಲದೆ ಮಳೆ ನೀರು ರಸ್ತೆಗೆ ಹರಿದು ಬರುತ್ತಿತ್ತು.