Wednesday, January 22, 2025
ಕ್ರೈಮ್ರಾಜ್ಯಸುದ್ದಿ

ಬೆಂಗಳೂರಿನಲ್ಲಿ ಗಂಡ-ಹೆಂಡ್ತಿ ಜಗಳ : ಕೋಪದಿಂದ ಪತ್ನಿ ಕೈ ಬೆರಳನ್ನೇ ಕಚ್ಚಿತಿಂದ ಭೂಪ, FIR ದಾಖಲು – ಕಹಳೆ ನ್ಯೂಸ್

ಗಂಡ-ಹೆಂಡ್ತಿ ಜಗಳ ವಿಕೋಪಕ್ಕೆ ತಿರುಗಿ ಕೋಪದಿಂದ ಪತಿ ಮಹಾಶಯನೊಬ್ಬ ತನ್ನ ಪತ್ನಿಯ ಕೈ ಬೆರಳನ್ನೇ ಕಚ್ಚಿ ತಿಂದಿರುವ ವಿಲಕ್ಷಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು: ಗಂಡ-ಹೆಂಡ್ತಿ ಜಗಳ ವಿಕೋಪಕ್ಕೆ ತಿರುಗಿ ಕೋಪದಿಂದ ಪತಿ ಮಹಾಶಯನೊಬ್ಬ ತನ್ನ ಪತ್ನಿಯ ಕೈ ಬೆರಳನ್ನೇ ಕಚ್ಚಿ ತಿಂದಿರುವ ವಿಲಕ್ಷಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಕೊಣನಕುಂಟೆ (Konanakunte) ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗಂಡ-ಹೆಂಡತಿ ಜಗಳದ ವೇಳೆ ಪತಿರಾಯ ತನ್ನ ಪತ್ನಿಯ ಕೈ ಬೆರಳನ್ನೇ ಕಚ್ಚಿ ತಿಂದಿದ್ದಾನೆ. ಆರೋಪಿ ಪತಿಯನ್ನು ವಿಜಯಕುಮಾರ್ ಎಂದು ಗುರುತಿಸಲಾಗಿದ್ದು, ಸಂತ್ರಸ್ಥೆ ಪತ್ನಿ ಹೆಸರು ಪುಷ್ಪಾ ಎಂದು ಹೇಳಲಾಗಿದೆ.

ಆರೋಪಿಗಳ ಬಂಧಿಸಲು ಕೇರಳಕ್ಕೆ ತೆರಳಿ ಲಂಚ ಪಡೆದು ಸಿಕ್ಕಿಬಿದ್ದ ಬೆಂಗಳೂರಿನ 4 ಪೊಲೀಸರು, ಕೇರಳ ಪೊಲೀಸರ ವಶಕ್ಕೆ!
ಪೊಲೀಸರ ಪ್ರಕಾರ ಈ ಘಟನೆ ಜುಲೈ 28 ರಂದು ನಡೆದಿದೆ. ಪುಷ್ಪಾ ಎಂಬ ಮಹಿಳೆಯು ಗಂಡನ ಕಾಟ ತಾಳಲಾರದೇ ತನ್ನ ಮಗನ ಜೊತೆಗೆ ಬೇರೆ ಮನೆ ಮಾಡಿ ವಾಸವಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೂ ಕೂಡ ಆಕೆಗೆ ಗಂಡನ ಕಾಟದಿಂದ ಮುಕ್ತಿ ಸಿಕ್ಕಿರಲಿಲ್ಲ. ಅದರಂತೆ ಇಬ್ಬರು ಜಗಳ ಮಾಡುತ್ತಿದ್ದಾರೆ. ಈ ವೇಳೆ ಏಕಾಎಕಿ ಪತಿ ವಿಜಯಕುಮಾರ್ ಪತ್ನಿಯ ಬೆರಳನ್ನೇ ಕಚ್ಚಿ ತಿಂದಿದ್ದಾನೆ. ನಂತರ ನಿನ್ನನ್ನೂ ಕೂಡ ಕೊಂದು ಇದೇ ರೀತಿಯಾಗಿ ತಿನ್ನುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪುಷ್ಪಾ ಮತ್ತು ವಿಜಯ್​ಕುಮಾರ್​ಗೆ 23 ವರ್ಷಗಳ ಹಿಂದೆ ಮದುವೆಯಾಗಿತ್ತು. ಮದುವೆಯಾದ ಕೆಲ ವರ್ಷಗಳಿಂದ ಪತ್ನಿಗೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಈ ಹಿನ್ನಲೆ ಗಂಡನಿಂದ ಬೇಸತ್ತು ತನ್ನ ಮಗನ ಜೊತೆ ಬೇರೆಡೆ ಮನೆ ಮಾಡಿಕೊಂಡಿದ್ದರು. ಕಳೆದ ತಿಂಗಳ ಜುಲೈ 28ನೇ ತಾರೀಖು ಪತಿ ವಿಜಯಕುಮಾರ್ ಪತ್ನಿ ಇದ್ದ ಮನೆಗೆ ಹೋಗಿ ಜಗಳ ತೆಗೆದಿದ್ದ. ಈ ವೇಳೆ ಪತ್ನಿಯ ಎಡಗೈ ಬೆರಳನ್ನೇ ಕಚ್ಚಿ ಕಚ್ಚಿ ತಿಂದಿದ್ದಾನಂತೆ. ಅಲ್ಲದೇ ರೌಡಿಶೀಟರ್​ಗಳನ್ನ ಬಿಟ್ಟು ಕೊಲೆ ಬೆದರಿಕೆ ಹಾಕಿರುವ ಆರೋಪದ ಮೇಲೆ ಪತ್ನಿ ಪುಷ್ಪ ಸದ್ಯ ಪತಿಯ ವಿರುದ್ಧ ಕೋಣನಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.