Thursday, January 23, 2025
ಕ್ರೈಮ್ಬೆಳ್ತಂಗಡಿಸುದ್ದಿ

‘3 ಲಕ್ಷ ಕೊಡು ಇಲ್ಲದಿದ್ರೆ ಗಂಡನನ್ನ ಸಾಯಿಸುತ್ತೇನೆ’ : ಟೆಲಿಗ್ರಾಂನಲ್ಲಿ ಶಿಕ್ಷಕಿಯನ್ನ ಬೆದರಿಸುತ್ತಿದ್ದ ಖದೀಮನನ್ನ ಸಿನಿಮೀಯ ರೀತಿಯಲ್ಲಿ ಬಂಧನ –ಕಹಳೆ ನ್ಯೂಸ್

ವೇಣೂರು: ಟೆಲಿಗ್ರಾಂ ನಕಲಿ ಖಾತೆಯ ಮೂಲಕ ಸಂದೇಶ ಕಳುಹಿಸಿ ಒಂದು ಲಕ್ಷ ಹಣವನ್ನು ವಸೂಲಿಗೈದಿದ್ದ ವಂಚಕನನ್ನು ವೇಣೂರು ಪೊಲೀಸರು ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಗ್ರಾಮದ ಅಂಟ್ರಿoಜ ನಿವಾಸಿ ಅಶ್ವತ್ ಹೆಬ್ಬಾರ್ (23) ಪ್ರಕರಣದ ಆರೋಪಿಯಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಘಟನೆಯ ಹಿನ್ನೆಲೆ ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಗ್ರಾಮದ ನಿವಾಸಿ, ಪೆರೋಡಿತ್ತಾಯಕಟ್ಟೆ ಶಾಲೆಯ ಶಿಕ್ಷಕಿ ಜ್ಯೋತಿ ಅವರಿಗೆ ನಕಲಿ ಟೆಲಿಗ್ರಾಂ ಖಾತೆಯ ಮೂಲಕ ರೂ. ಮೂರು ಲಕ್ಷ ಕೊಡುವಂತೆ ಬೇಡಿಕೆ ಇಟ್ಟು ಹಣವನ್ನು ನೀಡದಿದ್ದರೆ ಗಂಡನನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಈ ಬಗ್ಗೆ ಜ್ಯೋತಿ ಅವರು ವೇಣೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದರು. ಕಾರ್ಯಾಚರಣೆಗಿಳಿದ ವೇಣೂರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕಿ ಸೌಮ್ಯ ಜೆ, ಆನಂದ ಎಂ. ಪೊಲೀಸರ ತಂಡ ಆ.2ರ ಮಧ್ಯರಾತ್ರಿ ತೆಂಕಕಾರAದೂರು ಗ್ರಾಮದ ಗುಂಡೇರಿ ಎಂಬಲ್ಲಿoದ ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

3 ಲಕ್ಷದ ಬದಲಿಗೆ ರೂ. ಒಂದು ಲಕ್ಷ ನೀಡುವುದಾಗಿ ಆರೋಪಿಯನ್ನು ಟೆಲಿಗ್ರಾಂನಲ್ಲಿ ಒಪ್ಪಿಸಿ, ಅದರಂತೆ ಆರೋಪಿ ದಿನಾಂಕ 2.8.2023 ರಂದು ಸಂಜೆ ಅಳದಂಗಡಿ ಕೆದ್ದು ಸಮೀಪ ಹಣವನ್ನು ಎಸೆದು ಹೋಗುವಂತೆ ಸೂಚಿಸಿದ್ದ. ಬಳಿಕ ಅಲ್ಲಿ ಎಸೆಯಬೇಡಿ ಎಂದು ಸಂದೇಶ ರವಾಣಿಸಿ ಬೇರೊಂದು ಸ್ಥಳವನ್ನು ಸೂಚಿಸಿದ್ದ. ಹೀಗೆ ಮೂರು-ನಾಲ್ಕು ಬಾರಿ ಸ್ಥಳವನ್ನು ಬದಲಾಯಿಸುತ್ತಾ ಮೆಸೇಜ್ ಮಾಡುತ್ತಿದ್ದ ಆರೋಪಿ ಶಿರ್ಲಾಲು ಸವಣಾಲು ಕ್ರಾಸ್ ಬಳಿ ಹಣವನ್ನು ವಾಹನದಿಂದ ಬಿಸಾಡಿ ಹೋಗುವಂತೆ ತಿಳಿಸಿದ್ದು, ಅದರಂತೆ ಹಣದ ಕಟ್ಟನ್ನು ಬಿಸಾಡಿ ಹೋಗಿದ್ದರು. ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿ ಕಟ್ಟನ್ನು ಪಡೆದುಕೊಳ್ಳುವಷ್ಟರಲ್ಲಿ ಮೊದಲೇ ಕಾದುಕುಳಿತ್ತಿದ್ದ ಪೊಲೀಸರು ಹಿಡಿಯಲು ಯತ್ನಿಸಿದ್ದಾರೆ. ಆದರೆ ಅಚಾನಕ್ ಆಗಿ ತಪ್ಪಿಸಿಕೊಂಡಿದ್ದ ಆರೋಪಿ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದ, ಕ್ಷಿಪ್ರ ಕಾರ್ಯಾಚರಣೆಗಿಳಿದ ಪೊಲೀಸರು ತಡರಾತ್ರಿ ಆತನ ಅಣ್ಣನ ಮನೆ ಗುಂಡೇರಿ ಸಮೀಪ ದಸ್ತಗಿರಿ ಮಾಡಿ ಆತ ವಸೂಲಿ ಮಾಡಿದ್ದ ಒಂದು ಲಕ್ಷ ನಗದು, ಕೃತ್ಯಕ್ಕೆ ಉಪಯೋಗಿಸಿದ ಬೈಕನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು