Thursday, January 23, 2025
ಸುದ್ದಿ

ಹಸುವಿನ ಹೊಟ್ಟೆಯಲ್ಲಿದ್ದ ಬರೋಬ್ಬರಿ 30 ಕೆಜಿ ಪ್ಲಾಸ್ಟಿಕ್ ಹೊರ ತೆಗೆದ ಒಡಿಶಾದ ವೈದ್ಯರು – ಕಹಳೆ ನ್ಯೂಸ್

ಒಡಿಶಾ : ಪ್ಲಾಸ್ಟಿಕ್ ಪರಿಸರಕ್ಕೆ, ಜೀವಜಾಲಕ್ಕೆ ಎಷ್ಟು ಹಾನಿಕಾರಕ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ರಸ್ತೆ ಬದಿ, ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯುವ ಪ್ರವೃತ್ತಿ ನಿಲ್ಲಿಸುವುದಿಲ್ಲ. ಅದರ ಪರಿಣಾಮವಾಗಿ ಒಡಿಶಾದ ಹಸುವೊಂದರ ಹೊಟ್ಟೆಯಲ್ಲಿ ಬರೋಬ್ಬರಿ 30 ಕೆಜಿ ತೂಕದ ಪ್ಲಾಸ್ಟಿಕ್ ವಸ್ತುಗಳು ಪತ್ತೆಯಾಗಿವೆ.

ಒಡಿಶಾದ ಬೆಹಾರ್ಂಪುರದ ಸರಕಾರಿ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಸುಮಾರು 4 ಗಂಟೆಗಳ ಕಾಲ ಆಪರೇಷನ್ ನಡೆಸಿ ವೈದ್ಯರು ಇಷ್ಟೊಂದು ತೂಕದ ಪ್ಲಾಸ್ಟಿಕ್ ಅನ್ನು ಹಸುವಿನ ಹೊಟ್ಟೆಯಿಂದ ಹೊರ ತೆಗೆದಿದ್ದಾರೆ. ಸತ್ಯ ನಾರಾಯಣ ಕರ್ ನೇತೃತ್ವದ ಪಶು ವೈದ್ಯರ ತಂಡ ಈ ಸಾಹಸ ಕಾರ್ಯ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೊಟ್ಟೆಯೊಳಗೆ ಸೇರಿದ್ದ ಪ್ಲಾಸ್ಟಿಕ್ ಜೀರ್ಣವಾಗದೆ ಹಸು ಒದ್ದಾಡುತ್ತಿತ್ತು. ಮಲ, ಮೂತ್ರ ವಿಸರ್ಜನೆ ಸಮರ್ಪಕವಾಗಿ ಆಗದೆ ಹಸುವಿನ ಹೊಟ್ಟೆ ಊದಿಕೊಂಡಿತ್ತು. ನಿಲ್ಲಲೂ ಸಾಧ್ಯವಾಗದ ಹಸುವನ್ನು ಗಮನಿಸಿದ ಸಾರ್ವಜನಿಕರು ಅಧಿಕಾರಿಗಳಿಗೆ ತಿಳಿಸಿ ಆಸ್ಪತ್ರೆಗೆ ಕೊಂಡೊಯ್ದಿದ್ದರು. ಸದ್ಯ ಹಸು ಆರೋಗ್ಯದಿಂದಿದ್ದು, ವಾರಗಳ ಕಾಲ ಆಸ್ಪತ್ರೆಯಲ್ಲಿಯೇ ಅದನ್ನು ಆರೈಕೆ ಮಾಡಲಾಗುತ್ತದೆ ಎಂದು ಗಂಜಾಂನ ಮುಖ್ಯ ಜಿಲ್ಲಾ ಪಶು ವೈದ್ಯಾಧಿಕಾರಿ ಮನೋಜ್ ಕುಮಾರ್ ಸಾಹು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

”ಆಸ್ಪತ್ರೆಗೆ ಕರೆ ತಂದಾಗ ಹಸುವಿನ ಸ್ಥಿತಿ ಚಿಂತಾಜನಕವಾಗಿತ್ತು. ನೋವಿನಿಂದ ಒದ್ದಾಡುತ್ತಿತ್ತು. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಶೇಖರಣೆಯಾಗಿರುವುದು ಕಂಡು ಬಂತು” ಎಂದು ವೈದ್ಯರು ತಿಳಿಸಿದ್ದಾರೆ.