Thursday, January 23, 2025
ಸುದ್ದಿ

18 ವರ್ಷಗಳ ದಾಂಪತ್ಯಕ್ಕೆ ಕೊನೆ ಹಾಡಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ – ಕಹಳೆ ನ್ಯೂಸ್

ಕೆನಡಾ : ಮತ್ತೊಂದು ಸೆಲೆಬ್ರಿಟಿ ಜೋಡಿಯ ದಾಂಪತ್ಯ ಜೀವನ ಅಂತ್ಯವಾಗಿದ್ದು, ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ತಮ್ಮ ಪತ್ನಿ ಸೋಫಿಯಾ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ 18 ವರ್ಷಗಳ ಸಂಬಂಧ ಮುರಿದು ಬಿದ್ದಂತಾಗಿದೆ.

51ರ ಹರೆಯದ ಟ್ರುಡೊ ಮತ್ತು 48 ವರ್ಷದ ಸೋಫಿಯಾ 2005ರ ಮೇಯಲ್ಲಿ ವಿವಾಹವಾಗಿದ್ದರು. ಸದ್ಯ ಈ ದಂಪತಿ ವಿಚ್ಛೇದನಕ್ಕೆ ಸಂಬಂಧಿಸಿದ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನೂ ಪೂರ್ತಿಗೊಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಟ್ರುಡೊ ಮತ್ತು ಸೋಫಿಯಾ ಮಕ್ಕಳನ್ನು ಸುರಕ್ಷಿತ, ಉತ್ತಮ ವಾತಾವರಣದಲ್ಲಿ ಬೆಳೆಸಲು ತೀರ್ಮಾನಿಸಿದ್ದಾರೆ. ಮುಂದಿನ ವಾರದಿಂದ ಟ್ರುಡೊ ಮತ್ತು ಸೋಫಿಯಾ ಕುಟುಂಬ ಜೊತೆಯಲ್ಲಿ ರಜೆಯನ್ನು ಕಳೆಯಲಿದ್ದಾರೆ ಎಂದು ಪ್ರಧಾನಿ ಕಚೇರಿಯ ಮೂಲಗಳು ತಿಳಿಸಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು