Monday, January 20, 2025
ಪುತ್ತೂರುಸುದ್ದಿ

ಇನ್ಮುಂದೆ ಟೊಪ್ಪಿ ಹೆಲ್ಮೆಟ್ ಧರಿಸಿಕೊಂಡು ವಾಹನ ಚಲಾಯಿಸಿದರೆ ದಂಡ ಗ್ಯಾರಂಟಿ – ಕಹಳೆ ನ್ಯೂಸ್

ಪುತ್ತೂರು: ಅಪಘಾತ ಸಂದರ್ಭ ತಲೆಯನ್ನು ರಕ್ಷಿಸುವ ದೃಷ್ಟಿಯಿಂದ ಹೆಲ್ಮೆಟ್ ಧಾರಣೆಯನ್ನು ಈಗಾಗಲೇ ಕಡ್ಡಾಯ ಮಾಡಲಾಗಿದೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಅರ್ಧ ಹೆಲ್ಮೆಟ್ ಧಾರಣೆಗೆ ಮತ್ತು ಐ.ಎಸ್.ಐ ಮಾರ್ಕ್ ಇಲ್ಲದ ಹೆಲ್ಮೆಟ್ ಗಳಿಗೂ ಪುತ್ತೂರಿನಲ್ಲೂ ಶೀಘ್ರವೇ ಮುಕ್ತಿ ಸಿಗಲಿದೆ.

ಹೆಲ್ಮೆಟ್ ಕಡ್ಡಾಯ ಮಾಡುತ್ತಿದ್ದಂತೆ, ವಿವಿಧ ವಿನ್ಯಾಸದ ಹೆಲ್ಮೆಟ್‍ಗಳು ಮಾರುಕಟ್ಟೆ ಪ್ರವೇಶಿಸಿದ್ದವು. ದ್ವಿಚಕ್ರ ವಾಹನ ಸವಾರರು ವೈವಿಧ್ಯಮಯವಾದ ಹೆಲ್ಮೆಟ್‍ಗಳನ್ನು ಧರಿಸಿಕೊಂಡು ಓಡಾಡುವುದನ್ನು ಕಾಣಬಹುದು. ಇದರಲ್ಲಿ ಕೆಲವಷ್ಟೇ ಭದ್ರತೆಯನ್ನು ನೀಡಿದರೆ, ಉಳಿದವುಗಳು ಕೇವಲ ಫ್ಯಾಷನ್‌ಗಷ್ಟೇ ಸೀಮಿತವಾಗಿವೆ. ಇಂತಹ ಹೆಲ್ಮೆಟ್‍ಗಳು ಜೀವಕ್ಕೆ ಭದ್ರತೆಯನ್ನು ನೀಡುವಲ್ಲಿ ವಿಫಲವಾಗಿವೆ. ಇದರಲ್ಲಿ ಅರ್ಧ ಹೆಲ್ಮೆಟ್‍ಗಳು ಕೂಡ ಒಂದು.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಐ.ಎಸ್.ಐ ಮಾರ್ಕ್ ಇಲ್ಲದ ಹೆಲ್ಮೆಟ್ ಗಳು ಅಪಘಾತದ ಸಂದರ್ಭದಲ್ಲಿ ಸವಾರನಿಗೆ ರಕ್ಷಣೆ ನೀಡುವುದಿಲ್ಲ ಬದಲಾಗಿ ಇದು ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಹಲವರು ಐ.ಎಸ್.ಐ ಮಾರ್ಕ್ ಇಲ್ಲದ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅರ್ಧ ಹೆಲ್ಮೆಟ್‍ಗಳು ಮುಖದ ಭಾಗಕ್ಕೆ, ಕತ್ತಿನ ಭಾಗಕ್ಕೆ ಹಾಗೂ ತಲೆಯ ಎರಡು ಬದಿಗಳಿಗೆ ರಕ್ಷಣೆಯನ್ನು ನೀಡುವುದಿಲ್ಲ. ಅಪಘಾತ ಸಂಭವಿಸಿದಾಗ ಮುಖದ ಹಾಗೂ ತಲೆಯ ಹಿಂಬದಿ ಭಾಗಕ್ಕೆ ಗಂಭೀರ ಗಾಯಗಳಾಗುವ ಸಾಧ್ಯತೆಗಳೇ ಅಧಿಕ. ಈ ಎಲ್ಲಾ ದೃಷ್ಟಿಯಿಂದ ಅರ್ಧ ಹೆಲ್ಮೆಟ್‍ಗಳಿಗೆ ಮುಕ್ತಿ ನೀಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳು ತಲೆಕೆಡಿಸಿಕೊಂಡಿದ್ದಾರೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಕೆಲವೇ ದಿನಗಳಲ್ಲಿ ಪುತ್ತೂರಿನಲ್ಲಿ ಅರ್ಧ ಹೆಲ್ಮೆಟ್‍ಗಳಿಗೆ ಮತ್ತು ಐ.ಎಸ್.ಐ ಮಾರ್ಕ್ ರಹಿತ ಹೆಲ್ಮೆಟ್ ಗಳಿಗೆ ಮುಕ್ತಿ ಸಿಗುವುದು ಪಕ್ಕಾ. ಫ್ಯಾಶನ್ ಬದಲು ವಾಹನ ಸವಾರರ ಜೀವ ಉಳಿಸಲು ಒತ್ತು ನೀಡಬೇಕು ಎನ್ನುವ ಆಶಯ ಇದರ ಹಿಂದಿದೆ.