Monday, January 20, 2025
ಕ್ರೈಮ್ಸುದ್ದಿ

ಅಡುಗೆ ಮಾಡುತ್ತಿದ್ದ ಸಹೋದರನ ಪತ್ನಿಯ ಮೇಲೆರಗಿದ ಕಾಮುಕ ಜಾಫರ್​ಖಾನ್ ಗೆ 10 ವರ್ಷ ಜೈಲು, 50 ಸಾವಿರ ರೂ. ದಂಡ ವಿಧಿಸಿದ ಫಾಸ್ಟ್​ ಟ್ರ್ಯಾಕ್​ ಸ್ಪೆಷಲ್​ ಕೋರ್ಟ್ – ಕಹಳೆ ನ್ಯೂಸ್

ಕೊಚ್ಚಿ: ಸಹೋದರನ ಪತ್ನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಆರೋಪಿಗೆ ಫಾಸ್ಟ್​ ಟ್ರ್ಯಾಕ್​ ಸ್ಪೆಷಲ್​ ಕೋರ್ಟ್​ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ.

ಜಾಫರ್​ಖಾನ್​ (48) ಶಿಕ್ಷೆಗೆ ಗುರಿಯಾದ ಆರೋಪಿ. ಈತ ಕೇರಳದ ಕಟ್ಟಕಾಡದ ನಿವಾಸಿ.

ಜಾಹೀರಾತು
ಜಾಹೀರಾತು
ಜಾಹೀರಾತು

10 ವರ್ಷಗಳ ಶಿಕ್ಷೆಯ ಜತೆಗೆ 50 ಸಾವಿರ ರೂ. ದಂಡವನ್ನು ವಿಧಿಸಲಾಗಿದೆ. ಒಂದು ವೇಳೆ ದಂಡವನ್ನು ಪಾವತಿಸಲು ಸಾಧ್ಯವಾಗದಿದ್ದರೆ, ಅದರ ಬದಲಾಗಿ ಹೆಚ್ಚುವರಿ ಐದು ತಿಂಗಳು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಪ್ರಾಸಿಕ್ಯೂಷನ್ ಪರವಾಗಿ ವಕೀಲ ಡಿ.ಆರ್. ಪ್ರಮೋದ್ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಘಟನೆ ಹಿನ್ನೆಲೆ ಏನು?

ಅಂದಹಾಗೆ ಈ ಘಟನೆ 2015ರಲ್ಲಿ ನಡೆದಿತ್ತು. ಗಂಡನ ಮನೆಯ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸಂಚು ಮಾಡಿ ಆರೋಪಿ ಜಾಫರ್​ ಖಾನ್​ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದ. ತನ್ನ ಸ್ವಂತ ಸಹೋದರನ ಮಡಿಯ ಮೇಲೆಯೇ ಕಾಮುಕ ಕ್ರೌರ್ಯ ಮೆರೆದಿದ್ದ. ಬಳಿಕ ಈ ಸಂಬಂಧ ದೂರು ದಾಖಲಾಗಿ ಆರೋಪಿಯನ್ನು ಬಂಧಿಸಲಾಗಿತ್ತು.

ಕಟ್ಟಕ್ಕಾಡ ಇನ್ಸ್‌ಪೆಕ್ಟರ್‌ಗಳಾದ ಟಿ. ಬಿನು ಕುಮಾರ್ ಮತ್ತು ಒಎ ಸುನೀಲ್ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ 16 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ನಿರಂತರ ವಿಚಾರಣೆ ಬಳಿಕ ಆರೋಪಿಯ ಕೃತ್ಯ ಸಾಬೀತಾಗಿದ್ದು, ಇದೀಗ ನ್ಯಾಯಾಲಯ ಶಿಕ್ಷೆಯನ್ನು ಪ್ರಕಟಿಸಿದೆ.

(ಏಜೆನ್ಸೀಸ್​)