ಪುತ್ತೂರು : ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆಗಳಲ್ಲಿ ಒಂದಾಗಿರುವ ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನ ಪುತ್ತೂರು ಹಾಗೂ ಸುಳ್ಯ ಶಾಖೆಗಳಲ್ಲಿ ಆ.07 ರಿಂದ 15ವರೆಗೆ “ಆಟಿ ಸೇಲ್” ನಡೆಯಲಿದೆ.
ಪುತ್ತೂರಿನ ನೂತನ ಮಳಿಗೆಯಲ್ಲಿ ನಡೆಯಲಿರುವ ಆಟಿ ಸೇಲ್ ನಲ್ಲಿ ಪ್ರತೀ ಗ್ರಾಂ ಚಿನ್ನಾಭರಣಗಳ ಮೇಲೆ ರೂ. 100/- ರವರೆಗೆ ರಿಯಾಯಿತಿ ಇದ್ದು, ಪ್ರತೀ ಕ್ಯಾರೆಟ್ ವಜ್ರಾಭರಣಗಳ ಮೇಲೆ ರೂ. 5,000/-ದವರೆಗೆ ರಿಯಾಯಿತಿ ಹಾಗೂ ಪ್ರತಿ ಕಿಲೋ ಗ್ರಾಂ ಬೆಳ್ಳಿ ಆಭರಣಗಳ ಮೇಲೆ ರೂ. 2,000/- ರಿಯಾಯಿತಿ ಇದೆ.
ಆಟಿ ಸೇಲ್ ಮೂಲಕ ಗ್ರಾಹಕರನ್ನು ತನ್ನತ್ತಾ ಆಕರ್ಷಿಸುತ್ತಿರುವ ಪುತ್ತೂರಿನ ಪ್ರಸಿದ್ಧ ಚಿನ್ನಾಭರಣಗಳ ಮಳಿಗೆಯಾದ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಸಾವಿರಾರು ಹೊಸ ಹೊಸ ಬಗೆಯ ವಿನ್ಯಾಸದ ನೆಕ್ಲೆಸ್ಗಳು, ಪ್ರಾಚಿ ಎಂಬ ಹೆಸರಿನ ಆ್ಯಂಟಿಕ್ ಆಭರಣಗಳು, ವಜ್ರಾಭರಣಗಳು, ಮಕ್ಕಳ, ಮಹಿಳೆಯರ ಹಾಗೂ ಪುರುಷರ ನಾನಾ ಅಭಿರುಚಿಗೆ ಒಪ್ಪುವಂತಹ ಆಭರಣಗಳ ಮಹಾಪೂರ ಕಲೆಕ್ಷನ್ ಇದೆ.
ವಿಶಾಲವಾದ ವಾಹನ ಪಾರ್ಕಿಂಗ್ ಹಾಗೂ ನಗುಮೊಗದ ಸೇವೆಯೊಂದಿಗೆ ಸಂಪೂರ್ಣ ಪಾರದರ್ಶಕ ವ್ಯವಹಾರ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ನ ವೈಶಿಷ್ಟ್ಯ.
ಇಲ್ಲಿ ಗ್ರಾಹಕರಿಗೆ ತಮ್ಮ ಮನದಿಚ್ಚೆಯ ಆಭರಣಗಳ ಆರಾಮದಾಯಕ ಆಯ್ಕೆಗಾಗಿ ಚಿನ್ನ, ಬೆಳ್ಳಿ ಹಾಗೂ ವಜ್ರಾಭರಣಗಳಿಗೆ ಪ್ರತ್ಯೇಕ ವಿಭಾಗಗಳಿವೆ. ಗ್ರಾಹಕರ ಅನುಕೂಲಕ್ಕಾಗಿ ಜಿಎಲ್ ಆಚಾರ್ಯ ಪುತ್ತೂರು ಮಳಿಗೆ ಭಾನುವಾರದಂದು ತೆರೆದಿರುತ್ತದೆ.