Recent Posts

Monday, January 20, 2025
ಸುದ್ದಿ

ಪುತ್ತೂರಿನ ನಿವಾಸಿ ಅಭಿಷೇಕ್ ಮೇಲೆ ಕಾಂಗ್ರೇಸ್ ಮುಖಂಡನಿಂದ ಹಲ್ಲೆ : ಪ್ರದೀಪ್ ರೈ ವಿರುದ್ಧ ಎಫ್‌ಐಆರ್ ದಾಖಲು – ಕಹಳೆ ನ್ಯೂಸ್

ಪುತ್ತೂರಿನ ನಿವಾಸಿ ಅಭಿಷೇಕ್ ಎಂಬವರ ಮೇಲೆ ಕಾಂಗ್ರೇಸ್ ಮುಖಂಡ ಪಾಂಬಾರು ಪ್ರದೀಪ್ ರೈ ಹಲ್ಲೆ ಮಾಡಿರುವ ಘಟನೆ ನಡೆದಿದ್ದು, ಇದೀಗ ಪ್ರದೀಪ್ ರೈ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಟ್ವಾಳ ತಾಲೂಕಿನ ಅಮ್ಟೂರು ಗ್ರಾಮದ ಜೊಗೊಟ್ಟು ನಿವಾಸಿ ಅಭಿಶೇಕ್(24) ಮೇಲೆ ಪ್ರದೀಪ್ ಹಲ್ಲೆ ಮಾಡಿದ್ದು ಘಟನೆ ನಡೆದ ಮರುದಿನವೇ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇದೀಗ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

18.07.2023ರಂದು ರಾತ್ರಿ ಅಭಿಶೇಕ್ ಕೆಲಸ ಮುಗಿಸಿ ಬಂಟ್ವಾಳದ ಮನೆಯಿಂದ, ಇವರ ತಂದೆಯ ಮೂಲ ಮನೆಯಾದ ಪುತ್ತೂರಿನ ಮುಕ್ವೆಗೆ ತನ್ನ ಬೈಕ್‌ನಲ್ಲಿ ತೆರಳುತ್ತಿದ್ದದ್ದರು. ಈ ಸಂದರ್ಭದಲ್ಲಿ ಪುತ್ತೂರಿನ ನಗರ ಬಳಿಯ ಫಾಸ್ಟ್ ಫುಡ್ ತಳ್ಳು ಗಾಡಿಯ ಬಳಿ ಹೋಗಲು ಬಲಬದಿಯ ಇಂಡಿಕೇಟರ್ ಹಾಕಿ, ಬೈಕ್ ತಿರುಗಿಸುವಷ್ಟರಲ್ಲಿ, ಕಬಕ ಕಡೆಯಿಂದ ಬಿಳಿ ಬಣ್ಣದ ಬ್ರಿಝ ಕಾರ್‌ನಲ್ಲಿ ಆರೋಪಿ ಪ್ರದೀಪ್ ರೈ ಬೈಕ್‌ಗೆ ಹಿಂದಿನಿoದ ಢಿಕ್ಕಿ ಹೊಡೆಯುವ ರೀತಿಯಲ್ಲಿ ಕಾರನ್ನ ಸ್ಪೀಡಾಗಿ ಚಲಾಯಿಸಿಕೊಂಡು ಬಂದಿದ್ದಾನೆ.

ಅದನ್ನು ಕಂಡ ಅಭಿಷೇಕ್ ಕಾರು ಚಾಲಕನಲ್ಲಿ ‘ದಾದಾ ಮಾರಾಯ ಕೆರ್ಪನ’ ಎಂದು ತುಳು ಭಾಷೆಯಲ್ಲಿ ಕೇಳಿದ್ದಾರೆ. ಅಷ್ಟರಲ್ಲಿ ಕಾರು ಚಾಲಕ ಪ್ರದೀಪ್ ರೈ ಕಾರಿನಿಂದ ಇಳಿದು ಬಂದು ಅವಾಚ್ಯ ಶಬ್ದಗಳಿಂದ ಬೈದು ಅಭಿಷೇಕ್‌ನ ಕೆನ್ನೆಗೆ ಬಲವಾಗಿ ಹೊಡೆದಿದ್ದಾರೆ. ತಾನೂ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಅಭಿಷೇಕ್ ಹೇಳಿದಾಗ, ಯಾರಿಗೆ ಬೇಕಾದರೂ ಹೇಳು ಈಗ ನಮ್ಮದೇ ಸರಕಾರ ಇರುವುದು ಎಂದು ಹೇಳಿ ಪ್ರದೀಪ್ ಅಲ್ಲಿಂದ ಕಾಲ್‌ಕಿತ್ತಿದ್ದಾನೆ.

ಈ ವಿಚಾರವನ್ನು ಅಭಿಷೇಕ್ ತನ್ನ ಸ್ನೇಹಿತ ಕಲ್ಲೇಗದ ಮನೋಜ್ ಎಂಬವರಿಗೆ ದೂರವಾಣಿ ಮೂಲಕ ತಿಳಿಸಿ, ಅಮ್ಟೂರಿನ ಮನಗೆ ವಾಪಾಸಾಗಿದ್ದಾರೆ. ಆದ್ರೆ ಪ್ರದೀಪ್ ಹೊಡೆದಿದ್ದರಿಂದ ನೋವು ಹೆಚ್ಚಾಗಿದ್ದು, ಮರು ದಿನ ಪುತ್ತೂರಿನ ಮಹಾವೀರ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಪ್ರದೀಪ್ ಹಲ್ಲೆ ನಡೆಸಿದ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾಯಲ್ಲಿ ದೂರನ್ನ ನೀಡಲಾಗಿತ್ತು, ಇದೀಗ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.