Friday, September 20, 2024
ಸುದ್ದಿ

Breaking News : ಕರಾವಳಿ ಜಿಲ್ಲೆಗಳಲ್ಲಿ ಚಂಡಮಾರುತದ ಸಾಧ್ಯತೆ ; ಬಂದರ್ ನಲ್ಲಿ ಮೈಕ್ ನಲ್ಲಿ ಎಚ್ಚರಿಕೆ – ಕಹಳೆ ನ್ಯೂಸ್

ಮಂಗಳೂರು, 04 ಅ : ಕರಾವಳಿ ಜಿಲ್ಲೆಗಳಲ್ಲಿ ಹಿಂಗಾರು ಮಳೆ ಬುಧವಾರದಿಂದ ಮತ್ತಷ್ಟು ಚುರುಕಾಗಿದ್ದು, ಅ.5 ರಿಂದ ಮಳೆಯಬ್ಬರ ಹೆಚ್ಚಾಗುವ ಎಚ್ಚರಿಕೆಯನ್ನು ಹವಮಾನ ಇಲಾಖೆ ನೀಡಿದೆ.

ಇದಲ್ಲದೆ ಅರಬ್ಬಿ ಸಮುದ್ರಲ್ಲಿ ಅ.5 ರ ನಂತರ ತೀವ್ರ ವಾಯುಭಾರ ಕುಸಿತ ಉಂಟಾಗಿ ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಹೆಚ್ಚಾಗಿದ್ದು, ದಕ್ಷಿಣ ಒಳನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಭಾರೀ ಮಳೆಯಾಗಲಿದೆ. ಸಮುದ್ರ ಪ್ರಕ್ಷುಬ್ಧಗೊಳ್ಳುವ ಸಾಧ್ಯತೆ ಇರುವುದರಿಂದ ಸಮುದ್ರಕ್ಕಿಳಿದಿರುವ ಮೀನುಗಾರರು, ಅ.5 ರೊಳಗೆ ಮರಳಿಬರಬೇಕು ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ವಾಯುಭಾರ ಕುಸಿತದ ಹಿನ್ನಲೆಯಲ್ಲಿ ಸಮುದ್ರ ಪ್ರಕ್ಷುಬ್ದಗೊಂಡು ಅಲೆಗಳ ಅಬ್ಬರವೂ ಹೆಚ್ಚಾಗಲಿದೆ. ಅದ್ದರಿಂದ ಈಗಾಗಲೇ ಸಮುದ್ರಕ್ಕೆ ಇಳಿದಿರುವ ಮೀನುಗಾರರು ಅ. 5 ಒಳಗೆ ತೀರ ಪ್ರದೇಶಕ್ಕೆ ಮರಳುವಂತೆ ಮತ್ತು ಅ.10 ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಮೀನುಗಾರು ಸಮುದ್ರಕ್ಕೆ ಇಳಿಯದಂತೆ ಮಲ್ಪೆ ಬಂದರಿನಲ್ಲಿ ಮೈಕ್ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಸ್ ಕುಂದರ್ ತಿಳಿಸಿದ್ದಾರೆ. ಬುಧವಾರ ಮೀನುಗಾರಿಕೆ ಮುಗಿಸಿ ಬಂದ ಬೋಟ್ ಮತ್ತೆ ಸಮುದ್ರಕ್ಕೆ ಇಳಿದಿಲ್ಲ. ಆದರೆ ಮಲ್ಪೆಯ ಬಂದರಿನಲ್ಲಿಯೇ 500ಕ್ಕೂ ಅಧಿಕ ಬೋಟ್ ಗಳು ಸಮುದ್ರದಲ್ಲಿವೆ.

ಅರಬ್ಬಿ ಸಮುದ್ರದ ಲಕ್ಷದೀಪ ಭಾಗದಲ್ಲಿ ನಿಮ್ನ ಒತ್ತಡ ಸೃಷ್ಟಿಯಾಗಿದ್ದು. ಇದು ವಾಯುಭಾರ ಕುಸಿತವಾಗಿ ಮಾರ್ಪಾಡಲಾಗಲಿದೆ. ಅನಂತರ ಇದು ಇನ್ನಷ್ಟು ತೀವ್ರಗೊಂದು ಚಂಡ ಮಾರುತ ಸ್ವರೂಪ ಪಡೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದು ಅನಂತರ ಗಲ್ಫ್ ತೀರದತ್ತ ಚಲಿಸುವ ಸಾಧ್ಯತೆ ಇದೆ.