ಬಂಟ್ವಾಳ ತಾಲೂಕು ಕೇಪು ಗ್ರಾಮ ಮತ್ತು ಅಳಿಕೆ ಗ್ರಾಮ ಸಂಗಮ ಸ್ಥಳದಲ್ಲಿ “ನಿರೆಲ್” ತಂಗುದಾಣದ ಲೋಕಾರ್ಪಣೆ – ಕಹಳೆ ನ್ಯೂಸ್
ಬಂಟ್ವಾಳ : ಕೇಪು ಗ್ರಾಮದ ಪಡಿಬಾಗಿಲು ಎಂಬಲ್ಲಿ ಕೇಪು ಗ್ರಾಮ ಮತ್ತು ಅಳಿಕೆ ಗ್ರಾಮ ಸಂಗಮ ಸ್ಥಳದಲ್ಲಿ “ನಿರೆಲ್” ಎಂಬ ತಂಗುದಾಣದ ಲೋಕಾರ್ಪಣ ಕಾರ್ಯಕ್ರಮ ನಡೆಯಿತು.
ಯುವ ಪೀಳಿಗೆ ಎಚ್ಚೆತ್ತು ಕೊಂಡು ಊರ ಪರವೂರ ದಾನಿಗಳಿಂದ ದೇಣಿಗೆ ಸಂಗ್ರಹಿಸಿ ನೂತನವಾಗಿ ತಂಗುದಾಣವನ್ನು ನಿರ್ಮಿಸಲಾಗಿದೆ. ಮುಖ್ಯವಾಗಿ ಶಾಲಾ ಮಕ್ಕಳ ಹಿತದೃಷ್ಟಿಯಿಂದ ಗೋಪಾಲ ನಾಯ್ಕ ಭೀಮಾವರ ಮತ್ತು ಉದಯ ಭಗವತಿ ಶಾಪ್ ಮುಂದಾಳತ್ವದಲ್ಲಿ ಈ ಒಂದು ತಂಗುದಾಣ ಮಾಡಲ್ಪಟ್ಟಿದೆ. ಇದಕ್ಕೆ ಎಲ್ಲಾ ದಾನಿಗಳು, ಊರಿನ ಯುವಕರು, ಶಿಕ್ಷಣ ಪ್ರೇಮಿಗಳು, ಸಮಾಜ ಸೇವಕರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಉದ್ಘಾಟನೆಯನ್ನು ಖ್ಯಾತ ಕಲಾವಿದ ಪಿ.ಕೆ. ದಾಮೋದರ್ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಗ್ರಾ. ಪಂ. ಸದಸ್ಯ ಜಗಜೀವನ್ ರಾಮ್ ಶೆಟ್ಟಿ, ಸಮಾಜ ಸೇವಕ ಸದಾನಂದ ಶೆಟ್ಟಿ, ಉದ್ಯಮಿ ಪ್ರಭಾಕರ ಶೆಟ್ಟಿ ದಂಬೆಕಾನ, ಬಾಲಕೃಷ್ಣ ಕಾರಂತ ಎರುಂಬು ಅರ್ಚಕರು, ಆನಂದ ಆಚಾರ್ಯ ಪಡಿಬಾಗಿಲು, ಮಹೇಶ್ ಅಳಿಕೆ, ಮನೋಹರ್ ಪಡಿಬಾಗಿಲು, ರಾಮ ನಾಯ್ಕ, ರಘುನಾಥ ಮೈರ, ದಾಮೋದರ್ ಉಕ್ಕುಡ, ಐತಪ್ಪ ನಾಯ್ಕ, ತಿರುಮಲೇಶ್ವರ ಭೀಮಾರ, ವಿನೀಶ್ ಮತ್ತಿತರರು ಉಪಸ್ಥಿತರಿದ್ದರು.
ತಂಗುದಾಣದ ಕೆಲಸವನ್ನು ಸಾಯಿ ಇಂಜಿನಿಯರಿಂಗ್ ವಕ್ರ್ಸ್ ಮಾಲಕ ಉದಯರವರು ಉಚಿತವಾಗಿ ಮಾಡಿದ್ದು ಗಾರೆ ಕೆಲಸವನ್ನು ಗೋಪಾಲ ಮೇಸ್ತ್ರಿಯವರು ಮಾಡಿದ್ದಾರೆ. ಸ್ಥಳೀಯ ಯುವಕ ಮಂಡಲ ಸದಸ್ಯರು ಸಂಪೂರ್ಣ ಸಹಕಾರ ನೀಡಿದ್ದಾರೆ. ಈ ಸಂದರ್ಭದಲ್ಲಿ ಎಲ್ಲರಿಗೂ ಸಿಹಿತಿಂಡಿ ವಿತರಿಸಲಾಯಿತು . ಬಿ. ಟಿ. ಮಾಸ್ಟರ್ ಕಾರ್ಯಕ್ರಮವನ್ನು ನಿರೂಪಿಸಿದರು.