Monday, January 20, 2025
ಸುದ್ದಿ

ಹಿಂದೂ ಮುಖಂಡ ಹರೀಶ್ ಶೆಟ್ಟಿ ಕೊಲೆ ಯತ್ನ: ಮೂವರ ಬಂಧನ – ಕಹಳೆ ನ್ಯೂಸ್

ಮಂಗಳೂರು: ಕಡಲ ತಡಿಯಲ್ಲಿ ಮತ್ತೆ ತಲ್ವಾರ್ ಸದ್ದು ಮಾಡಿದ್ದು ಗೊತ್ತೇ ಇದೆ. ಮೂಡಬಿದ್ರೆ ಗಂಟಲ್ ಕಟ್ಟೆಯಲ್ಲಿ ಪ್ರಶಾಂತ್ ಪೂಜಾರಿ ಕೊಲೆ ಆರೋಪಿ ಇಮ್ತಿಯಾಜ್ ಹತ್ಯೆ ಯತ್ನ ನಡೆದಿತ್ತು. ಇದೇ ಬೆನ್ನಲ್ಲೇ ಇದಕ್ಕೆ ಪ್ರತೀಕಾರವೆಂಬಂತೆ ಹಿಂದೂ ಮುಖಂಡನ ಹತ್ಯೆಗೆ ದುಷ್ಕರ್ಮಿಗಳ ತಂಡವೊಂದು ಯತ್ನಿಸಿದ ಘಟನೆ ಮಂಗಳೂರಿನ ಸೂರಲ್ಪಾಡಿ ಸಮೀಪದಲ್ಲಿ ನಡೆದಿದ್ದು ಇದಕ್ಕೆ ಸಂಬಂಧಿಸಿದಂತೆ ಪೊಲಿಸರು ಮೂರು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ.

ಕೈಕಂಬದಲ್ಲಿ ಬಸ್ ಏಜೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಪೊಳಲಿ ನಿವಾಸಿ ಹರೀಶ್ ಶೆಟ್ಟಿ ಭಜರಂಗದಳ ಗುರುಪುರ ಪ್ರಖಂಡ ಸಂಚಾಲಕ ಸ್ಥಾನದಲ್ಲಿದ್ರು. ಸೆಪ್ಟೆಂಬರ್ 24ರಂದು ಹರೀಶ್ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೇಳೆ ಎರಡು ಬೈಕ್ ನಲ್ಲಿ ಬಂದ ತಂಡವೊಂದು ತಲ್ವಾರ್ ಬೀಸಿ ಪರಾರಿಯಾಗಿದ್ದಾರೆ. ಕೂಡಲೇ ನಗರದ ಎಜೆ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿದ್ದು ಸ್ಥಿತಿ ಚಿಂತಾಜನಕವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು