ಥೈಲ್ಯಾಂಡ್ ನಿಂದ ರಾಕೂನ್ ನಾಯಿ ತಂದವನಿಗೆ 80 ಸಾವಿರ ರೂ. ದಂಡ ವಿಧಿಸಿದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು – ಕಹಳೆ ನ್ಯೂಸ್
ಥಾಯ್ಲೆಂಡ್ ನಿಂದ ವಿಮಾನದಲ್ಲಿ ಅಕ್ರಮವಾಗಿ ತರಲಾಗಿದ್ದ ಎರಡು ರಾಕೂನ್ ತಳಿಯ ನಾಯಿಗಳನ್ನು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅದಿಕಾರಿಗಳು ಪತ್ತೆ ಹಚ್ಚಿದ್ದು ಕರೆ ತಂದ ಆರೋಪಿಗೆ 80 ಸಾವಿರ ರೂ. ದಂಡ ವಿಧಿಸಿದ್ದಾರೆ.
ಥಾಯ್ ಏರ್ ವೇಸ್ ವಿಮಾನದಲ್ಲಿ ಬಂದಿಳಿದ ಚೆನ್ನೈ ಮೂಲದ ಆರೋಪಿ ಬಾಸ್ಕೆಟ್ ನಲ್ಲಿ ನಾಯಿ ಮರಿಗಳನ್ನು ಬಚ್ಚಿಟ್ಟಿದ್ದ. ತಪಾಸಣೆ ವೇಳೆ ಒಂದು ಮರಿ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದು, ಇನ್ನೊಂದು ಮರಿಯನ್ನು ಮರಳಿ ಥಾಯ್ಲೆಂಡ್ ಗೆ ಕಳುಹಿಸಲಾಗಿದೆ. ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.
ಮೈತುಂಬಾ ರೋಮಗಳಿರುವ ರಾಕೂನ್ ತಳಿಯ ನಾಯಿಗಳು ನೋಡಲು ನರಿಗಳಂತೆ ಕಾಣಿಸುತ್ತವೆ. ಪ್ರಾಣಿ ಸಾಗಣೆ ಕುರಿತು ಆತ ಯಾವುದೇ ದಾಖಲೆ ನೀಡದ ಕಾರಣ ಆತನ ವಿರುದ್ದ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
4-5 ಗಂಟೆಗಳ ಪ್ರಯಾಣವಾಗಿದ್ದರಿಂದ 1 ನಾಯಿ ಮರಿ ಮೃತಪಟ್ಟಿದೆ. ಥಾಯ್ಲೆಂಡ್ ಇಲಾಖೆ ನೆರವು ಪಡೆದು ಮತ್ತೊಂದು ನಾಯಿ ಮರಿಯನ್ನು ವಾಪಸ್ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆಯೂ ಆರೋಪಿ ಚೆನ್ನೈಯಲ್ಲಿ ವನ್ಯಜೀವಿ ಅಕ್ರಮವಾಗಿ ಸಾಗಿಸಿ ಸಿಕ್ಕಿಬಿದ್ದಿದ್ದ ಎಂದು ಮೂಲಗಳು ತಿಳಿಸಿವೆ.