Sunday, November 24, 2024
ಮೂಡಬಿದಿರೆರಾಜಕೀಯಸುದ್ದಿ

ವಿಪಕ್ಷೀಯರ ವಿರೋಧದ ಮಧ್ಯೆಯೇ ಉದ್ಘಾಟನೆಗೊಂಡ ಇರುವೈಲು ಗ್ರಾಮ ಪಂಚಾಯತ್ ನ ನೂತನ ಕಟ್ಟಡ – ಕಹಳೆ ನ್ಯೂಸ್

ಮೂಡುಬಿದಿರೆ: ಪ್ರೊಟೋಕಾಲನ್ನು ಪಾಲಿಸಿಲ್ಲ, ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ವಿರೋಧ ಪಕ್ಷದ ಸದಸ್ಯರು ಮತ್ತು ಕೆಲ ಬೆಂಬಲಿತರ ವಿರೋಧದ ಮಧ್ಯೆ ಪೆÇಲೀಸರ ಬಂದೋಬಸ್ತಿನೊಂದಿಗೆ ಇರುವೈಲು ಗ್ರಾ.ಪಂ.ನ ಮತ್ತು ತೋಡಾರು ನೂತನ ಕಟ್ಟಡವು ಕ್ಷೇತ್ರದ ಶಾಸಕ ಉಮಾನಾಥ ಎ.ಕೋಟ್ಯಾನ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟನೆಗೊಂಡಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ನಂತರ ಮಾತನಾಡಿದ ಶಾಸಕರು ಈ ಹಿಂದೆ ಪ್ರೊಟೋಕಾಲನ್ನು ಪ್ರಕಾರವೇ ಆಮಂತ್ರಣ ಪತ್ರಿಕೆಯಲ್ಲಿ ಸಂಬಂಧಪಟ್ಟವರ ಹೆಸರುಗಳನ್ನು ಪ್ರಕಟಿಸಲಾಗಿತ್ತು. ಆದರೆ ತಾ. ಪಂ. ಕಾರ್ಯ ನಿರ್ವಹಣಾಧಿಕಾರಿ ದಯಾವತಿ ಮತ್ತು ಪಿಡಿಒ ಕಾಂತಪ್ಪ ಅವರಿಗೆ ಉದ್ಘಾಟನೆ ಮಾಡಬಾರದು ಎಂಬ ಸೂಚನೆ ಮೇಲಾಧಿಕಾರಿಗಳಿಂದ ಬಂದಿದ್ದರಿಂದ ಅವರಿಗೆ ಗೌರವ ನೀಡಿ ಉದ್ಘಾಟನೆಯನ್ನು ರದ್ದುಗೊಳಿಸಲಾಗಿತ್ತು ಆದರೂ ಇಬ್ಬರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ  ಪ್ರೊಟೋಕಾಲನ್ನು ಪ್ರಕಾರವೇ ಆಮಂತ್ರಣ ಪತ್ರಿಕೆಯನ್ನು ಪ್ರಿಂಟ್ ಮಾಡಿ ಎಲ್ಲರಿಗೂ ಹಂಚಿದ್ದೇವೆ. ಅಲ್ಲದೆ ಇನ್ನು ಎರಡು ದಿನಗಳಲ್ಲಿ ಅಧ್ಯಕ್ಷ ವಲೇರಿಯನ್ ಕುಟಿನ್ಹ ಅವರ ಅಧ್ಯಕ್ಷಾವಧಿ ಮುಗಿಯಲಿದ್ದು ಅವರ ಆಸೆಯಂತೆ ತುರ್ತಾಗಿ ಸರಳ ರೀತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ, ದೀಪ ಬೆಳಗಿಸಿ ಉದ್ಘಾಟಿಸಿದ್ದೇನೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಸೋಮವಾರ ಸಂಜೆಯಿಂದಲೇ ಸರ್ವಪಕ್ಷೀಯರ ಮತ್ತು ಗ್ರಾಮದ ಜನರ ವಿಶ್ವಾಸ ಪಡೆದುಕೊಳ್ಳದೆ ತುರ್ತಾಗಿ ನೆರೆವೇರಿಸುತ್ತಿರುವುದಕ್ಕೆ ಕೆಲ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ ಗ್ರಾಮದ ಸರ್ವಪಕ್ಷೀಯ ಜನರನ್ನು ಮತ್ತು ಹಿರಿಯ ಪ್ರಮುಖ ನಾಗರೀಕರನ್ನು ವಿಶ್ವಾಸಕ್ಕೆ ಪಡೆದುಕೊಂಡೇ ಕಟ್ಟಡವನ್ನು ಉದ್ಘಾಟನೆ ಮಾಡುವುದು ಒಳಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.ಅಲ್ಲದೆ ಸಂಬಂಧಪಟ್ಟ ಇಲಾಖೆಯು ಪಂಚಾಯತ್ ಅಧ್ಯಕ್ಷರಿಗೆ ಕರೆ ಮಾಡಿ ಉದ್ಘಾಟನೆ ಮಾಡಬೇಡಿ ಎಂಬ ಸೂಚನೆಯನ್ನೂ ನೀಡಿತ್ತು ಎನ್ನಲಾಗಿದೆ. ಇದು ಆಡಳಿತ ಪಕ್ಷಕ್ಕೆ ಸ್ವಪ್ರತಿμÉ್ಟ ಎಂಬಂತ್ತಾಗಿದ್ದು .

ಇಂದು ಗ್ರಾ.ಪಂ. ಕಟ್ಟಡ ಉದ್ಘಾಟನೆಯಾಗುವುದಿಲ್ಲ ಎಂಬ ಸುದ್ದಿಯೂ ಹಬ್ಬಿತ್ತು. ಇಲ್ಲಿ ಗೊಂದಲ ಏರ್ಪಟ್ಟಿದ್ದರಿಂದ ಯಾವುದೇ ಅಹಿತರ ಘಟನೆಗಳು ನಡೆಯಬಾರದೆಂಬ ನಿಟ್ಟಿನಲ್ಲಿ ಪೆÇಲೀಸ್ ಅಧಿಕಾರಿಗಳು ತಮ್ಮ ಸಿಬಂದಿಗಳೊಂದಿಗೆ ಬೆಳಿಗ್ಗೆ 6 ಗಂಟೆಯ ವೇಳೆಗೆ ಜಮಾಯಿಸಿದ್ದರು.

ಈ ಎಲ್ಲಾ ಗೊಂದಲ, ವಿರೋಧದ ಮಧ್ಯೆ ಬೆಳಿಗ್ಗೆ 10.50ರ ಶಾಸಕ ಉಮಾನಾಥ ಕೋಟ್ಯಾನ್ ಅವರು ಆಗಮಿಸಿ ನೂತನ ಗ್ರಾ.ಪಂ.ಕಟ್ಟಡದ ಬಳಿಗೆ ಬಂದು ಬಾಗಿಲು ತೆಗೆಸಿದರು. ನಂತರ ದೀಪ ಬೆಳಗಿಸಿ ಕಚೇರಿಯನ್ನು ಉದ್ಘಾಟಿಸಿದರು.
ಗ್ರಾ.ಪಂ.ಅಧ್ಯಕ್ಷ ವಲೇರಿಯನ್ ಕುಟಿನ್ಹ ಮಾತನಾಡಿ ಎಲ್ಲಾ ಅಧಿಕಾರಿಗಳಿಗೆ ಆಮಂತ್ರಣ ಪತ್ರಿಕೆಯನ್ನು ನೀಡಿದ್ದೇವೆ. ಆದರೆ ನಿನ್ನೆ ರಾತ್ರಿ 10.30ಕ್ಕೆ ಅಧಿಕಾರಿಗಳು ತನಗೆ ಕರೆ ಮಾಡಿ ಕಚೇರಿ ಉದ್ಘಾಟನೆ ಮಾಡಬಾರದು ಎಂದು ಹೇಳಿದರು. ಆದರೆ ತಾನು ಹೇಗೆ ಸಾಧ್ಯ ಸರ್ ಎಂದು ಕೇಳಿದ್ದೆ. ತಾನು ಬೆಳಿಗ್ಗೆ ಕಛೇರಿಗೆ ಬಂದಾಗ ಸುತ್ತಲೂ ಪೆÇಲೀಸರು ನಿಂತಿದ್ದರು. ನಂತರ ಆಗಮಿಸಿದ ಶಾಸಕರು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಂದಿನ ಸೋಮವಾರದಿಂದ ಕಛೇರಿಯಲ್ಲಿ ಕೆಲಸ ಕಾರ್ಯಗಳು ನಡೆಯಲಿವೆ ಎಂದರು.
ಬಿಜೆಪಿ ಮುಖಂಡ ಪ್ರತಾಪ್ ಸಿಂಹ ನಾಯಕ್, ಜಿ.ಪಂ.ಸದಸ್ಯ ಕೆ.ಪಿ.ಸುಚರಿತ ಶೆಟ್ಟಿ, ಪಂಚಾಯತ್ ಅಧ್ಯಕ್ಷ ವಲೇರಿಯನ್ ಕುಟಿನ್ಹ ಹಾಗೂ ಉಪಾಧ್ಯಕ್ಷೆ , ಬೆಂಬಲಿತ ಸದಸ್ಯರು ಉಪಸ್ಥಿತರಿದ್ದರು.