Saturday, January 25, 2025
ಸುದ್ದಿ

ಸಮುದ್ರದ ಲಿಂಕ್ ನಿಂದ ಮುಂಬಯಿಯ ಗೇಟ್ ವೇ ಆಫ್ ಇಂಡಿಯಾ ತನಕ ಬರೋಬ್ಬರಿ 36 ಕಿ.ಮೀ. ಈಜಿದ ಈಜುಗಾರ್ತಿ ಸುಚೇತಾ – ಕಹಳೆ ನ್ಯೂಸ್

ಈಜುಗಾರ್ತಿ ಸುಚೇತಾ ದೇಬ್ ಬರ್ಮನ್ ವರ್ಲಿ ಸಮುದ್ರದ ಲಿಂಕ್ ನಿಂದ ಮುಂಬಯಿಯ ಗೇಟ್ ವೇ ಆಫ್ ಇಂಡಿಯಾ ತನಕ ಈಜಿ ಗಮನ ಸೆಳೆದಿದ್ದಾರೆ. ಅವರು ಸುಮಾರು 36 ಕಿ.ಮೀ. ಈಜಿದ್ದಾರೆ. ಈಜುತ್ತಿರುವ ವೀಡಿಯೋವನ್ನು ಸುಚೇತಾ ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ.

ಸುಚೇತಾ ಶೇರ್ ಮಾಡಿಕೊಂಡಿರುವ ವೀಡಿಯೋವನ್ನು ಈಗಾಗಲೇ 6 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದಾರೆ. ಸುಮಾರು 62 ಸಾವಿರ ಮಂದಿ ಲೈಕ್ ಮಾಡಿದ್ದಾರೆ. ಹಲವರು ಈಜುಗಾರ್ತಿಯ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅನೇಕರು ಸ್ಫೂರ್ತಿದಾಯಕವಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಕೆಲವರು ತಮ್ಮ ಸಂದೇಹವನ್ನೂ ವ್ಯಕ್ತಪಡಿಸಿದ್ದಾರೆ. ಬಿಸಿಲಿನಿಂದ ಚರ್ಮ ಕಪ್ಪಾಗಿದೆ. ಬೆನ್ನು ಸ್ವಲ್ಪ ಸುಟ್ಟಿದೆ ಎಂದು ಪ್ರಶ್ನೆಯೊಂದಕ್ಕೆ ಸುಚೇತಾ ಉತ್ತರಿಸಿದ್ದಾರೆ. ಈಜುಗಾರರೊಬ್ಬರು ಕಮೆಂಟ್ ಮಾಡಿ, 36 ಕಿ.ಮೀ. ಈಜಬೇಕೆಂದರೆ ಅದರ ಹಿಂದಿನ ತಯಾರಿ ಎಷ್ಟು ಕಷ್ಟ ಎನ್ನುವುದು ಅರ್ಥವಾಗುತ್ತದೆ ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶಾರ್ಕ್, ಮೊಸಳೆ ನಿಮ್ಮನ್ನು ಹಿಡಿಯದಷ್ಟು ವೇಗವಾಗಿ ಸಾಗಿದಿರೆ? ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ. ಹಲವರಿಗೆ ಸುಚೇತಾ ಸಾಧನೆ ಬಗ್ಗೆ ಹೆಮ್ಮೆ ಇದೆಯಂತೆ. ಒಟ್ಟಿನಲ್ಲಿ ಸುಚೇತಾ ತಮ್ಮ ಸಾಹಸದ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ.