Monday, January 20, 2025
ಸುದ್ದಿ

ಬಿಸಿರೋಡಿನ ಸರ್ವಿಸ್ ರೋಡಿನಲ್ಲಿ ನೀರಿನ ಪೈಪ್ ಒಡೆದು ನೀರು ಪೋಲು – ಕಹಳೆ ನ್ಯೂಸ್

ಮಂಗಳೂರು: ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಕುಡಿಯಲು ನೀರಿಲ್ಲ ಆದರೆ ಕುಡಿಯವ ನೀರಿನ ಪೈಪ್ ಒಡೆದು ನೀರು ಪೋಲಾಗಿ ರಸ್ತೆಯುದ್ದಕ್ಕೂ ಹರಿದಾಡುವ ದೃಶ್ಯ ಕಂಡುಬರುತ್ತಿದೆ.

ಬಂಟ್ವಾಳ ತಾಲೂಕಿನ ಹೃದಯಭಾಗವೆನಿಸಿದ ಬಿಸಿರೋಡಿನ ಸರ್ವೀಸ್ ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಕುಡಿಯುವ ನೀರು ರಸ್ತೆಯಲ್ಲಿ ಸೇರಿ ಕೃತಕ ನೆರೆ ಉಂಟಾಗಿದೆ. ಒಂದು ಕಡೆ ಪುರಸಭಾ ವ್ಯಾಪ್ತಿಯಲ್ಲಿ ಅನೇಕ ವಾರ್ಡುಗಳಿಗೆ ಕುಡಿಯುವ ನೀರು ಪೂರೈಸದೆ ಟ್ಯಾಂಕರ್ ಮೂಲಕ ನೀರು ನೀಡಿದ ಘಟನೆ ಕಳೆದ ಅನೇಕ ದಿನಗಳಿಂದ ನಡೆಯುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದ್ರೆ ಇನ್ನೊಂದು ಈ ರೀತಿ ಆಗ್ತಿರೋದು ಪುರಸಭೆ ಆಡಳಿತಕ್ಕೆ ಕಾಣ್ತಾ ಇಲ್ಲ. ಪುರಸಭೆಗೆ ಕನಿಷ್ಠ ನೀರು ಪೋಲಾಗುವುದನ್ನು ತಡೆಯಲು ಸಾಧ್ಯವಾಗುವುದಿಲ್ಲ ಎಂದಾದ್ರೆ ಇದು ಪುರಸಭೆಯ ಅವ್ಯವಸ್ಥೆ ಅಲ್ಲದೆ ಮತ್ತೇನೂ ಅಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಇತ್ತೀಚಿಗೆ ಸರ್ವೀಸ್ ರಸ್ತೆಯ ಕಾಂಕ್ರೀಟ್ ಮಾಡುವಾಗ ಇಲ್ಲಿ ಪೈಪ್ ಒಡೆದು ಹೋಗಿ ಅನೇಕ ದಿನ ನೀರು ಪೋಲಾಗುತ್ತಿತ್ತು. ಅದರೆ ಪುರಸಭೆ ಈ ಸಮಸ್ಯೆಯನ್ನು ಶಾಶ್ವತವಾಗಿ ಪರಿಹಾರ ಕ್ರಮವನ್ನು ಕೈಕೊಳ್ಳದ ಹಿನ್ನೆಲೆಯಲ್ಲಿ ಮತ್ತೆ ವಾಪಾಸು ನೀರಿನಪೈಪ್ ಒಡೆದು ಹೋಗಿದ್ದು ಶೀಘ್ರವಾಗಿ ಈ ಸಮಸ್ಯೆ ಪರಿಹಾರವನ್ನು ಪುರಸಭೆ ಮಾಡಬೇಕಾಗಿದೆ.