Thursday, January 23, 2025
ಸುದ್ದಿ

ಮೂರೇ ತಿಂಗಳಲ್ಲಿ ಫಲಿಸಿದ ಕೋರಿಕೆ – ಕೊರಗಜ್ಜನ ಸನ್ನಿಧಿಗೆ ಬಂದು ಹರಕೆ ತೀರಿಸಿದ ನಟಿ ಮಾಲಾಶ್ರೀ – ಕಹಳೆ ನ್ಯೂಸ್

ಮಂಗಳೂರು: ತುಳುನಾಡಿನ ಕಾರಣಿಕದ ಶಕ್ತಿ ಕೊರಗಜ್ಜನ ಕಾರಣಿಕ ಮತ್ತೊಮ್ಮೆ ಸಾಬೀತುಗೊಂಡಿದೆ. ಇಲ್ಲಿನ ಕುತ್ತಾರು ಕೊರಗಜ್ಜನ ಆದಿ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿ ಹೋಗಿದ್ದ ಮೂರೇ ತಿಂಗಳಿನಲ್ಲಿ ತಮ್ಮ ಬೇಡಿಕೆ ಈಡೇರಿದ ಕಾರಣದಿಂದ ಖ್ಯಾತ ನಟಿ ಮಾಲಾಶ್ರೀ ಇದೀಗ ಕುತ್ತಾರಿಗೆ ಕುಟುಂಬ ಸಮೇತ ಆಗಮಿಸಿ ತಮ್ಮ ಹರಕೆ ತೀರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬುಧವಾರದಂದು ಕುತ್ತಾರಿನಲ್ಲಿರುವ ಕೊರಗಜ್ಜನ ಆದಿ ಕ್ಷೇತ್ರಕ್ಕೆ ತಮ್ಮ ಮಗಳು ಅನನ್ಯಾಳೊಂದಿಗೆ ಆಗಮಿಸಿದ ಮಾಲಾಶ್ರಿ ಅವರು ಇಲ್ಲಿ ಕೊರಗಜ್ಜನಿಗೆ ಹೇಳಿಕೊಂಡಿದ್ದ ಹರಕೆಯನ್ನು ತೀರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಕಳೆದ ಮೂರು ತಿಂಗಳ ಹಿಂದೆಯಷ್ಟೇ ಕೊರಗಜ್ಜನ ಕಟ್ಟೆಗೆ ಬಂದು ಬೇಡಿಕೊಂಡಿದ್ದೆವು. ಆ ಬಳಿಕ ನಮ್ಮ ಕೋರಿಕೆ ಪವಾಡ ಸದೃಶವಾಗಿ ಈಡೇರಿತ್ತು. ಈ ಕ್ಷೇತ್ರದ ಶಕ್ತಿ ಅಪಾರವಾದುದು..’ ಎಂದು ಮಾಲಾಶ್ರೀ ಹೇಳಿದ್ದಾರೆ.

ನಮ್ಮ ಬೇಡಿಕೆಯನ್ನು ಕೊರಗಜ್ಜ ಈಡೇರಿಸಿದ ಕಾರಣ ಹರಕೆ ತೀರಿಸಿ ಆಶೀರ್ವಾದ ಪಡೆದುಕೊಳ್ಳುವ ಉದ್ದೇಶದಿಂದ ಕುಟುಂಬ ಹಾಗೂ ಸ್ನೇಹಿತರ ಜೊತೆ ನಾನಿಲ್ಲಿ ಬಂದಿದ್ದೇನೆ, ಮುಂದೆಯೂ ಬರುತ್ತೇನೆ ಎಂದು ಮಾಲಾಶ್ರಿ ಅವರು ಇದೇ ಸಂದರ್ಭದಲ್ಲಿ ಹೇಳಿದರು.