Wednesday, January 22, 2025
ದಕ್ಷಿಣ ಕನ್ನಡರಾಜಕೀಯರಾಜ್ಯಸುದ್ದಿ

Shivadhwaj Shetty ನಿರ್ದೇಶನದ ‘ಕೊರಮ್ಮ’ ತುಳು ಚಲನಚಿತ್ರ ಆಗಸ್ಟ್ 11ಕ್ಕೆ ಬಿಡುಗಡೆ – ಕಹಳೆ ನ್ಯೂಸ್

 

ಮಂಗಳೂರು: ತುಳುನಾಡ ಸಂಸ್ಕೃತಿ, ಆಚಾರ- ವಿಚಾರ, ನಡೆ-ನುಡಿ, ಜೀವನ ಪದ್ಧತಿ, ಇವೆಲ್ಲವುಗಳೊಂದಿಗೆ ಮನೋರಂಜನೆಯನ್ನು ಬೆರಸಿಕೊಂಡು ಕುತೂಹಲ ಹುಟ್ಟಿಸುವ ಕಥೆ ಹೆಣೆದು ಸುಂದರವಾಗಿ ಮೂಡಿಬಂದಿರುವ ತುಳು ಸಿನೆಮಾ ‘ಕೊರಮ್ಮ’, ಇದೇ ಆಗಸ್ಟ್ 11 ರ ಶುಕ್ರವಾರದಂದು ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಶಿವಧ್ವಜ್ ಶೆಟ್ಟಿ ಪತ್ರಿಕಾಗೋಷ್ಢಿಯಲ್ಲಿ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಚಿತ್ರವು ಮಂಗಳೂರು, ಸುರತ್ಕಲ್, ಪುತ್ತೂರು, ಪಡುಬಿದ್ರೆ ಮುಂತಾದ ಕಡೆಗಳಲ್ಲಿ ಬಿಡುಗಡೆಯಾಗಲಿದೆ ಎಂದರು.

ಸಫೈರ್ ಪ್ರೊಡಕ್ಷನ್ ಹೌಸ್ ನಿರ್ಮಾಣ ಸಂಸ್ಥೆಯ ಮೂಲಕ ಅಡ್ಯಾರ್ ಮಾಧವ ನಾಯ್ಕ್ ಅರ್ಪಿಸಿರುವ ಈ ಚಿತ್ರದ ಹಾಡಿನ ದೃಶ್ಯದಲ್ಲಿ ತುಳುನಾಡಿನ ಪೂರ್ವಜರ ಬದುಕು ಮಾರ್ಮಿಕವಾಗಿ ಪ್ರತಿಬಿಂಬಿತವಾಗಿದೆ. ತುಳುವರ ಹಿರಿಯರ ಕಾಲದ ಪರಿಕರಗಳನ್ನು ಸಮರ್ಥವಾಗಿ ಬಳಸಿಕೊಂಡು ಮಾಡಿರುವ ಈ ಸಿನೆಮಾದ ಕಥೆ-ಚಿತ್ರಕಥೆ-ನಿರ್ದೇಶನ ರಾಷ್ಟ್ರ ಪ್ರಶಸ್ತಿ ಚಿತ್ರ ನಿರ್ದೇಶಕ ಶಿವಧ್ವಜ್ ಶೆಟ್ಟಿಯವರು ಮಾಡಿದ್ದಾರೆ.

ತುಳು ಚಿತ್ರರಂಗಕ್ಕೆ ಬದಲಾವಣೆ ಕೊಡಬಲ್ಲ ಮೌಲ್ಯಯುತವಾದ ಕಥಾವಸ್ತುವನ್ನು ‘ಕೊರಮ್ಮ’ ಚಲನಚಿತ್ರ ಹೊಂದಿದೆ ಎನ್ನುವುದು ಚಿತ್ರ ತಂಡದ ಮಾತು.

ನಿರ್ಮಾಪಕರು ಅಡ್ಯಾರ್ ಮಾಧವ ನಾಯ್ಕ್, ಈಶ್ಚರಿದಾಸ್ ಶೆಟ್ಟಿ ಮತ್ತು ರಾಜೇಶ್ವರ ರೈ, ಸಂಗೀತ ಶಿನೋಯ್ ಎ. ಜೋಸೆಫ್, ಛಾಯಾಗ್ರಹಣ ಸುರೇಶ್‌ ಬೈರಸಂದ್ರ, ಸಂಕಲನ ಗಣೇಶ್ ನೀರ್ಚಾಲ್, ಸಂಭಾಷಣೆ ಶ್ರೀನಿಧಿ ಭಟ್, ಅನುವಾದ ಮತ್ತು ಸಾಹಿತ್ಯ ಕೆ. ಮಹೇಂದ್ರನಾಥ್ ಸಾಲೆತ್ತೂರು, ಕಲೆ ಸಂತೋಷ ಪೂಜಾರಿ ವೇಣೂರು, ಸಹ ನಿರ್ದೇಶನ ಹರ್ಷೀವ ಭಗೀರ, ಪ್ರಸಾಧನ ಕುಮಾರ್ ನೋಣವಿನಕೆರೆ ಅವರದ್ದಾದರೆ ದೀಪಕ್ ಸಿನಿ ಗ್ಯಾಲಕ್ಸಿ ಹಂಚಿಕೆ ಮಾಡುತ್ತಿದ್ದಾರೆ.

ಕಾರ್ಕಳದ ಬೈಲೂರಿನ ಸುಂದರ ತಾಣದಲ್ಲಿ ಒಂದೇ ಹಂತದಲ್ಲಿ ಚಿತ್ರೀಕಣವಾಗಿರುವ ಈ ‘ಕೊರಮ್ಮ’ ತುಳುಚಿತ್ರದ ತಾರಾಗಣದಲ್ಲಿ – ಗುರುಹೆಗ್ಡೆ, ರೂಪ ಶ್ರೀ ವರ್ಕಾಡಿ, ಮೋಹನ್‌ ಶೇಣಿ, ಬಿಂದುರಕ್ಷಿದಿ, ಜಿನಪ್ರಸಾದ್‌, ದಿವ್ಯಶ್ರೀ, ನಾಯಕ್, ಲಕ್ಷ್ಮಣ್ ಕುಮಾರ್ ಮಲ್ಲೂರು, ನಮಿತಾ ಕೂಳೂರು, ಸುಮನ ಮಂಗಳೂರು, ಹರೀಶ್‌ ಜೋಡುರಸ್ತೆ ಮತ್ತಿರರಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಶಿವಧ್ವಜ್ ಶೆಟ್ಟಿ, ಈಶ್ವರಿದಾಸ್‌ ಶೆಟ್ಟಿ, ಅಡ್ಯಾರ್ ಮಾಧವ ನಾಯ್ಕ್, ದೀಪಕ್, ಗುರು ಹೆಗ್ಡೆ, ಮೋಹನ್‌ ಶೇಣಿ, ಬಿಂದು ರಕ್ಷಿದಿ, ರೂಪ ಶ್ರೀ ವರ್ಕಾಡಿ, ದೀಪಕ್, ತಮ್ಮ ಲಕ್ಷ್ಮಣ ಉಪಸ್ಥಿತರಿದ್ದರು.