Tuesday, November 26, 2024
ಸುದ್ದಿ

ಶಬರಿಮಲೆಗೆ ಮಹಿಳೆಯರ ಪ್ರವೇಶ: ಸುಪ್ರೀಂ ತೀರ್ಪನ್ನು ವಿರೋಧಿಸಿ ಬ್ರಹತ್ ಪ್ರತಿಭಟನೆ – ಕಹಳೆ ನ್ಯೂಸ್

ಕಾಸರಗೋಡು: ಶಬರಿಮಲೆಗೆ ಮಹಿಳೆಯರು ಪ್ರವೇಶಾವಕಾಶದ ಸುಪ್ರೀಂ ತೀರ್ಪನ್ನು ವಿರೋಧಿಸಿ ಹಾಗೂ ಕೇರಳ ಸರಕಾರದ ನಿಲುವನ್ನು ಪ್ರತಿಭಟಿಸಿ ಬಿಜೆಪಿ ಮತ್ತು ಸಂಘ ಪರಿವಾರ ಬೀದಿಗಿಳಿದು ಹೋರಾಟಕ್ಕೆ ಮುಂದಾಗಿದ್ದು , ಯುವ ಮೋರ್ಚಾ ನೇತೃತ್ವದಲ್ಲಿ ಕಾಸರಗೋಡು ನಗರದಲ್ಲಿ ಬ್ರಹತ್ ಪ್ರತಿಭಟನೆ ನಡೆಯಿತು.

ಶತಮಾನಗಳಿಂದ ಪಾಲಿಸಿಕೊಂಡು ಬರುವ ಆಚಾರ ಸಂಹಿತೆಯನ್ನು ಬುಡಮೇಲು ಗೊಳಿಸುವ ಕೇರಳ ಸರಕಾರದ ಹುನ್ನಾರವನ್ನು ಯಾವುದೇ ಬೆಲೆ ತೆತ್ತು ತಡೆಯಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ . ಶ್ರೀಕಾಂತ್ ಮುನ್ನೆಚ್ಚರಿಕೆ ನೀಡಿದರು. ನಗರದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕರಂದಕ್ಕಾಡಿನಿಂದ ಹೊರಟ ಮೆರವಣಿಗೆ ನಗರ ಪ್ರದಕ್ಷಿಣೆ ಬಂದ ಬಳಿಕ ಹೊಸ ಬಸ್ಸು ನಿಲ್ದಾಣ ಪರಿಸರದಲ್ಲಿ ಕೊನೆಗೊಂಡಿತು. ಬಳಿಕ ನಡೆದ ಪ್ರತಿಭಟನಾ ಸಂಗಮವನ್ನು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್ ಉದ್ಘಾಟಿಸಿದರು. ಬಳಿಕ ಕೇರಳ ಧಾರ್ಮಿಕ ದತ್ತಿ ಇಲಾಖಾ ಸಚಿವರ ಪ್ರತಿಕೃತಿಯನ್ನು ದಹಿಸಲಾಯಿತು ಬಿಜೆಪಿ ರಾಜ್ಯ ಸಮಿತಿ ಸದಸ್ಯ ಕುಂಟಾರು ರವೀಶ ತಂತ್ರಿ , ಸವಿತಾ ಟೀಚರ್, ಪಿ .ಆರ್ ಸುನಿಲ್ ಮೊದಲಾದವರು ನೇತೃತ್ವ ನೀಡಿದರು.