Sunday, November 24, 2024
ಸುದ್ದಿ

ಮಂಗಳೂರಿನ ಹಲವೆಡೆ ಮತ್ತೆ ಕೊಳೆತ ಮೊಟ್ಟೆ ಪೂರೈಕೆ ; ಗರ್ಭಿಣಿ ಮತ್ತು ಮಕ್ಕಳು ಅಸ್ವಸ್ಥ – ಕಹಳೆ ನ್ಯೂಸ್

ಮಂಗಳೂರು : ಇತ್ತೀಚೆಗೆ ಅಂಗನವಾಡಿಗೆ ಕೊಳೆತ ಮೊಟ್ಟೆಗಳು ಪೂರೈಕೆಯಾಗುತ್ತಿರವ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಂಗನವಾಡಿಗಳಿಗೆ ಮೊಟ್ಟೆ ಪೂರೈಕೆ ಮಾಡುವ ಗುತ್ತಿಗೆದಾರನನ್ನು ಬ್ಲಾಕ್ ಲಿಸ್ಟ್ ಗೆ ಹಾಕುತ್ತೇನೆಂದು ಗುಡುಗಿದ್ದರು. ಆದರೆ ಇನ್ನೂ ಈ ಸಮಸ್ಯೆ ಪರಿಹಾರವಾದಂತಿಲ್ಲ. ಇದೀಗ ಮತ್ತೆ ಮತ್ತೆ ಮಂಗಳೂರಿನ ಹಲವೆಡೆ ಮತ್ತೆ ಕೊಳೆತ ಮೊಟ್ಟೆ ಪೂರೈಕೆ ಆಗುತ್ತಿರುವುದು ಕಂಡು ಬಂದಿದೆ. ಕಾಟಿಪಳ್ಳದ ಆಸುಪಾಸಿನಲ್ಲಿ ಗರ್ಭಿಣಿಯರಿಗೆ ವಿತರಿಸಲಾಗುವ ಮೊಟ್ಟೆಗಳು ಅಂಗನವಾಡಿಗಳಿಗೆ ಪೂರೈಕೆಯಾಗಿದ್ದು,ಹಾಳಾದ ಸ್ಥಿತಿಯಲ್ಲಿ ದೊರೆತಿದೆ. ಈ ಬಗ್ಗೆ ಶಾಸಕ ಡಾ.ಭರತ್ ಶೆಟ್ಟಿ ವೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಕಾಶಭವನದಲ್ಲಿ ಗರ್ಭಿಣಿ ಮಹಿಳೆ, ಮಗು ಮೊಟ್ಟೆ ತಿಂದು ತಿಂಗಳ ಹಿಂದೆ ಅಸ್ವಸ್ಥರಾಗಿದ್ದರು. ತಾಲೂಕಿನ ಹಲವೆಡೆ ಅಂಗನವಾಡಿಗಳಿಗೆ ಕೊಳೆತ ಮೊಟ್ಟೆ ಪೂರೈಕೆಯಾಗಿದೆ. ಈ ಬಾರಿಯೂ ಕೆಲವು ಕಡೆಗಳಿಗೆ ಕೊಳೆತ ಮೊಟ್ಟೆ ಪೂರೈಕೆ ಆಗಿರುವ ಮಾಹಿತಿ ಲಭ್ಯವಾಗಿದೆ.ಸರಕಾರ ಈ ಬಗ್ಗೆ ಸಮರ್ಪಕವಾದ ಕ್ರಮ ಕೈಗೊಳ್ಳಬೇಕು.ಕೇವಲ ಹೆಸರಿಗೆ ಯೋಜನೆ ನೀಡದೆ ಜನರ ಆರೋಗ್ಯದ ಮೇಲೂ ಕಾಳಜಿ ತೋರಬೇಕಿದೆ ಎಂದು ಅವರು ಸರಕಾರವನ್ನು ಒತ್ತಾಯಿಸಿ ದ್ದಾರೆ.