ಮೂಡುಬಿದಿರೆ: ಇಲ್ಲಿನ ಜನರಿಗೆ ಉತ್ತಮ ಸಿನೆಮಾಗಳನ್ನು ಪ್ರದರ್ಶಿಸುತ್ತಾ ಮನರಂಜನೆ ನೀಡುತ್ತಿದ್ದ ಮೂಡುಬಿದಿರೆಯ ಅಮರಶ್ರೀ ಚಿತ್ರಮಂದಿರವು ಗುರುವಾರ ಸಂಜೆಯಿಂದ ಲಾಕ್ ಔಟ್ ಆಗಿದೆ.
ಮಾಜಿ ಸಚಿವ ದಿ.ಕೆ.ಅಮರನಾಥ ಶೆಟ್ಟಿ ಅವರ ಮಗಳು ಅಮರಶ್ರೀ ಅವರ ಹೆಸರಿನಲ್ಲಿರುವ ಈ ಸಿನೆಮಾ ಮಂದಿರವು ಕಳೆದ 40 ವರ್ಷಗಳಿಂದ ಕಾರ್ಯಚರಿಸುತ್ತಿದ್ದು 10 ವರ್ಷಗಳಿಂದ ಕಾರ್ಕಳದ ಜೆರಾಲ್ಡ್ ಕುಟಿನ್ಹಾ ಅವರು ನಡೆಸುತ್ತಿದ್ದರು. ಕಳೆದ 2021ಕ್ಕೆ ಪರವಾನಿಗೆಯ ಅವಧಿಯು ಮುಕ್ತಾಯಗೊಂಡಿರುತ್ತದೆ. ನಂತರ ನವೀಕರಣಗೊಳಿಸದೆ ಅನಧಿಕೃತವಾಗಿ ಕಾರ್ಯಚರಿಸುತ್ತಿದ್ದುದರಿಂದ ಜಿಲ್ಲಾಧಿಕಾರಿಯವರ ಆದೇಶದ ಮೇರೆಗೆ ಕಂದಾಯ ಅಧಿಕಾರಿಗಳು ಬೀಗಮುದ್ರೆಯನ್ನು ಹಾಕಿದ್ದಾರೆ.
ಚಿತ್ರಮಂದಿರದ ಮಾಲಕರು ಈ ಬಗ್ಗೆ ಪ್ರತಿಕ್ರಿಯಿಸಿ ಕಳೆದ ಹತ್ತು ವರ್ಷಗಳಿಂದ ಚಿತ್ರಮಂದಿರವನ್ನು ಜೆರಾಲ್ಡ್ ಅವರಲ್ಲಿ ತಾವು ತಮಗೆ ಚಿತ್ರಮಂದಿರವನ್ನು ಬಿಟ್ಟುಕೊಡಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡವನ್ನು ಮತ್ತು ಪೀಠೋಪಚಾರಗಳನ್ನು ದುರಸ್ಥಿಗೊಳಿಸಲಿದೆ ಎಂದು ಬಿಟ್ಟು ಕೊಟ್ಟಿರಲಿಲ್ಲ ಆದ್ದರಿಂದ ತಮಗೆ ತೊಂದರೆಯಾಯಿತು ಎಂದಿದ್ದಾರೆ.