Tuesday, January 21, 2025
ಸುದ್ದಿ

ವಿದ್ಯುತ್ ಶಾಕ್ ಹೊಡೆದು ಬಾಗಲಕೋಟೆ ಮೂಲದ ವ್ಯಕ್ತಿ ಸಾವು – ಕಹಳೆ ನ್ಯೂಸ್

ಬಂಟ್ವಾಳ : ಮನೆಯ ಅಂಗಳದಲ್ಲಿ ಮೆಷಿನ್ ಮೂಲಕ ಹಸಿರು ಹುಲ್ಲು ತೆಗೆಯುವ ವೇಳೆ ವಿದ್ಯುತ್ ಶಾಕ್ ಹೊಡೆದು ಬಾಗಲಕೋಟೆ ಮೂಲದ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಮೆಲ್ಕಾರ್ ಸಮೀಪದ ಬೋಗೋಡಿ ಎಂಬಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಬಾಗಲಕೋಟ ನಿವಾಸಿ ಯಮನಪ್ಪ ಮೃತಪಟ್ಟ ವ್ಯಕ್ತಿ. ಗುಡ್ಡೆಯಂಗಡಿ ನಿವಾಸಿ ಸೈಪುದ್ದೀನ್ ಎಂಬಾತನ ಮನೆಯ ಅಂಗಳದಲ್ಲಿ ಹಸಿರು ಹುಲ್ಲನ್ನು ಮೆಷಿನ್ ಮೂಲಕ ಕತ್ತರಿಸುವ ವೇಳೆ ಈ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂಗಳದಲ್ಲಿ ಬೊರ್ ವೆಲ್ ಒಂದಿದ್ದು,ಇದರೊಳಗಿರುವ ಪಂಪ್ ಗೆ ನೀಡಲಾದ ವಿದ್ಯುತ್ ಸಂಪರ್ಕದ ವಯರನ್ನು ಈತನ ಗೋಚರಕ್ಕೆ ಬರದೆ ಕತ್ತರಿಸಿದ್ದಾನೆ. ಅವೇಳೆ ವಿದ್ಯುತ್ ಹರಿದು ಈತ ಸ್ಥಳದಲ್ಲಿಯೇ ಮೃತಪಟ್ಟ ಬಗ್ಗೆ ಇಲ್ಲಿನ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಯಮನಪ್ಪ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿರಿಸಲಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಎಸ್.ಐ.ರಾಮಕೃಷ್ಣ ಅವರು ಬೇಟಿ ನೀಡಿದ್ದಾರೆ.