Monday, January 20, 2025
ಸುದ್ದಿ

ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ ; ಬಂಧಿತನಿoದ 4 ಗ್ರಾಂ ಗಾಂಜಾ ವಶಪಡೆದ ಬಂಟ್ವಾಳ ಪೊಲೀಸರು – ಕಹಳೆ ನ್ಯೂಸ್

ಬಂಟ್ವಾಳ: ಗಾಂಜಾ ಸೇವನೆ ಮಾಡಿ, ವ್ಯಕ್ತಿಯೋರ್ವ ಕಾರಿನಲ್ಲಿ ಮಾರಾಟ ಮಾಡಲು ಹೋಗುತ್ತಿದ್ದ ವೇಳೆ ಬಂಟ್ವಾಳ ನಗರ ಠಾಣಾ ಎಸ್.ಐ.ರಾಮಕೃಷ್ಣ ನೇತ್ರತ್ವದ ಪೊಲೀಸ್ ತಂಡ ಆರೋಪಿಯನ್ನು ಬಂಧಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬೋಳಂತೂರು ಗ್ರಾಮದ ಕೋಡಿಕಂಡ ನಿವಾಸಿ ಮೊಹಮ್ಮದ್ ಆಸೀರ್ ಬಂಧಿತ ಆರೋಪಿ. ಬಂಧಿತನಿAದ 4 ಗ್ರಾಂ ಗಾಂಜಾ ಹಾಗೂ ಅಂದಾಜು ಒಂದುವರೆ ಲಕ್ಷಮೌಲ್ಯದ ಅಲ್ಟೋ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಸಂಶಯದ ಮೇಲೆ ಕಾರೊಂದನ್ನು ನಿಲ್ಲಿಸಿ , ತಪಾಸಣೆ ನಡೆಸಿದಾಗ ಈತ ಅಮಲು ಪದಾರ್ಥ ಸೇವನೆ ಮಾಡಿದ ಬಗ್ಗೆ ಅನುಮಾನ ಮೂಡಿದ ಪೊಲೀಸರ ತಂಡ ಹೆಚ್ಚಿನ ತನಿಖೆ ಮಾಡಿದೆ.

ತನಿಖೆಯ ವೇಳೆ ಈತ ಲಾರಿ ಚಾಲಕ ಎಂದು ಗೊತ್ತಾಗಿದ್ದು,ಬೆಂಗಳೂರಿನ ವ್ಯಕ್ತಿಯೋರ್ವನ ಮೂಲಕ ಗಾಂಜಾವನ್ನು ಪಡೆದುಕೊಂಡು, ಮಂಗಳೂರು ಸುತ್ತ ಮುತ್ತ ಮಾರಟ ಮಾಡಲು ಅಲ್ಟೋ ಕಾರಿನಲ್ಲಿ ತೆರಳುತ್ತಿದ್ದ. ಆದರೆ ಈತನ ನಡವಳಿಕೆ ಮೇಲೆ ಸಂಶಯಗೊAಡ ಪೊಲೀಸರು ವಾಹನ ತಡೆದು ವಿಚಾರಿಸಿದ್ದಾರೆ ಈ ವೇಳೆ ಆರೋಪಿಪೊಲೀಸರ ಬಲೆಗೆ ಬಿದ್ದಿದ್ದಾನೆ.