Monday, January 20, 2025
ಪುತ್ತೂರುಸುದ್ದಿ

ಸೌಜನ್ಯ ಹತ್ಯೆ ಖಂಡಿಸಿ ಪುತ್ತಿಲ ಪರಿವಾರ ಪ್ರತಿಭಟನೆ ಹಿನ್ನಲೆ; ಪುತ್ತೂರು ಪೇಟೆಯಾಧ್ಯ0ತ ಆಮಂತ್ರಣ ಪತ್ರ ಹಂಚಿಕೆ- ಕಹಳೆ ನ್ಯೂಸ್

2012ರಲ್ಲಿ ಅತ್ಯಾಚಾರ ನಡೆದು ಕೊಲೆಯಾದ ಕುಮಾರಿ ಸೌಜನ್ಯ ಪ್ರಕರಣವನ್ನು ಸರ್ಕಾರ ಮರುತನಿಖೆ ನಡೆಸಿ ನೈಜ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಸೋಮವಾರ (ಆ.14) ರಂದು ಪುತ್ತಿಲ ಪರಿವಾರದ ವತಿಯಿಂದ ಪುತ್ತೂರಿನಲ್ಲಿ ಪಾದಯಾತ್ರೆ ಹಾಗೂ ಬೃಹತ್ ಪ್ರತಿಭಟನೆ ನಡೆಯಲಿದೆ. 

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ಪೇಟೆಯಲ್ಲಿ ಆ.12 ರಂದು ಪುತ್ತಿಲ ಪರಿವಾರದ ವತಿಯಿಂದ ಆಮಂತ್ರಣ ಪತ್ರಿಕೆ ವಿತರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಸೌಜನ್ಯಳಿಗೆ ನ್ಯಾಯ ಸಿಗಬೇಕೆಂಬ ನಿಟ್ಟಿನಲ್ಲಿ ಪುತ್ತೂರು ಪೇಟೆಯ ಅಂಗಡಿ ಮಾಲಕರು ಈ ಜಾಥದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಲಾಯಿತು.

ಆ.14 ರಂದು ಬೆಳಿಗ್ಗೆ 9.30 ಕ್ಕೆ ದರ್ಭೆಯಿಂದ ಹೊರಡುವ ಪಾದಯಾತ್ರೆ ಪುತ್ತೂರು ಬಸ್ ನಿಲ್ದಾಣದ ಸಮೀಪ ಪ್ರತಿಭಟನಾ ಸಭೆ ನಡೆಯಲಿದೆ.

ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ಪುತ್ತೂರಿನ ಅಂಗಡಿ ಮಾಲಕರು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಸೌಜನ್ಯ ಪ್ರಕರಣ ಅತೀ ಶೀಘ್ರವಾಗಿ ಮರುತನಿಖೆ ನಡೆಸಲು ಒತ್ತಾಯಿಸಬೇಕೆಂದು ಪುತ್ತಿಲ ಪರಿವಾರ ಮನವಿ ಮಾಡಿಕೊಂಡಿದೆ.