Friday, November 22, 2024
ಸುದ್ದಿ

ಭಾರೀ ಕುತೂಹಲ ಮೂಡಿಸುತ್ತಿರುವ ‘ದಿ ವಿಲನ್’ – ಕಹಳೆ ನ್ಯೂಸ್

ಪ್ರೇಮ್ ನಿರ್ದೇಶನದ ‘ದಿ ವಿಲನ್’ ಸಿನಿಮಾ ಭಾರಿ ಕುತೂಹಲ ಮೂಡಿಸಿದೆ. ಇಬ್ಬರು ಸ್ಟಾರ್ ನಟರು ಒಟ್ಟಿಗೆ ಅಭಿನಯಿಸಿರುವುದು ಇಷ್ಟೊಂದು ಹೈಪ್‍ಗೆ ಕಾರಣ. ಆದ್ರೆ, ಪ್ರೇಮ್ ಹೋದಲ್ಲಿ ಬಂದಲ್ಲಿ ಎಲ್ಲ ಕಡೆಯೂ ಎದುರಾಗುತ್ತಿರುವುದು ಒಂದೇ ಪ್ರಶ್ನೆ ‘ವಿಲನ್’ ಯಾರು.? ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ.

ಫಸ್ಟ್ ಲುಕ್, ಟೀಸರ್, ಹಾಡುಗಳು ಹೀಗೆ ಎಲ್ಲದರಲ್ಲಿಯೂ ‘ವಿಲನ್’ ಮತ್ತು ‘ರಾವಣ’ ಅಂತ ಹೇಳಿ ಹೇಳಿ ಪ್ರೇಮ್ ಕನ್ ಫ್ಯೂಸ್ ಮಾಡಿಬಿಟ್ಟಿದ್ದಾರೆ. ಯಾರು ವಿಲನ್, ಯಾರು ರಾವಣ ಇಬ್ಬರು ಸೂಪರ್ ಸ್ಟಾರ್ ನಟರನ್ನಿಟ್ಟು ಯಾವ ರೀತಿ ಕಥೆ ಮಾಡಿದ್ದಾರೆ ಎಂಬ ಕುತೂಹಲ ಕಾಡ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸದ್ಯಕ್ಕೆ ಜನರ ಮೈಂಡಲ್ಲಿರೋದು ಒಂದೇ. ಸುದೀಪ್ ‘ವಿಲನ್’, ಶಿವಣ್ಣ ‘ರಾವಣ’ ಅಂತ. ಇದನ್ನ ಹಾಡಿನಲ್ಲೂ ಸುಳಿವು ನೀಡಿದ್ದಾರೆ. ಸುದೀಪ್ ಸಾಂಗ್ ಎಂದು ಹೇಳಲಾಗುತ್ತಿರುವ ‘ಐ ಯಾಮ್ ವಿಲನ್’ ಒಂದು ಕಡೆಯಾದರೇ, ‘ರಾವಣಾ…..’ ಎಂಬ ಇನ್ನೊಂದು ಹಾಡು ಶಿವರಾಜ್ ಕುಮಾರ್ ಅವರಿಗೆ ಎನ್ನಲಾಗಿದೆ. ಅಲ್ಲಿಗೆ ವಿಲನ್ ಸುದೀಪ್, ರಾವಣ ಶಿವಣ್ಣ ಅಂತಾಯ್ತು. ಬಟ್, ಇಷ್ಟೆಲ್ಲಾ ಗೊಂದಲಗಳ ಮಧ್ಯೆ ಮತ್ತಷ್ಟು ವಿಷ್ಯಗಳು ಚರ್ಚೆಯಾಗ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

‘ದಿ ವಿಲನ್’ ಸಿನಿಮಾದಲ್ಲಿ ಸುದೀಪ್ ಮತ್ತು ಶಿವರಾಜ್ ಕುಮಾರ್ ಇಬ್ಬರದ್ದು ನೆಗಿಟೀವ್ ಪಾತ್ರಗಳೇ. ಒಬ್ಬರು ಪಾಸಿಟೀವ್ ಆಗಿ, ಮತ್ತೊಬ್ಬರು ನೆಗಿಟೀವ್ ಆಗಿ ಇಲ್ಲ. ಅಥವಾ ಒಬ್ಬರು ಪೊಲೀಸ್ ಮತ್ತೊಬ್ಬರ ಕಳ್ಳ ಅಂತಾನೂ ಇಲ್ಲ. ಬಹುಶಃ ಇಬ್ಬರು ಪಕ್ಕಾ ರೌಡಿಗಳೇ.

ಇಬ್ಬರು ಹೀರೋಗಳಲ್ಲಿ ವಿಲನ್ ಯಾರು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಬಹುಶಃ ಈ ಚಿತ್ರದಲ್ಲಿ ಇಬ್ಬರು ವಿಲನ್‍ಗಳೇ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇಬ್ಬರದ್ದು ನೆಗಿಟೀವ್ ಶೇಡ್ ಇರುವುದರಿಂದ ಇಬ್ಬರು ವಿಲನ್‍ಗಳೇ. ಲೋಕಲ್ ಇಂದ ಇಂಟರ್ ನ್ಯಾಷನಲ್ ಮಟ್ಟಕ್ಕೆ ಬೆಳೆಯೋ ಡಾನ್ ಗಳ ಕಥೆ ಇರಬಹುದು.

ದಿ ವಿಲನ್’ ಚಿತ್ರದ ಹಾಡುಗಳಲ್ಲಿ ರಾಮ-ರಾವಣನ ಕಥೆ ಹೇಳಲಾಗಿದೆ. ಅಷ್ಟೇ ಅಲ್ಲದೇ ಆರಂಭದಲ್ಲಿ ಬಿಡುಗಡೆಯಾಗಿದ್ದ ಮೋಷನ್ ಪೋಸ್ಟರ್ ನಲ್ಲಿ ಒಬ್ಬರೊಳಗೆ ಒಬ್ಬರ ಮುಖವಾಡ ಕಳಚಿತ್ತು. ಅಲ್ಲಿಗೆ, ಇಬ್ಬರಲ್ಲೂ ಒಬ್ಬ ರಾವಣ ಮತ್ತು ಇಬ್ಬರಲ್ಲೂ ಒಬ್ಬ ವಿಲನ್ ಇದ್ದಾನೆ ಎನ್ನುವುದು ಪಕ್ಕಾ.

ಟೀಸರ್ ಗಮನಿಸಿದ್ರೆ ಇದೊಂದು ಹಂಟಿಂಗ್ ಕಥೆ ಎನ್ನುವುದರ ಸುಳಿವು ಸಿಗುತ್ತಿದೆ. ಇಲ್ಲಿ ಸುದೀಪ್ ಮತ್ತು ಶಿವರಾಜ್ ಕುಮಾರ್ ನಡುವೆ ಹಂಟಿಂಗ್ ಇರಬಹುದು. ಯಾಕಂದ್ರೆ, ಸಿನಿಮಾದಲ್ಲಿ ನಿಖರವಾದ ವಿಲನ್ ಇಲ್ಲ. ಇವರಿಬ್ಬರ ನಡುವೆಯೇ ಕಥೆ ಸಾಗುತ್ತೆ. ಇಬ್ಬರ ಮಧ್ಯೆ ಆಮಿ ಜಾಕ್ಸನ್. ಇಡೀ ಸಿನಿಮಾಗೆ ಟ್ವಿಸ್ಟ್ ನೀಡುವಂತಹ ಪಾತ್ರ ಆಮಿ ಜಾಕ್ಸನ್ ಅವರದ್ದು ಇರಬಹುದು.
ಇಲ್ಲಿಯವರೆಗೂ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಮತ್ತು ತೆಲುಗು ನಟ ಶ್ರೀಕಾಂತ್ ಅವರ ಪಾತ್ರದ ಬಗ್ಗೆ ಸುಳಿವು ನೀಡಿಲ್ಲ. ಆದ್ರೆ, ಮಿಥುನ್ ಚಕ್ರವರ್ತಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಶ್ರೀಕಾಂತ್ ಅವರು ಬಹುಶಃ ತನಿಖಾಧಿಕಾರಿ ಇರಬಹುದು. ಆದ್ರೆ, ಪಕ್ಕಾ ಅಲ್ಲ. ಈ ಎಲ್ಲ ಕುತೂಹಲಕ್ಕೆ ಅಕ್ಟೋಬರ್ 18 ರಂದು ಬ್ರೇಕ್ ಬೀಳಲಿದೆ.