Recent Posts

Sunday, January 19, 2025
ಸಿನಿಮಾಸುದ್ದಿ

ತಮ್ಮ ಮುದ್ದು ಮಗಳ ಫೋಟೋ ಹಂಚಿಕೊಂಡ ಕಾಮಿಡಿ ಕಿಲಾಡಿ ಖ್ಯಾತಿಯ ನಟ ಸದಾನಂದ –ಕಹಳೆ ನ್ಯೂಸ್

ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕು ಸುಲ್ತಾನ್ಪುರ ಗ್ರಾಮದ ಸದಾನಂದ, ಜೀ ಕನ್ನಡದ ಕಾಮಿಡಿ ಕಿಲಾಡಿಗಳು ಶೋ ಮೂಲಕ ಜನರನ್ನು ರಂಜಿಸಿ ಮನೆಮಾತಾಗಿದ್ದರು. ವಿಶೇಷ ಎಂದರೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕೆಲವೇ ತಿಂಗಳಲ್ಲಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದ ಈ ದಂಪತಿ ತಾವು ಪೋಷಕರಾಗಿ ಬಡ್ತಿ ಪಡೆಯಲ್ಲಿದ್ದೇವೆ ಎಂಬ ಖುಷಿ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.ಇದೀಗ ತಮ್ಮ ಮುದ್ದು ಮಗಳ ಫೋಟೋ ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲಿರುವ ಸದಾ, ಕೊನೆಗೂ ತಮ್ಮ ಫ್ಯಾನ್ಸ್ ಗಳಿಗೆ ತಮ್ಮ ಪುಟ್ಟದೇವತೆ ದರ್ಶನ ಮಾಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು.. ಇತ್ತೀಚೆಗೆ ಧಾರಾವಾಡದಲ್ಲಿ ಮಗಳ ನಾಮಕರಣ ಶಾಸ್ತ್ರ ಮಾಡಿದ್ದು, ‘ನನ್ನ ಮಗಳು ನಾಮಕರಣವಾಯಿತು ಅದ್ವಿಕಾ ಅಂತ ಹೆಸರಿಟ್ಟಿದ್ದೀವಿ ನಿಮ್ಮೆಲ್ಲರ ಆಶೀರ್ವಾದ ಈ ಕಂದನ ಮೇಲಿರಲಿ’ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ತಮ್ಮ ವೈವಾಹಿಕ ಜೀವನದ ಬಗ್ಗೆಯೂ ಹೇಳಿಕೊಂಡಿರುವ ಸದಾ, ತಮ್ಮ ಮನದ ಒಡತಿಯ ಗುಣಗಾನ ಮಾಡಿದ್ದು, ‘ನಿಜವಾದ ಪ್ರೀತಿ ಗೆಲುತ್ತದೆ ಅನ್ನುವುದಕ್ಕೆ ನಾವೇ ಸಾಕ್ಷಿ. ನಮ್ಮಿಬ್ಬರ ಪ್ರೀತಿಗೆ ಸಾಕ್ಷಿಯಾಗಿ ಮತ್ತಷ್ಟು ಸಂತೋಷ ಕೊಡಲು ಮಗಳು ಅದ್ವಿಕಾ ಬಂದಿದ್ದಾಳೆ’ ಎಂದು ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇವರಿಬ್ಬರ ಪ್ರಪಂಚಕ್ಕೆ ಪುಟ್ಟ ದೇವತೆಯು ಸೇರಿಕೊಂಡಿದ್ದು, ನಿಮ್ಮ ಕುಟುಂಬ ಹೀಗೆ ಸಂತೋಷದಿಂದ ಕೂಡಿ ಬಾಳಲಿ ಎಂದು ಸದಾ ಅವರ ಅಭಿಮಾನಿಗಳು ಹಾರೈಸಿದ್ದಾರೆ. ಇನ್ನು ನಟ ಸದಾನಂದ ಬಹಳ ಸರಳವಾಗಿ ದೇವಸ್ಥಾನದಲ್ಲಿ ವಿವಾಹವಾಗಿದ್ದು, ಕೇವಲ ಕೆಲ ಸ್ನೇಹಿತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ಮಾಡಿಕೊಂಡಿದ್ದರು.

ಅಭಿಮಾನಿಗಳು ನೆಚ್ಚಿನ ನಟನಿಗೆ ಹೊಸ ಜೀವನದ ಶುಭಾಷಯ ಕೋರಿದ್ದರು. ತಮ್ಮ ಅದ್ಭುತ ನಟನೆಯಿಂದ ಗಮನ ಸೆಳೆದಿದ್ದ ನಟ ಸದಾನಂದ ಹಲವಾರು ಸೀರಿಯಲ್ ಮತ್ತು 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು, ಮತ್ತಷ್ಟು ಚಿತ್ರಗಳಲ್ಲಿ ನಟಿಸುವ ಆಸೆ ಹೊಂದಿದ್ದಾರೆ.