Monday, November 25, 2024
ಸುದ್ದಿ

ಸಾಯುತ್ತಿರುವ ಪತ್ನಿಯ ಕೊನೆ ಆಸೆ ಕೇಳಿ ಶಾಕ್ ಆದ ಪತಿರಾಯ : ಇಂತಹ ಆಸೆನೂ ಇರುತ್ತಾ..!? – ಕಹಳೆ ನ್ಯೂಸ್

ನಾವು ಅತಿಯಾಗಿ ಪ್ರೀತಿಸುವ ವ್ಯಕ್ತಿಗಳು ನಮ್ಮಿಂದ ದೂರಾ ಆಗ್ತಾರೆ ಅಂದ್ರೆ ನಮಗೆ ಸಹಿಸಲಾಗದ ನೋವು ಕಾಡುತ್ತೆ ಅಲ್ವಾ.. ಅದ್ರಲ್ಲೋ ನಮ್ಮ ಪ್ರೀತಿಪಾತ್ರರಿಗೆ ಮಾರಣಾಂತಿಕ ಖಾಯಿಲೆ ಇದ್ದು ಸಾವನ್ನಪ್ಪುವ ಹಂತ ತಲುಪಿದ್ರೆ, ಅವರ ಕೊನೆಯ ಆಸೆಗಳನ್ನ ಈಡೆರಿಸುವ ಪ್ರಯತ್ನವನ್ನ ಮಾಡುತ್ತೇವೆ.. ಇದೇ ರೀತಿ ತನ್ನ ಪತ್ನಿಯ ಕೊನೆಯ ಆಸೆಯನ್ನ ಈಡೇರಿಸಲು ಹೊರಟ ಪತಿಯೊಬ್ಬ ಆಕೆಯ ಮಾತುಗಳನ್ನ ಕೇಳಿ ಶಾಕ್ ಆಗಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆತನ ಪತ್ನಿ ಕಳೆದ 10 ವರ್ಷಗಳಿಂದ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಆಕೆ ಕೇವಲ 9 ತಿಂಗಳು ಮಾತ್ರ ಬದುಕಬಹುದು ಎಂದು ವೈದ್ಯರು ಹೇಳಿದ್ರು. ಆದ್ರೆ ಗಂಡನ ಅತಿಯಾದ ಕಾಳಜಿಯಿಂದಾಗಿ ಆಕೆ ವೈದ್ಯರು ಹೇಳಿದ ಸಮಯಕ್ಕಿಂತಲೂ ಹೆಚ್ಚಿನ ಕಾಲ ಬದುಕಿದ್ದಳು. ಆಕೆಯನ್ನ ಇನ್ನಷ್ಟು ಪ್ರೀತಿಯಿಂದ ನೋಡಿಕೊಳ್ಳಬೇಕು ಎಂದು ಬಯಸಿದ ಪತಿ ಹೆಂಡತಿಯ ಕೊನೆಯ ಬಯಕೆಯನ್ನು ಈಡೇರಿಸಲು ಹೊರಟಿದ್ದ. ಆಕೆಯ ಬಳಿ ನಿನ್ನ ಕೊನೆಯ ಆಸೆ ಏನು ಎಂದು ಕೇಳಿದ್ದಾನೆ. ಇದಕ್ಕೆ ಆಕೆ ಉತ್ತರಿಸಿದ್ದನ್ನ ಕೇಳಿ ಶಾಕ್ ಆಗಿದ್ದಾನೆ.
ಗಂಡನ ಪ್ರಶ್ನೆಗೆ ಹೆಂಡತಿ, ತಾನು ಸಾಯುವ ಮೊದಲು ತನ್ನ ಮಾಜಿ ಪತಿ ಜೊತೆ ಲೈಂಗಿಕ ಸಂಬoಧ ಹೊಂದಲು ಬಯಸುವುದಾಗಿ ಹೇಳಿದ್ದಾಳೆ. ಇದನ್ನು ಕೇಳಿದ ಪತಿ ಶಾಕ್ ಆಗಿದ್ದಾನೆ. ತಾನು ಅತಿಯಾಗಿ ಪ್ರೀತಿಸಿದ ತನ್ನ ಹೆಂಡತಿ ಮಾಜಿ ಪತಿಯೊಂದಿಗೆ ಮಲಗಲು ಇಚ್ಚಿಸುತ್ತಿದ್ದಾಳೆ ಎಂದು ನಿರಾಶೆಗೊಂಡ ವ್ಯಕ್ತಿ, ಈ ವಿಚಾರವನ್ನ ರೆಡ್ಡಿಟ್ ಮೂಲಕ ತನ್ನ ನೋವನ್ನು ಹಂಚಿಕೊoಡಿದ್ದಾನೆ. ಇದಕ್ಕೆ ಅನೇಕರು ಬಗೆ ಬಗೆಯ ಕಮೆಂಟ್ ಮಾಡಿದ್ದಾರೆ.