Sunday, January 19, 2025
ಸುದ್ದಿ

ದಿಪಾವಳಿಗೆ ಜಿ.ಎಸ್.ಟಿ. ಗಿಫ್ಟ್ ನೀಡಿದ ಮೋದಿ ಸರಕಾರ.!

ನವದೆಹಲಿ: ದೀಪಾವಳಿ ಹಬ್ಬಕ್ಕೆ ಕೆಲದಿನ ಮುನ್ನವೇ ಕೇಂದ್ರ ಸರ್ಕಾರ ದೇಶದ ಜನತೆಗೆ ಉಡುಗೊರೆ ನೀಡಿದೆ. ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ನಡೆದ ಸರಕು ಹಾಗೂ ಸೇವಾ ತೆರಿಗೆ (ಜಿಎಸ್​ಟಿ) ಸಭೆಯಲ್ಲಿ ಹಲವು ದಿನಬಳಕೆಯ ವಸ್ತು ಸಹಿತ 27 ಬಗೆಯ ಸರಕುಗಳ ಮೇಲಿನ ತೆರಿಗೆ ಇಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಜತೆಗೆ ಆರ್ಥಿಕ ಪ್ರಗತಿಗೆ ಒತ್ತು ನೀಡುವ ಉದ್ದೇಶದಿಂದ ರಫ್ತುದಾರರು ಹಾಗೂ ಸಣ್ಣ ಉದ್ದಿಮೆದಾರರಿಗೂ ಬಂಪರ್ ಕೊಡುಗೆ ನೀಡಲಾಗಿದೆ. ಜಿಎಸ್​ಟಿ ದರ ಪರಿಶೀಲನೆ ಕುರಿತು ಇತ್ತೀಚೆಗಷ್ಟೇ ಸಚಿವ ಜೇಟ್ಲಿ ಸುಳಿವು ನೀಡಿದ್ದರು. ದೇಶದ ಆರ್ಥಿಕತೆ ಕುಸಿಯುತ್ತಿದ್ದು, ಇದನ್ನು ತಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಹೆಜ್ಜೆ ಇರಿಸಿದೆ ಎನ್ನಲಾಗಿದೆ.

3 ತಿಂಗಳಿಗೊಮ್ಮೆ ರಿಟರ್ನ್ಸ್ ಸಲ್ಲಿಕೆ: ಸಣ್ಣ ವ್ಯಾಪಾರಸ್ಥರು, ಕೈಗಾರಿಕೆಗಳು ಮತ್ತು ವಹಿವಾಟುದಾರರು ಸೇರಿ ವಾರ್ಷಿಕವಾಗಿ 1.5 ಕೋಟಿ ರೂ.ಗಿಂತ ಕಡಿಮೆ ವಹಿವಾಟು ಹೊಂದಿರುವವರು ತ್ರೖೆಮಾಸಿಕದ ಕೊನೆಯಲ್ಲಿ (3 ತಿಂಗಳಿಗೊಮ್ಮೆ) ರಿಟರ್ನ್ಸ್ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಸಂಯೋಜಿತ ಯೋಜನೆಗೆ ಒಳಪಡದ 1.5 ಕೋಟಿ ರೂ.ಗಿಂತ ಕಡಿಮೆ ವಹಿವಾಟು ಹೊಂದಿರುವ ವ್ಯಾಪಾರಸ್ಥರು, ವಹಿವಾಟುದಾರರಿಗೂ ಈ ಸೌಲಭ್ಯ ಸಿಗಲಿದೆ. 1.5 ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟು ಹೊಂದಿರುವವರು ಪ್ರತಿ ತಿಂಗಳೂ ರಿಟರ್ನ್ಸ್ ಸಲ್ಲಿಸಬೇಕಾಗುತ್ತದೆ ಎಂದು ವಿತ್ತ ಸಚಿವರು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

# ರಫ್ತುದಾರರಿಗೆ 6 ತಿಂಗಳ ಅವಧಿಗೆ ಐಜಿಎಸ್​ಟಿ ಪಾವತಿಯಿಂದ ವಿನಾಯಿತಿ
# ರಫ್ತುದಾರರಿಗೆ ಕೊಡಬೇಕಾದ ಜುಲೈನ ಹಿಂಪಾವತಿ ಚೆಕ್​ಅ.10ರಿಂದ ಮತ್ತು ಆಗಸ್ಟ್ ತಿಂಗಳ ಚೆಕ್​ಗಳನ್ನು ಅ.18ಕ್ಕೆ ವಿತರಣೆ
ಮ್ಯಾರಾಥಾನ್ ಸಭೆ: ನವದೆಹಲಿಯಲ್ಲಿ ನಡೆದ ಜಿಎಸ್​ಟಿ ಮಂಡಳಿಯ 22ನೇ ಸಭೆ ಬೆಳಗ್ಗೆ 10.30ರಿಂದ ರಾತ್ರಿ 8ರವರೆಗೆ ನಡೆಯಿತು. ಸಣ್ಣ ವ್ಯಾಪಾರಸ್ಥರು, ಕೈಗಾರಿಕೆಗಳ ಸಮಸ್ಯೆ ಬಗ್ಗೆ ಪ್ರಮುಖವಾಗಿ ರ್ಚಚಿಸಲಾಯಿತು.
ಚಿನ್ನ ಖರೀದಿಗೆ ಪ್ಯಾನ್ ಬೇಕಿಲ್ಲ
50 ಸಾವಿರ ರೂ.ಗಿಂತ ಹೆಚ್ಚಿನ ಚಿನ್ನ ಖರೀದಿ ಮಾಡುವ ಗ್ರಾಹಕರು ಪ್ಯಾನ್​ಕಾರ್ಡ್ ಸಲ್ಲಿಸುವುದು ಕಡ್ಡಾಯ ಎಂಬ ನಿಯಮವನ್ನು ತಾತ್ಕಾಲಿಕವಾಗಿ ರದ್ದುಗೊಳಿಸ ಲಾಗಿದೆ. ಈ ಸಂಬಂಧ ಈ ಹಿಂದೆ ಹೊರಡಿಸಿದ್ದ ಅಧಿಸೂಚನೆ ಯನ್ನು ತಾತ್ಕಾಲಿಕ ವಾಗಿ ರದ್ದುಗೊಳಿಸ ಲಾಗಿದೆ. ಹೊಸ ಅಧಿಸೂಚನೆ ಹೊರ ಬೀಳುವವರೆಗೂ 50 ಸಾವಿರ ರೂ. ಮೌಲ್ಯದ ಚಿನ್ನದ ಖರೀದಿಗೆ ಪ್ಯಾನ್​ಕಾರ್ಡ್ ಕಡ್ಡಾಯ ಸಲ್ಲಿಕೆ ನಿಯಮ ರದ್ದಾಗಲಿದೆ ಎಂದು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response