Monday, November 25, 2024
ಸುದ್ದಿ

ದ,ಕ ಬಿಜೆಪಿ ಶಾಸಕರ ಹಕ್ಕಿನ ರಕ್ಷಣೆಗೆ ಬದ್ದ ಎಂದ ಡಿಸಿ ಮುಲ್ಲೈ ಮುಗಿಲನ್ : ತಾತ್ಕಾಲಿಕವಾಗಿ ಧರಣಿ ವಾಪಾಸ್ ಪಡೆದ ಬಿಜೆಪಿ : ಮತ್ತೆ ಪ್ರತಿಭಟನೆಯ ಎಚ್ಚರಿಕೆ.. – ಕಹಳೆ ನ್ಯೂಸ್

ಮಂಗಳೂರು : ಅಧಿಕಾರದಾಹಿ ಕಾಂಗ್ರೆಸ್ ಸರಕಾರ ಅಧಿಕಾರಿಗಳನ್ನು ತನ್ನ ಕಪಿ ಮುಷ್ಠಿಯಲ್ಲಿಟ್ಟುಕೊಂಡು ,ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಶಾಸಕರ ಹಕ್ಕಿಗೆ ಚ್ಯುತಿಯಾಗುತ್ತಿದೆ ಎಂದು ಶಾಸಕರ ಹಕ್ಕಿನ ರಕ್ಷಣೆಗೆ ಒತ್ತಾಯಿಸಿ ಇಂದು ಜಿಲ್ಲೆಯ ಬಿಜೆಪಿ ಶಾಸಕರು ಹಾಗೂ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಮುಂಬಾಗ ದರಣಿ ಪ್ರತಿಭಟನೆ ನಡೆಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೂಡುಬಿದಿರೆ ಕ್ಷೇತ್ರದ ಇರುವೈಲ್ ಹಾಗೂ ಬಂಟ್ವಾಳ ಕ್ಷೇತ್ರದ ಇರ್ವತ್ತೂರು ಗ್ರಾಮ ಪಂಚಾಯತ್‌ನ ಉದ್ಘಾಟನಾ ಕಾರ್ಯಕ್ರಮವನ್ನು ಶಿಷ್ಟಾಚಾರ ನೆಪದಲ್ಲಿ ರದ್ಡು ಪಡಿಸಿ ಅಧಿಕಾರಿಗಳನ್ನು ಮಾನತುಗೊಳಿಸಿರುವುದನ್ನು ಖಂಡಿಸಿ ಅಧಿಕಾರಿಗಳ ಅಮಾನತು ಆದೇಶ ಹಿಂಪಡೆಯುವುದು ಹಾಗೂ ಶಾಸಕರ ಹಕ್ಕಿನ ರಕ್ಷಣೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.

ದ.ಕ ಡಿಸಿಯನ್ನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ತರಾಟೆಗೆ ತೆಗೆದುಕೊಂಡಿದ್ದಾರೆ. ಅಮಾನತು ಆದೇಶ ಯಾರು ಮಾಡಿದ್ಸು, ಕಾರ್ಯಕ್ರಮ ನಿಲ್ಲಿಸಿದ್ದು ಯಾರು? ಪ್ರೊಟೋಕಾಲ್ ಪ್ರಕಾರ ಉಸ್ತುವಾರಿ ಸಚಿವರ ಹೆಸರು ಹಾಕಿಲ್ವಾ? ಈ ಎರಡೂ ಕಾರ್ಯಕ್ರಮ ನಿಲ್ಲಿಸಿದ್ದು ಯಾರು ಹಾಗಾದ್ರೆ. ಅಧಿಕಾರಿಗಳ ಅಮಾನತು ಆದೇಶ ಮಾಡಿದವರು ಯಾರು? ಶಾಸಕರು ಪಂಚಾಯತ್‌ಗೆ ಹೋದಾಗ ಪೊಲೀಸ್ ಹಾಕಿದ್ದು ಯಾರು? ಒಬ್ಬ ಶಾಸಕನ ಹಕ್ಕುಚ್ಯುತಿ ಮಾಡಲು ಆದೇಶ ಯಾರು ಕೊಟ್ಟದ್ದು? ಭ್ರಷ್ಟಾಚಾರ ಮಾಡಿದವರನ್ನ ನೀವು ಸಸ್ಪೆಂಡ್ ಮಾಡಿಲ್ಲ. ಹಳೆಯಂಗಡಿ ಪಂಚಾಯತ್‌ನಲ್ಲಿ ಕಾಂಗ್ರೆಸ್‌ನವರು ಚುನಾವಣೆಗೆ ತಡೆ ಮಾಡಿದ್ದಾರೆ. ಇದರ ಜೊತೆಗೆ ಕಾಂಗ್ರೆಸ್ ಮುಖಂಡನ ಪತ್ರಕ್ಕೆ ಆದೇಶ ಮಾಡಿದ್ದೀರಿ. ನಾನು ರಾಜ್ಯಾಧ್ಯಕ್ಷನಾಗಿ ಈವರೆಗೆ ಯಾವುದೇ ಪತ್ರ ಕೊಟ್ಟಿಲ್ಪ. ಆದರೆ ಒಬ್ಬ ಕಾಂಗ್ರೆಸ್ ಮುಖಂಡನ ಪತ್ರಕ್ಕೆ ನೀವು ಆದೇಶ ಮಾಡಿದ್ದೀರಿ. ನಿಮ್ಮ ತಹಶಿಲ್ದಾರ್‌ಗೆ ಈ ರೀತಿ ಉಲ್ಲೇಖ ಮಾಡಿ ಯಾಕೆ ಆದೇಶ ಮಾಡಿದ್ರಿ. ಸರ್ಕಾರ ಇಲ್ಲಿ ಯಾರು ನಡೆಸ್ತಾರೆ, ಎಂದು ಪ್ರಶ್ನಿಸಿದ್ದಾರೆ.

ನಳಿನ್ ಕುಮಾರ್ ಕಟೀಲ್ ಅವರ ಪ್ರಶ್ನೆಗೆ ದ.ಕ ಡಿಸಿ ಮುಲ್ಲೈ ಮುಗಿಲನ್ ಉತ್ತರಿಸಿದ್ದು, ಗ್ರಾಮ ಪಂಚಾಯತ್ ಕಾರ್ಯಕ್ರಮದ ಬಗ್ಗೆ ಸರ್ಕಾರದಲ್ಲಿ ಯಾವುದೇ ಗೈಡ್ ಲೈನ್ಸ್ ಇಲ್ಲ. ಹಾಗಾಗಿ ಸರ್ಕಾರಕ್ಕೆ ಪತ್ರ ಬರೆದು ಈ ಬಗ್ಗೆ ನಿಯಮ ಕೇಳಿದ್ದೇವೆ ಎಂದ್ರು. ಈ ವೇಳೆ ಡಿಸಿ ಮಾತಿನ ವಿರುದ್ದ ಮತ್ತೆ ಹರಿಹಾಯ್ದ ಬಿಜೆಪಿ ಶಾಸಕರು ನಿಮಗೆ ಶಿಷ್ಟಾಚಾರ ಇಲ್ಲಾಂದ್ರೆ ನೀವು ಕಾರ್ಯಕ್ರಮ ಯಾಕೆ ನಿಲ್ಲಿಸಿದ್ರಿ ಎಂದ ಪ್ರಶ್ನಿಸಿದ್ರು. ಡಿಸಿ ಕಚೇರಿಯಿಂದ ಬಂದ ಕಾರ್ಯಕ್ರಮ ರದ್ದು ಆದೇಶ ಓದಿದ ನಳಿನ್ ಕಟೀಲ್, ಇದರಲ್ಲಿ ಶಿಷ್ಟಾಚಾರ ಮಿಸ್ಟೆಕ್ ಎಲ್ಲಿದೆ ಎಂದು ಕೇಳಿದ್ದಾರೆ. ಈ ವೇಳೆ ಡಿಸಿ ಮುಗಿಲನ್ ಅವರು ಕ್ರಮದ ಭರವಸೆ ನೀಡಿ, ಅಮಾನತು ಆದೇಶ ಕೂಡ ಇವತ್ತು ವಾಪಸ್ ಆಗುತ್ತೆ, ಮುಂದಿನ ದಿನಗಳಲ್ಲಿ ಶಿಷ್ಟಾಚಾರ ವಿಚಾರದಲ್ಲಿ ಗೊಂದಲ ಆಗಲ್ಲ ಎಂದಿದ್ದಾರೆ. ಡಿಸಿ ಭರವಸೆ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರು ಧರಣಿ ಕೈ ಬಿಟ್ಟಿದ್ದಾರೆ.

ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ ದ್ವೇಷದ ರಾಜಕಾರಣ ಮಾಡ್ತಾ ಇದೆ. ಶಾಸಕರ ಹಕ್ಕುಗಳ ಚ್ಯುತಿ ಮಾಡುವ ಕೆಲಸ ಆಗ್ತಿದೆ. ಒಂದು ಪಕ್ಷದ ಕೆಲ ನಾಯಕರ ಮಾತು ಕೇಳಿ ಚ್ಯುತಿ ಮಾಡಲಾಗಿದೆ. ಮೂಡಬಿದ್ರೆಯ ಇರುವೈಲ್ ಹಾಗೂ ಬಂಟ್ವಾಳದಲ್ಲಿ ಅಧಿಕಾರಿಗಳು ಶಿಷ್ಟಾಚಾರ ಪ್ರಕಾರ ಆಮಂತ್ರಣ ಕೊಟ್ಟಿದ್ದಾರೆ. ಆದರೆ ಡಿಸಿ ಕಚೇರಿಯಿಂದ ಏಕಾಏಕಿ ಕಾರ್ಯಕ್ರಮ ರದ್ದು ಮಾಡಲಾಗಿದೆ. ಬಿಜೆಪಿಯ ಆರೂ ಶಾಸಕರ ಕ್ಷೇತ್ರಗಳಲ್ಲಿ ಹಸ್ತಕ್ಷೇಪ ಮಾಡಲಾಗ್ತಿದೆ. ಜಿಲ್ಲಾಧಿಕಾರಿಗಳು ಇವತ್ತು ಬಂದು ಭರವಸೆ ಕೊಟ್ಟು ವಿನಂತಿ ಮಾಡಿದ್ದಾರೆ. ಹೀಗಾಗಿ ನಾವು ಈಗ ಧರಣಿ ವಾಪಸ್ ತೆಗೋತಿವಿ. ಇವತ್ತು ಸಂಜೆಯೊಳಗೆ ಅಮಾನತು ಆದೇಶ ವಾಪಸ್ ಪಡೆಯಬೇಕು. ಇಲ್ಲದೇ ಇದ್ದರೆ ನಾವು ನಾಳೆ ಮತ್ತೆ ಪ್ರತಿಭಟನೆ ಮಾಡ್ತೇವೆ ಎಂದು ಎಚ್ಚರಿಸಿದ್ದಾರೆ.