Recent Posts

Sunday, January 19, 2025
ಸುದ್ದಿ

3.45 ಲಕ್ಷ ಕೋಟಿ ಮೌಲ್ಯದ ಆಸ್ತಿಯೊಂದಿಗೆ ಅಗ್ರಸ್ಥಾನ ಪಡೆದ ಮುಕೇಶ್ ಅಂಬಾನಿ – ಕಹಳೆ ನ್ಯೂಸ್

ನವದೆಹಲಿ: ರಿಲಾಯನ್ಸ್ ಸಮೂಹದ ಮುಕೇಶ್ ಅಂಬಾನಿ ಅವರು ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ ಭಾರತದ 100 ಶ್ರೀಮಂತರ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ.

11ನೇ ಸಲ ಮುಕೇಶ್ ಅವರು ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಮುಕೇಶ್ ಅವರು 3.45 ಲಕ್ಷ ಕೋಟಿ ಮೌಲ್ಯದ ಆಸ್ತಿಯೊಂದಿಗೆ ಅಗ್ರಸ್ಥಾನ ಪಡೆದುಕೊಳ್ಳಲು ಯಶಸ್ವಿಯಾಗಿದ್ದಾರೆ. 1.53 ಲಕ್ಷ ಕೋಟಿ ಹೊಂದಿರುವ ವಿಪ್ರೋದ ಅಜೀಂ ಪ್ರೇಮ್ ಜಿ ಅವರು ಎರಡನೇ ಮತ್ತು ಲಕ್ಷ್ಮೀ ಮಿತ್ತಲ್ ಮೂರನೇ ಸ್ಥಾನದಲ್ಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಿಲಾಯನ್ಸ್ ಜಿಯೊ ಬ್ರಾಡ್ ಬ್ಯಾಂಡ್ ಟೆಲಿಕಾಂ ಸರ್ವೀಸಸ್ ಯಶಸ್ವಿಯಾದ ಬಳಿಕ ಮುಕೇಶ್ ಅವರು ಈ ವರ್ಷ ಸುಮಾರು 67,890 ಕೋಟಿ ರೂ. ಆಸ್ತಿ ಹೆಚ್ಚಿಸಿಕೊಂಡಿದ್ದಾರೆ ಎಂದು ಫೋರ್ಬ್ಸ್ ಹೇಳಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು