ಮೆಲ್ಕಾರ್ ಆರ್.ಟಿ.ಒ.ಕಚೇರಿಯಲ್ಲಿ ಕುರ್ಚಿ ಕೊರತೆ : ದೂರಿಗೆ ಸ್ಪಂದಿಸಿ ವ್ಯವಸ್ಥೆ ಕಲ್ಪಿಸಿದ ಆರ್.ಟಿ.ಒ.ಅಧಿಕಾರಿ ಚರಣ್ – ಕಹಳೆ ನ್ಯೂಸ್
ಬಂಟ್ವಾಳ: ಮೆಲ್ಕಾರ್ ಆರ್.ಟಿ.ಒ.ಕಚೇರಿಗೆ ತೆರಳಿದರೆ ಕುಳಿತುಕೊಳ್ಳಲು ಕುರ್ಚಿ ಇಲ್ಲ ಎಂಬ ದೂರಿಗೆ ಸ್ಪಂದಿಸಿದ ಇಲ್ಲಿನ ಆರ್.ಟಿ.ಒ.ಅಧಿಕಾರಿ ಕೂಡಲೇ ವ್ಯವಸ್ಥೆ ಕಲ್ಪಿಸಿದ ಬಗ್ಗೆ ವರದಿಯಾಗಿದೆ.
ಮೆಲ್ಕಾರ್ ಆರ್.ಟಿ.ಒ ಅಧಿಕಾರಿ ಚರಣ್ ಅವರು ಸಾರ್ವಜನಿಕರು ಕುಳಿತು ಕೊಳ್ಳಲು ಬೇಕಾದ ಕುರ್ಚಿ ಹಾಗೂ ಅರ್ಜಿ ಬರೆಯಲು ಒಂದು ಪ್ಲಾಸ್ಟಿಕ್ ಟೇಬಲ್‌ನ್ನು ಒದಗಿಸುವ ಮೂಲಕ ಮನವಿಗೆ ಸ್ಪಂದಿಸಿದ್ದಾರೆ ಎಂದು ಬಿ.ಎಮ್.ಎಸ್.ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ವಿಶ್ವನಾಥ ಚೆಂಡ್ತಿಮಾರ್ ಮಾಧ್ಯಮವರಿಗೆ ತಿಳಿಸಿದ್ದಾರೆ.
ಒಂದು ವಾರಗಳ ಹಿಂದೆ ಕಚೇರಿಯ ಕೆಲಸದ ನಿಮಿತ್ತ ಇವರು ಆರ್.ಟಿ.ಒ.ಗೆ ತೆರಳಿದ ಸಂದರ್ಭದಲ್ಲಿ ಅಲ್ಲಿ ಬಂದವರು ಎಲ್ಲರು ನಿಂತುಕೊoಡೆ ಕಚೇರಿ ಕೆಲಸ ಮಾಡುವುದನ್ನು ಗಮನಿಸಿದರು.
ಅರ್ ಟಿ.ಒ.ಗೆ ಸಂಬoಧಿಸಿದ ಅರ್ಜಿ ಬರೆಯುವುದರಿಂದ ಹಿಡಿದು ಪ್ರತಿ ಕೆಲಸಕ್ಕೆ ಇಲ್ಲಿ ದಣಿದವರಿಗೆ ಕುಳಿತು ಕೊಳ್ಳಲು ಅಗತ್ಯವಾಗಿ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಕುರ್ಚಿಗಳಿಲ್ಲದೆ ಕೊರೆತೆ ಕಂಡಿತ್ತು.
ಇದನ್ನು ಮನಗಂಡ ಚೆಂಡ್ತಿಮಾರ್ ಅವರು ಕೂಡಲೇ ಅಧಿಕಾರಿಯನ್ನು ಸಂಪರ್ಕಿಸಿ ಕುರ್ಚಿ ಗಳನ್ನು ಒದಗಿಸುವಂತೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಅಧಿಕಾರಿವರು ಇದೀಗ ವ್ಯವಸ್ಥೆ ಮಾಡಿದ್ದು, ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.