Tuesday, November 26, 2024
ಸುದ್ದಿ

ಚಂದ್ರನ ಮೇಲ್ಮೈಗೆ ಹತ್ತಿರವಾದ ಚಂದ್ರಯಾನ-3 ಬಾಹ್ಯಕಾಶ ನೌಕೆ – ಕಹಳೆ ನ್ಯೂಸ್

ಬೆಂಗಳೂರು : ಭಾರತದ ಮಹತ್ವಾಕಾಂಕ್ಷೆಯ ಮೂರನೇ ಚಂದ್ರಯಾನದ ಬಾಹ್ಯಾಕಾಶ ನೌಕೆ ಚಂದ್ರಯಾನ-3 ಇಂದು ಸೋಮವಾರ ಮತ್ತೊಂದು ಹೆಜ್ಜೆ ಮುಂದೆ ಹಾಕಿದ್ದು ಚಂದ್ರನ ಮೇಲ್ಮೈಗೆ ಇನ್ನಷ್ಟು ಹತ್ತಿರಕ್ಕೆ ಬಂದಿದೆ.

ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಸಮೀಪ್ಯತೆಯನ್ನು ಇಸ್ರೋ ಮತ್ತಷ್ಟು ಕಡಿಮೆ ಮಾಡಿದ್ದು, ಇಂದು ನಡೆಸಿದ ನಿಖರವಾದ ಕುಶಲತೆಯು 150 ಕಿಮೀ x 177 ಕಿಮೀಗಳ ಸಮೀಪ ವೃತ್ತಾಕಾರದ ಕಕ್ಷೆಯನ್ನು ಸಾಧಿಸಿದೆ ಎಂದು ಇಸ್ರೋ ಟ್ವೀಟ್‍ನಲ್ಲಿ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಂದಿನ ಕಾರ್ಯಾಚರಣೆಯನ್ನು ಆಗಸ್ಟ್ 16, 2023 ರಂದು ಬೆಳಿಗ್ಗೆ 8.30 ರ ಸುಮಾರಿಗೆ ಯೋಜಿಸಲಾಗಿದೆ” ಎಂದು ಇಸ್ರೋ ಹೇಳಿದೆ. ನಂತರ ಲ್ಯಾಂಡರ್ ಮತ್ತು ರೋವರ್ ನ್ನು ಒಳಗೊಂಡಿರುವ ಲ್ಯಾಂಡಿಂಗ್ ಮಾಡ್ಯೂಲ್ ಪ್ರೊಪಲ್ಷನ್ ಮಾಡ್ಯೂಲ್‍ನಿಂದ ದೂರ ಹೋಗಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಆ.23ರಂದು ಲ್ಯಾಂಡ್ ರೋವರ್ ಚಂದ್ರನತ್ತ ಇಳಿಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು