ಬೆಂಗಳೂರು: ದುರಂತ ಎಂದರೆ ಇದೇ ಇರಬೇಕು! ಉಪಮೇಯರ್ ಆಗಿ ಸೆ.28 ರಂದು ಆಯ್ಕೆಯಾಗಿ, ನಂತರ ಅ.3 ರಂದು ಅಧಿಕಾರ ವಹಿಸಿಕೊಂಡ ಮರುದಿನವೇ ರಮೀಳಾ ಉಮಾಶಂಕರ್(44) ನಿಧನರಾಗಿದ್ದಾರೆ.
ರಾತ್ರಿ ವೇಳೆ ತೀವ್ರವಾದ ಎದೆನೋವು ಕಾಣಿಸಿಕೊಂಢ ಹಿನ್ನೆಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಮಾಗಡಿರಸ್ತೆ ಹೌಸಿಂಗ್ ಬೋರ್ಡ್ ನಿವಾಸದಲ್ಲಿ ಸಾರ್ವಜನಿಕ ಅಂತಿಮ ನಮನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಉಪಮೇಯರ್ ಅವರ ಅಕಾಲಿಕ ಮರಣಕ್ಕೆ ನೂರಾರು ಗಣ್ಯರು ಕಂಬನಿ ಮಿಡಿದಿದ್ದಾರೆ. ಇನ್ನೂ ನಿಧನದ ಹಿನ್ನೆಲೆ ಪಾಲಿಕೆ ತನ್ನೆಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಇಂದು ರಜೆಯನ್ನು ಘೋಷಿಸಿದೆ. ಅವರ ಅಗಲಿಕೆ ತುಂಬಲಾರದ ನಷ್ಟ ಎಂದಿರುವ ಗಣ್ಯರು, ಉಪಮೇಯರ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.