ವಿಟ್ಲ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಬಂಟ್ವಾಳ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬುವಿನಲ್ಲಿ ಆ.08 ರಂದು ನಡೆದ ಜಿಲ್ಲಾಮಟ್ಟದ ಜಂಪ್ ರೋಪ್ ಸ್ಪರ್ಧೆಯಲ್ಲಿ ವಿದ್ಯಾನಗರ ಪೆರಾಜೆ -ಮಾಣಿಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಕು.ಕೃತಿ ಎನ್. ಪಿ ಹದಿನಾಲ್ಕರ ವಯೋಮಾನದ ಒಳಗಿನ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪಿಲಿಂಜ-ನೆಟ್ಲ ನಿವಾಸಿಗಳಾದ ದಿನೇಶ್ ಬಿ ಮತ್ತು ತೇಜಾಕ್ಷಿ ದಂಪತಿಗಳ ಸುಪುತ್ರಿಯಾಗಿರುವ ಕು.ಕೃತಿ ಎನ್. ಪಿ ಗೆ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ದಿನಕರ್ ಪೂಜಾರಿ ಹಾಗೂ ವಿಶಾಲಾಕ್ಷಿ ಹೆಚ್ ಆಳ್ವ ತರಬೇತಿ ನೀಡಿದ್ದಾರೆ.