Tuesday, November 26, 2024
ಸುದ್ದಿ

15 ಕೆಜಿ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರ ತೆಗೆದ ; ಮಧ್ಯ ಪ್ರದೇಶದ ಇಂದೋರ್‌ನ ಇಂಡೆಕ್ಸ್ ಆಸ್ಪತ್ರೆಯ ವೈದ್ಯರು – ಕಹಳೆ ನ್ಯೂಸ್

ಮಹಿಳೆಯೊಬ್ಬರ ಹೊಟ್ಟೆಯೊಳಗೆ ಇದ್ದ 15 ಕೆಜಿ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಮಧ್ಯ ಪ್ರದೇಶದ ಇಂದೋರ್ ನ ಇಂಡೆಕ್ಸ್ ಆಸ್ಪತ್ರೆಯ ವೈದ್ಯರು ತೆಗೆದು ಯಶಸ್ವಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಇಂದೋರ್‌ನ ಮಹಿಳೆ ಹೊಟ್ಟೆ ನೋವು ಮತ್ತು ತೀವ್ರ ಸುಸ್ತಾಗುತ್ತಿರುವ ಬಗ್ಗೆ ಮನೆಯವರಿಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಕರೆ ತರಲಾಗಿತ್ತು. ತಪಾಸಣೆ ನಡೆಸಿದಾಗ ಹೊಟ್ಟೆಯಲ್ಲಿ ಭಾರೀ ಗಾತ್ರದ ಗಡ್ಡೆ ಇರುವುದು ಪತ್ತೆಯಾಗಿತ್ತು.
ಈ ಗಡ್ಡೆಯ ಬೆಳವಣಿಗೆಯಿಂದಾಗಿ ಮಹಿಳೆಗೆ ಆಹಾರ ಸೇವಿಸುವುದಕ್ಕೂ ಕಷ್ಟವಾಗುತ್ತಿತ್ತು. ಎಂದು ಶಸ್ತ್ರ ಚಿಕಿತ್ಸೆಯ ನೇತೃತ್ವ ವಹಿಸಿದ್ದ ಡಾ. ಅತುಲ್ ವ್ಯಾಸ್ ಹೇಳಿದ್ದಾರೆ. ಈ ಗಡ್ಡೆ ತೆಗೆಯಲು 12 ವೈದ್ಯರು ಸುಮಾರು ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ್ದರು. ಗಡ್ಡೆ ಹಲವು ನರಗಳಿಗೆ ಅಂಟಿಕೊAಡಿತ್ತು. ಹೀಗಾಗಿ ಶಸ್ತ್ರ ಚಿಕಿತ್ಸೆ ಸಂಕೀರ್ಣವಾಗಿತ್ತು ಮತ್ತು ಚಿಕಿತ್ಸೆ ಯಶಸ್ವಿಯಾಗಿದ್ದು, ಮಹಿಳೆ ಆರೋಗ್ಯ ಹೊಂದುತ್ತಿದ್ದು, ಶೀಘ್ರ ಗುಣಮುಖರಾಗಿ ಮನೆಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು