Recent Posts

Sunday, January 19, 2025
ಸಿನಿಮಾಸುದ್ದಿ

‘ಆದಿ ಪುರಾಣ’ ಸಿನಿಮಾ ಇಂದು ತೆರೆಗೆ – ಕಹಳೆ ನ್ಯೂಸ್

ಬೆಂಗಳೂರು: ಇಂದು ಗಾಂಧಿನಗರಕ್ಕೆ ಹೊಸ ಹೊಸ ಸಿನಿಮಾಗಳು ಬರುವ ಶುಭದಿನ. ಅದೇ ರೀತಿ ಈ ವಾರ ಕೆಲ ಸಿನಿಮಾಗಳು ರಿಲೀಸ್ ಆಗಲು ಕಾದು ನಿಂತಿವೆ. ಆ ಪೈಕಿ ತನ್ನ ವಿಭಿನ್ನತೆಯ ಮೂಲಕ ಗಮನ ಸೆಳೆಯುತ್ತಿರುವ ಸಿನಿಮಾ ‘ಆದಿ ಪುರಾಣ’. ಈ ಬಗ್ಗೆ ಒಂದು ವರದಿ ನಿಮಗಾಗಿ..

‘ಆದಿ ಪುರಾಣ’ ಚಿತ್ರ ಇಂದು ರಾಜ್ಯಾದಂತ್ಯ ಬಿಡುಗಡೆಯಾಗುತ್ತಿದೆ. ಈಗಾಗಲೇ ಸಿನಿಮಾದ ಮೂರು ಪ್ರೀಮಿಯರ್ ಶೋಗಳು ಆಗಿದ್ದು, ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಟ್ರೇಲರ್ ಮತ್ತು ಹಾಡುಗಳ ಮೂಲಕ ಕುತೂಹಲ ಹುಟ್ಟಿಸಿದ್ದ ಈ ಸಿನಿಮಾ ಪ್ರೇಕ್ಷಕರ ನಿರೀಕ್ಷೆಯನ್ನ ಸುಳ್ಳು ಮಾಡಿಲ್ಲ. ಕನ್ನಡದಲ್ಲಿಯೂ ಶುರುವಾಯ್ತು ಕಿಸ್ಸಿಂಗ್ ಪುರಾಣ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೂರು ಯಶಸ್ವಿ ಪ್ರೀಮಿಯರ್ ಶೋ ಬೆಂಗಳೂರು, ಮೈಸೂರು ಹಾಗೂ ದಾವಣಗೆರೆಯಲ್ಲಿ ‘ಆದಿ ಪುರಾಣ’ ಚಿತ್ರದ ಪ್ರೀಮಿಯರ್ ಶೋ ನಡೆದಿದೆ. ಪ್ರೀಮಿಯರ್ ಶೋ ಹೌಸ್ ಫುಲ್ ಆಗಿದ್ದು, ಪ್ರೇಕ್ಷಕರ ಕಡೆಯಿಂದ ಬಂದ ಬೆಂಬಲ ಚಿತ್ರತಂಡದ ಬಲ ಹೆಚ್ಚಿಸಿದೆ. ಅನೇಕರು ಸಿನಿಮಾ ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಮಾತನ್ನ ಆಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಕ್ಕಾ ಎಂಟರ್ಟೈನ್ಮೆಂಟ್ ‘ಆದಿ ಪುರಾಣ’ ಈ ಜಮಾನದ ಸಿನಿಮಾವಾಗಿದ್ದು, ಪಕ್ಕಾ ಎಂಟರ್ಟೈನ್ಮೆಂಟ್ ನೀಡುತ್ತದೆಯಂತೆ. ಚಿತ್ರದಲ್ಲಿ ಮನರಂಜನೆ ಜೊತೆಗೆ ಒಂದು ಸಂದೇಶ ಕೂಡ ಇದೆ. ಆದಿ ಎಂಬ ಒಬ್ಬ ಹುಡುಗನ ಪ್ರೇಮ ಹಾಗೂ ಸಂಸಾರದ ಕಥೆ ಚಿತ್ರದಲ್ಲಿದ್ದು, ನೋಡುಗರಿಗೆ ಒಳ್ಳೆಯ ಮಜಾ ನೀಡಲಿದೆಯತೆ.

ಮೋಹನ್ ಕಾಮಾಕ್ಷಿ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಶಮಂತ್ ತಮ್ಮ ರೈನ್ ಬೋ ಪ್ರೊಡಕ್ಷನ್ಸ್ ನಲ್ಲಿ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಕಿಸ್ಸಿಂಗ್ ಸೀನ್ ಒಂದು ಪ್ರಮುಖ ಘಟ್ಟದಲ್ಲಿ ಬರಲಿದ್ದು, ಈ ಕಾರಣಕ್ಕೆ ಸಿನಿಮಾ ದೊಡ್ಡ ಸುದ್ದಿ ಮಾಡಿದೆ. ಯುವ ಮನಸ್ಸುಗಳ ಜೊತೆಗೆ ಫ್ಯಾಮಿಲಿಯವರಿಗೆ ಸಹ ಸಿನಿಮಾ ಇಷ್ಟ ಆಗಲಿದೆಯಂತೆ.

ಶಶಾಂಕ್ ಈ ಸಿನಿಮಾದ ನಾಯಕನಾಗಿದ್ದಾರೆ. ಅಹಲ್ಯಾ ಹಾಗೂ ಮೋಕ್ಷಕುಲಾಲ್ ಎಂಬ ಇಬ್ಬರು ನಾಯಕಿಯರು ಆದಿಗೆ ಜೋಡಿಯಾಗಿದ್ದಾರೆ. ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯುವನಟ ಆದಿತ್ಯ ಭಾರಧ್ವಜ್ ಎರಡನೇ ಸಿನಿಮಾ ಇದಾಗಿದೆ.