“ಪ್ರಪಂಚದಲ್ಲಿ ನಾಲ್ಕು ಕ್ಯಾಲೆಂಡರ್ ಗಳನ್ನು ಅನುಸರಿಸುವವರು ತುಳುವರು” : ಡಾ. ರಾಜೇಶ್ ಆಳ್ವ- ಕಹಳೆ ನ್ಯೂಸ್
ಬೆಂಗಳೂರು: ಪ್ರಪoಚದಲ್ಲಿ ನಾಲ್ಕು ಕ್ಯಾಲೆಂಡರ್ ಗಳನ್ನು ಅನುಸರಿಸುವವರು ತುಳುವರು ಎಂಧೂ ಡಾ. ರಾಜೇಶ್ ಆಳ್ವ ಹೇಳಿದ್ದರು. ತುಳುವರು ನಾಲ್ಕು ಕ್ಯಾಲೆಂಡರ್ ಗಳನ್ನು ಅನುಸರಿಸುತ್ತಿದ್ದಾರೆ ಒಂದು ಸಂವತ್ಸರಾಧಾರಿತ ಮತ್ತು ಸೂರ್ಯಮಾನಾದಾರಿತ ಸಂಸ್ಕೃತ ಕ್ಯಾಲೆಂಡರ್, ಸೂರ್ಯಮಾನಾದಾರಿತ ತುಳುವ ಕ್ಯಾಲೆಂಡರ್, ಚಂದ್ರಮಾನ ಆಧಾರಿತ ಕ್ಯಾಲೆಂಡರ್, ಅದೇ ರೀತಿ ಇಂಗ್ಲಿಷ್ ಕ್ಯಾಲೆಂಡರ್. ಈ ಕಾರಣದಿಂದಾಗಿ ತುಳುವರ ಆಚಾರ ವಿಚಾರ ಧರ್ಮ ಪರಿಪಾಲನೆಯಲ್ಲಿ ಸಂಪೂರ್ಣವಾಗಿ ಗೊಂದಲ ಇದೆ. ತುಳುವರು ಮೊದಲು ಸೂರ್ಯಾದಾರಿತ ಕಾಲ ನಿರ್ಣಯವನ್ನು ಮಾಡುತ್ತಿದ್ದರು. ಅದಕ್ಕೆ ಅನುಗುಣವಾಗಿ ಏಳು ವಾರಗಳು ಪಗ್ಗುವಿನಿಂದ ಸುಗ್ಗಿವರೆಗೆ ೧೨ ತಿಂಗಳುಗಳು ತುಳುವರಿಗೆ ಇದೆ. ಈ ಕ್ಯಾಲೆಂಡರ್ ನಲ್ಲಿ ಬರುವುದು ಸೂರ್ಯ ಆಧಾರಿತ ಪ್ರಕೃತಿಗೆ ಸಂಬAಧಪಟ್ಟ ಹಬ್ಬ ಹರಿದಿನಗಳು. ಬಾಕಿ ಎಲ್ಲಾ ಕ್ಯಾಲೆಂಡರ್ಗಳಲ್ಲಿ ಬರುವ ಹಬ್ಬಗಳು ವ್ಯವಹಾರಿಕವಾಗಿ ಲಾಭ ಗಳಿಸುತ್ತಿದ್ದಾರೆ. ತುಳುವರ ಎಲ್ಲಾ ಹಬ್ಬಗಳು ವ್ಯವಹಾರಿಕ ದೃಷ್ಟಿಕೋನದಿಂದ ದೂರ ಇದ್ದು ಪ್ರಕೃತಿಯ ಸಂರಕ್ಷಣೆಯನ್ನು ಪ್ರತಿಪಾದಿಸುತ್ತದೆ. ಯಾರಿಗೂ ಲಾಭವಿಲ್ಲದ ಕಾರಣದಿಂದಾಗಿ ತುಳುವರ ಹಬ್ಬ ಹರಿದಿನಗಳು ಸದ್ದಿಲ್ಲದೆ ಮರೆಯಾಗುತ್ತಿದೆ ಎಂದರು.