Sunday, November 24, 2024
ಕುಂದಾಪುರಸುದ್ದಿ

ಪೊಲೀಸರಿಂದ ಅಕ್ರಮ ಮರಳು ಸಾಗಾಟ ತಡೆಯಲು ಗಂಗೊಳ್ಳಿ ಕ್ರಮ – ಕಹಳೆ ನ್ಯೂಸ್

ಕುಂದಾಪುರ: ಅಕ್ರಮ ಮರಳು ಸಾಗಾಟ ತಡೆಯಲು ಗಂಗೊಳ್ಳಿ ಪೊಲೀಸರಿಂದ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಂಡಿದ್ದಾರೆ.ಗAಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂಬ ದೂರಿನ ಮೇರೆಗೆ ಠಾಣಾಧಿಕಾರಿ ನೇತೃತ್ವದಲ್ಲಿ ಮರಳು ಧಕ್ಕೆಯ ಪ್ರದೇಶದಲ್ಲಿ ವಾಹನ ಸಾಗದಂತೆ ಗುಂಡಿಯನ್ನು ತೋಡುವುದರ ಮೂಲಕ ತಡೆ ಹಾಕುವ ಕಾರ್ಯ ನಡೆದಿದೆ.

ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತ್ರಾಸಿ, ಮರವಂತೆ ಮೊವಾಡಿಯಲ್ಲಿ ಲ್ಲಿ ನದಿ ದಂಡೆಯ ಪ್ರದೇಶದ ವಿವಿಧೆಡೆ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದೆ ಎಂಬ ಸಾರ್ವಜನಿಕರ ದೂರಿನನ್ವಯ ಅದನ್ನು ತಡೆಯುವ ನಿಟ್ಟಿನಲ್ಲಿ ಠಾಣಾಧಿಕಾರಿ ಹರೀಶ್ ಆರ್ ಅವರ ನೇತೃತ್ವದಲ್ಲಿ ಜೆಸಿಬಿ ಮೂಲಕ ಮರಳು ಧಕ್ಕೆ ಹಾಗೂ ನದಿಗೆ ತಾಗಿಕೊಂಡಿರುವ ರಸ್ತೆಗೆ ಮಧ್ಯದಲ್ಲಿ ಗುಂಡಿಯನ್ನು ನಿರ್ಮಿಸುವುದರ ಮೂಲಕ, ಧಕ್ಕೆಗೆ ತೆರಳುವ ರಸ್ತೆಯನ್ನು ಮಣ್ಣು ಹಾಕಿ ಮುಚ್ಚುವುದರ ಮೂಲಕ ತಡೆಯನ್ನು ಹಾಕಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಕ್ರಮ ಮರುಳುಗಾರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಹಕಾರದೊಂದಿಗೆ ರೌಂಡ್ಸ್ ಹಾಕುವುದರ ಮೂಲಕ ಎಲ್ಲಾ ನದಿ ಧಕ್ಕೆಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಅಲ್ಲದೆ ಒಂದು ವೇಳೆ ಎಲ್ಲಿಯಾದರೂ ಪೊಲೀಸರ ಮತ್ತು ಇಲಾಖೆಯ ಕಣ್ತತಪ್ಪಿಸಿ ಮರಳುಗಾರಿಕೆ ನಡೆಸಿ ಧಕ್ಕೆಗೆ ತಂದು ಹಾಕಿದ್ದಲ್ಲಿ ಅದನ್ನು ವಾಹನದ ಮೂಲಕ ಕೊಂಡೊಯ್ಯಲು ಸಾಧ್ಯವಾಗದಂತೆ ರಸ್ತೆಗೆ ಗುಂಡಿಯನ್ನು ತೋಡಿ ತಡೆ ಒಡ್ಡುವುದರ ಮೂಲಕ ಅಕ್ರಮದಲ್ಲಿ ಭಾಗಿಯಾದವರನ್ನು ಬಂಧಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಠಾಣಾಧಿಕಾರಿ ಹರೀಶ್ ಆರ್. ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು